HealthLifestyle

Honey; ಜೇನುತುಪ್ಪವನ್ನು ಹೀಗೆ ಸೇವಿಸಿದರೆ ವಿಷಕ್ಕೆ ಸಮಾನವಂತೆ!

ಬೆಂಗಳೂರು; ಜೇನುತುಪ್ಪದ ಸೇವನೆ ತುಂಬಾನೇ ಒಳ್ಳೆಯದು.. ಯಾರೂ ಕೂಡಾ ಜೇನು ತಿನ್ನಬೇಡಿ ಎಂದು ಹೇಳುವುದಿಲ್ಲ.. ದಿನವೂ ಒಂದಷ್ಟು ಜೇನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.. ಎಷ್ಟೋ ಕಾಯಿಲೆಗಳಿಗೆ ಜೇನು ರಾಮಬಾಣ.. ಆದ್ರೆ ಅದನ್ನು ಯಾವ ರೀತಿ ಸೇವಿಸುತ್ತೇವೆ ಎಂದು ಮುಖ್ಯವಾಗುತ್ತದೆ.. ಜೇನು ನೇರವಾಗಿ ಸೇವನೆ ಮಾಡಿದರೆ ತಪ್ಪೇನಿಲ್ಲ.. ಆದ್ರೆ ಕೆಲವರು ಕೆಲವು ಆಹಾರ ಪದಾರ್ಥಗಳ ಜೊತೆ ಸೇರಿಸಿ ಸೇವನೆ ಮಾಡುತ್ತಾರೆ.. ಆದ್ರೆ ಕೆಲ ಪದಾರ್ಥಗಳ ಜೊತೆ ಜೇನು ಸೇವಿಸೋದು ವಿಷಕ್ಕೆ ಸಮಾನವಂತೆ.. ಹಾಗಾದ್ರೆ ಯಾವುದರ ಜೊತೆ ಜೇನು ಸೇವಿಸಬಹುದು..? ಯಾವುದರ ಜೊತೆ ಸೇವಿಸಬಾರದು ಅನ್ನೋದನ್ನು ನೋಡೋಣ..
ಡ್ರೈಫ್ರೂಟ್ಸ್‌ ಜೊತೆ ಸೇವನೆ;
ಒಣಹಣ್ಣುಗಳು, ನಟ್ಸ್‌ ಜೊತೆ ಹಲವಾರು ಮಂದಿ ಜೇನು ತಿನ್ನುತ್ತಾರೆ.. ನಟ್ಸ್‌ ಜೊತೆ ಜೇನು ತಿನ್ನುವುದು ತುಂಬಾನೇ ಒಳ್ಳೆಯದು.. ವಾಲ್‌ನಟ್ಸ್‌, ಗೋಡಂಬಿ ಜೊತೆಗೂ ಜೇನು ಮಿಕ್ಸ್‌ ಮಾಡಿಕೊಂಡು ತಿನ್ನಬಹುದು.. ಇವುಗಳ ಮಿಶ್ರಣ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು..
ಹಣ್ಣುಗಳ ಜೊತೆ ಸೇವನೆ;
ಇನ್ನು ಫ್ರೆಶ್‌ ಹಣ್ಣುಗಳು ಜೊತೆಯೂ ಕೆಲವರು ಜೇನುತುಪ್ಪವನ್ನು ತಿನ್ನುತ್ತಾರೆ.. ಫ್ರೂಟ್‌ ಸಲಾಡ್‌ ತೆಗೆದುಕೊಂಡಾಗ ಅದರ ಮೇಲೆ ಜೇನು ತುಪ್ಪ ಹಾಕಿಕೊಡೋದನ್ನು ನೀವು ನೋಡಿರಬಹುದು.. ಹಣ್ಣುಗಳ ಜೊತೆಯೂ ಜೇನು ಸೇವನೆ ಮಾಡೋದು ತುಂಬಾನೇ ಒಳ್ಳೆಯದು.. ಸಿಟ್ರಸ್ ಹಣ್ಣುಗಳನ್ನು ಬಿಟ್ಟು ಸಾಮಾನ್ಯವಾಗಿ ಸೇವಿಸುವ ಹಣ್ಣುಗಳನ್ನು ಜೇನುತುಪ್ಪದೊಂದಿಗೆ ಬೆರೆಸಿ ಪ್ರಯತ್ನಿಸಬಹುದು.
ಕಾರ್ನ್ ಫ್ಲೇಕ್ಸ್ ಜೊತೆ ಸೇವನೆ;
ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೇಕ್ಸ್‌ ಹಾಕಿ ಅದಕ್ಕೆ ಜೇನುತುಪ್ಪ ಸೇರಿಸಿ ತಿನ್ನಬಹುದು. ಬೆಳಗ್ಗೆ ಬೇಗ ತಿಂದರೆ ಅದು ಒಳ್ಳೆಯ ತಿಂಡಿಯಾಗುತ್ತದೆ, ಜೊತೆ ಟೇಸ್ಟಿಯಾಗಿಯೂ ಇರುತ್ತದೆ.

ಜೇನುತುಪ್ಪವನ್ನು ಹೀಗೆ ಯಾವ ಕಾರಣಕ್ಕೂ ಬಳಸಬೇಡಿ;
ಬಿಸಿ ಮಾಡಿ ತಿನ್ನಬೇಡಿ;
ಜೇನುತುಪ್ಪ ಬಿಸಿ ಮಾಡಬಾರದು.. ಬಿಸಿ ಮಾಡಿದರೆ, ಅದರಲ್ಲಿನ ಪೌಷ್ಠಿಕಾಂಶಗಳನ್ನು ಕಳೆದುಕೊಳ್ಳುತ್ತದೆ.. ಜೇನುತುಪ್ಪವನ್ನು ಬಿಸಿ ಮಾಡಿದಾಗ, ಅದರಲ್ಲಿರುವ ಫ್ರಕ್ಟೋಸ್ ಸುಕ್ರೋಸ್ ಆಗಿ ನಿರ್ಜಲೀಕರಣಗೊಳ್ಳುತ್ತದೆ. ಜೊತೆಗೆ ಹೈಡ್ರಾಕ್ಸಿಮಿಥೈಲ್ಫ್ಯೂರಲ್ ಆಗಿಯೂ ಬದಲಾಗುತ್ತದೆ ಎಂದು ತಿಳಿದುಬಂದಿದೆ.. ಇವು ದೇಹದಲ್ಲಿ ವಿಷಪ್ರಮಾಣ ಜಾಸ್ತಿ ಮಾಡುತ್ತದೆ ಎಂದು ಹೇಳಲಾಗುತ್ತದೆ.. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಜಾಸ್ತಿ ಬಿಸಿ ಇರಿಯವ ನೀರಿನಲ್ಲಿ ಜೇನುತುಪ್ಪವನ್ನು ಹಾಕಿ ಕುಡಿಯಬೇಡಿ. ಆ ನೀರು ಕೇವಲ ಉಗುರುಬೆಚ್ಚಗಿರುವಂತೆ ನೋಡಿಕೊಳ್ಳಿ.
ತುಪ್ಪದೊಂದಿಗೆ ಮಿಶ್ರಣ;
ಆಯುರ್ವೇದ ಪಂಡಿತರ ಪ್ರಕಾರ, ತುಪ್ಪದೊಂದಿಗೆ ಜೇನುತುಪ್ಪವನ್ನು ಬೆರೆಸುವುದು ಒಳ್ಳೆಯದಲ್ಲ. ಎರಡನ್ನೂ ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಬಾರದು. ಅಗತ್ಯವಿದ್ದರೆ, ಎರಡು ಭಾಗ ತುಪ್ಪ ಮತ್ತು ಒಂದು ಭಾಗ ಜೇನುತುಪ್ಪ ಬೆರೆಸಬಹುದು. ಇದನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ ಎಂದೂ ಹೇಳಲಾಗುತ್ತದೆ.
ಮೂಲಂಗಿ;
ಅದೇ ರೀತಿ ಮೂಲಂಗಿಗೆ ಜೇನು ಬೆರೆಸುವುದು ಕೂಡ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ನಾವು ಸಲಾಡ್ ಮಾಡುವಾಗ ಮೂಲಂಗಿ ಮತ್ತು ಜೇನುತುಪ್ಪವನ್ನು ಒಟ್ಟಿಗೆ ತೆಗೆದುಕೊಳ್ಳಬಾರದು ಎಂದು ಅವರು ಹೇಳುತ್ತಾರೆ.
ಮಾಂಸಾಹಾರ;
ತಜ್ಞರ ಪ್ರಕಾರ ಜೇನುತುಪ್ಪದೊಂದಿಗೆ ಕೆಲವು ನಾನ್ ವೆಜ್ ಖಾದ್ಯಗಳನ್ನು ಸೇವಿಸುವುದು ಒಳ್ಳೆಯದು. ಆದರೆ, ಕೆಲವನ್ನು ಜೇನುತುಪ್ಪದೊಂದಿಗೆ ಬೆರೆಸಲೇಬಾರದು ಎಂದು ಹೇಳಲಾಗುತ್ತದೆ. ಮೀನುಗಳು ಅಂತಹ ಆಹಾರವನ್ನು ಜೇನುತುಪ್ಪದೊಂದಿಗೆ ತೆಗೆದುಕೊಳ್ಳಬಾರದು.

Share Post