CrimeNational

Pistol lady; ಪಾತ್ರೆಯಲ್ಲ, ಪಿಸ್ತೂಲ್‌ ತೊಳೆಯುತ್ತಾಳೆ ಈ ಮಹಿಳೆ!

ಭೋಪಾಲ್​; ಮಹಿಳೆಯರು ಮನೆ ಹಿತ್ತಲಲ್ಲಿ ಕುಳಿತು ಪಾತ್ರೆ ತೊಳೆಯುವುದನ್ನು ನೋಡಿರುತ್ತೀರಿ.. ಆದ್ರೆ ಇಲ್ಲೊಬ್ಬ ಮಹಿಳೆ ಪಾತ್ರೆ ತೊಳೆಯುವ ರೀತಿಯಲ್ಲಿ ಪಿಸ್ತೂಲ್‌ ತೊಳೆಯುತ್ತಿದ್ದಾಳೆ.. ಇದರ ವಿಡಿಯೋ ವೈರಲ್‌ ಆಗಿದ್ದು, ಪೊಲೀಸರಿಗೂ ಮಾಹಿತಿ ಮುಟ್ಟಿದೆ.. ಪೊಲೀಸರು ಆ ಫೋಟೋ ಲೊಕೇಷನ್‌ ಹುಡುಕಿ ಹೊರಟಾಗ ಅಲ್ಲಿ ಕಾನೂನು ಬಾಹಿರವಾಗಿ ಪಿಸ್ತೂಲ್‌ ತಯಾರಿಸುತ್ತಿದ್ದ ಫ್ಯಾಕ್ಟರಿಯೊಂದು ಪತ್ತೆಯಾಗಿದೆ.. ಇದನ್ನು ನೋಡಿ ಪೊಲೀಸರೇ ಹೌಹಾರಿದ್ದಾರೆ..

ಇದನ್ನೂ ಓದಿ; Headache; ಕ್ಷಣಗಳಲ್ಲಿ ತಲೆನೋವು ಕಡಿಮೆಯಾಗಬೇಕಾ..?

ಮಧ್ಯಪ್ರದೇಶದ ಮಹುವಾ ಪೊಲೀಸ್‌ ಠಾಣಾ ವ್ಯಾಪ್ತಿಯ ಗಣೇಶ್‌ಪುರ ಎಂಬಲ್ಲಿ ಈ ಘಟನೆ ನಡೆದಿದೆ.. ಪೊಲೀಸರು ದಾಳಿ ಇಡುವ ವಿಷಯ ಗೊತ್ತಾಗುತ್ತಿದ್ದಂತೆ ಕಾರ್ಖಾನೆ ಮಾಲೀಕ ಶಕ್ತಿ ಕಪೂರ್‌ ಅಲಿಯಾಸ್‌ ಚೋಟು ಎಲ್ಲಾ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ತನ್ನ ತಂದೆಯ ಜೊತೆ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ.. ಈ ವೇಳೆ ಇಬ್ಬರೂ ಬಿದ್ದು ಗಾಯಗೊಂಡಿದ್ದಾರೆ. ಶಕ್ತಿ ಕಪೂರ್‌ ಹಾಗೂ ಆತನ ತಂದೆ ಬಿಹಾರಿ ಲಾಲ್‌ನನ್ನು ಪೊಲೀಸರು ಬಂಧಿಸಿದ್ದು, ಗಾಯಗೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ..

ಇದನ್ನೂ ಓದಿ; ಇನ್ಫೋಸಿಸ್‌ ಫೌಂಡೇಶನ್‌ನಿಂದ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ

ಪಿಸ್ತೂಲ್‌ ತಯಾರಿಸಲು ಬಳಸುತ್ತಿದ್ದ ಕಚ್ಚಾ ವಸ್ತುಗಳು, 315 ಡಬಲ್‌ ಬ್ಯಾರಲ್‌ ಗನ್‌, 315 ಪಿಸ್ತೂಲ್‌ ಗಳನ್ನು ಪೊಲೀಸ್‌ ವಶಕ್ಕೆ ಪಡೆದಿದ್ದಾರೆ.. ಪಿಸ್ತೂಲ್‌ಗಳನ್ನು ತೊಳೆಯುತ್ತಿದ್ದದ್ದು ನನ್ನ ಪತ್ನಿ ಎಂದು ಶಕ್ತಿ ಕಪೂರ್‌ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ..‌

Share Post