BengaluruCrime

ನಟ ದರ್ಶನ್‌ಗೆ ಸದ್ಯಕ್ಕೆ ಜೈಲೂಟವೇ ಫಿಕ್ಸ್‌; ಜುಲೈ 18ಕ್ಕಾದರೂ ಸಿಗುತ್ತಾ ಮನೆಯೂಟ?

ಬೆಂಗಳೂರು; ಮನೆ ಊಟ ಸೇರಿದಂತೆ ಹಲವು ಸೌಲಭ್ಯ ಕೋರಿದ್ದ ನಟ ದರ್ಶನ್‌ಗೆ ಕೊಂಚ ನಿರಾಸೆಯಾಗಿದೆ.. ಜುಲೈ 18ರವೆರಗೆ ದರ್ಶನ್‌ ಅವರು ಜೈಲೂಟವನ್ನೇ ಮಾಡಬೇಕಾಗಿದೆ.. ಯಾಕಂದ್ರೆ ಕೋರ್ಟ್‌ ಜುಲೈನಲ್ಲಿ 18ರಂದು ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ..

ಇದನ್ನೂ ಓದಿ;ಮೊಮ್ಮಗ ಆತ್ಮಹತ್ಯೆ ಮಾಡಿಕೊಂಡ; ಮೃತದೇಹ ನೋಡಿದ ಅಜ್ಜನಿಗೆ ಹೃದಯಾಘಾತ!

ನಟ ದರ್ಶನ್‌ ಅವರಿಗೆ ಜೈಲೂಟ ಸೇರುತ್ತಿಲ್ಲ. ತಿಂದ ಅನ್ನ ಜೀರ್ಣವಾಗುತ್ತಿಲ್ಲ. ಇದರಿಂದಾಗಿ ಬೇಧಿಯಾಗುತ್ತಿದ್ದು, ಸುಮಾರು ಹತ್ತು ಕೆಜಿ ಕಡಿಮೆಯಾಗಿದ್ದಾರೆ. ಈ ಕಾರಣದಿಂದ ಮನೆ ಊಟ, ಹಾಸಿಗೆ, ಪುಸ್ತಕದ ವ್ಯವಸ್ಥೆಗೆ ಅನುಮತಿ ನೀಡಬೇಕೆಂದು ದರ್ಶನ್‌ ಕೋರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ, ಈ ಪ್ರಕರಣವನ್ನು ಇತರ ಕೇಸ್‌ಗಳಂತೆ ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ.. ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿದ್ದಾರೆ. ಜೊತೆಗೆ ಜೈಲು ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದಾರೆ..

Share Post