ಈ ಆರು ರಾಶಿಗಳವರಿಗೆ ಹಣದ ಸಮಸ್ಯೆಯಿಂದ ಪೂರ್ತಿ ವಿಮುಕ್ತಿ!
ಜ್ಯೋತಿಷ್ಯವನ್ನು ವಿಜ್ಞಾನ ಎನ್ನುತ್ತಾರೆ.. ರಾಶಿ, ನಕ್ಷತ್ರಗಳ ಆಧಾರದ ಮೇಲೆ ಭವಿಷ್ಯವನ್ನು ಹೇಳಲಾಗುತ್ತದೆ.. ಪ್ರಸ್ತುತ ಗುರು ಮತ್ತು ಕುಜ ವೃಷಭ ರಾಶಿಯಲ್ಲಿ ಒಂದೇ ನಕ್ಷತ್ರದಲ್ಲಿ ಸಾಗುತ್ತಿದ್ದಾರೆ.. ಇದರಿಂದಾಗಿ ವೃಷಭ ರಾಶಿಯ ಜೊತೆಗೆ ಇನ್ನೂ ಐದು ರಾಶಿಗಳವರಿಗೆ ಆರ್ಥಿಕ ಸಂಕಷ್ಟದಿಂದ ಮುಕ್ತಿ ಸಿಗಲಿದೆ.. ಗುರು ಹಾಗೂ ಕುಜ ಗ್ರಹಗಳು ಹಣಕ್ಕೆ ಸಂಬಂಧಿಸಿದ ಗ್ರಹಗಳಾಗಿವೆ. ಅವು ವೃಷಭ ರಾಶಿಯಲ್ಲಿ ಒಟ್ಟಿಗೆ ಇದ್ದು, ಇದರಿಂದ ಧನಯೋಗ ಜಾಸ್ತಿಯಾಗುತ್ತದೆ.. ಆಗಸ್ಟ್ ನಾಲ್ಕರವರೆಗೆ ಮೇಷ, ವೃಷಭ, ಕರ್ಕಾಟಕ, ಕನ್ಯಾ, ವೃಶ್ಚಿಕ ಮತ್ತು ಮಕರ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗಲಿದೆ..
ಮೇಷ ರಾಶಿ;
ಮೇಷ ರಾಶಿಯವರಿಗೆ ಎಲ್ಲಾ ದಿಕ್ಕುಗಳಿಂದಲೂ ಸಂಪತ್ತಿನ ಹರಿವು ಇದೆ.. ನೀವು ಯಾವುದೇ ವಿಚಾರದಲ್ಲಿ ಕೈಹಾಕಿದರೂ ಅದ್ರಲ್ಲಿ ಗೆಲುವು ನಿಮ್ಮದಾಗುತ್ತದೆ.. ನೀವು ಬೇಡ ಅಂದರೂ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.. ಬೆಲೆಬಾಳುವ ಆಸ್ತಿಗಳು ನಿಮ್ಮ ಪಾಲಾಗುತ್ತವೆ.. ನಿಮ್ಮ ಆಸ್ತಿ ಮೌಲ್ಯ ದುಪ್ಪಟ್ಟಾಗುತ್ತೆ.. ನೀವು ಮಾಡುವ ವ್ಯವಹಾರದಲ್ಲಿ ದೊಡ್ಡ ಮೊತ್ತದ ಲಾಭ ಬರಲಿದೆ.. ಹಠಾತ್ ಆಗಿ ಹಣ ಕಾಸಿನ ವ್ಯವಸ್ಥೆ ಆಗುವುದರಿಂದ ನೀವು ಇಷ್ಟು ಅನುಭವಿಸಿದ ಹಣಕಾಸಿನ ತೊಂದರೆಗಳಿಂದ ಹೊರಬರುತ್ತೀರಿ.. ಆದ್ರೆ ಈಗ ಬಂದ ಹಣವನ್ನು ತುಂಬಾ ಯೋಚನೆ ಮಾಡಿ ಬಳಸಿಕೊಂಡರೆ ಮುಂದೆಂದೂ ನಿಮಗೆ ಸಮಸ್ಯೆಯಾಗದು.. ಮೈಮರೆತರೆ ಮತ್ತೆ ಕಷ್ಟವಾಗಬಹುದು..
ವೃಷಭ ರಾಶಿ;
ಗುರು ಮತ್ತು ಕುಜ ಈ ರಾಶಿಯಲ್ಲಿವೆ.. ಹೀಗಾಗಿ ನಿಮ್ಮ ಆದಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.. ಬರಬೇಕಾದ ಹಣ ಕೂಡಾ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.. ಹಣಕ್ಕಾಗಿ ಬಾಗಿಲು ತೆರೆದುಕೊಂಡು ಕೂತರೆ ಸಾಕು ನೀವು ಬೇಡ ಎಂದರೂ ಹಣ ನಿಮ್ಮ ಮನೆ ಸೇರುತ್ತದೆ.. ವಿವಾದಗಳೆಲ್ಲಾ ಬಗೆಹರಿಯುತ್ತವೆ.. ನಿಮ್ಮ ಹಣಕಾಸಿನ ಸಮಸ್ಯೆಗಳು ಏನಾದರೂ ಇದ್ದರೆ, ಅವೆಲ್ಲದಕ್ಕೂ ಪರಿಹಾರ ಸಿಗುತ್ತದೆ.. ವೃತ್ತಿ ಅಥವಾ ಬ್ಯುಸಿನೆಸ್ ಎರಡರಿಂದಲೂ ನಿಮಗೆ ದೊಡ್ಡ ಲಾಭವಾಗಲಿದೆ..
ಕರ್ಕಾಟಕ ರಾಶಿ;
ನಿಮಗೆ ನಿರೀಕ್ಷೆಗೂ ಮೀರಿ ಫಲಿತಾಂಶಗಳು ಸಿಗಲಿವೆ.. ಎಲ್ಲಾ ಕಡೆಯಿಂದಲೂ ನಿಮಗೆ ಆದಾಯ ಬರಲಿದೆ.. ಆದಾಯ ಹೆಚ್ಚುತ್ತಾ ಹೋಗುತ್ತದೆ… ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಒತ್ತಡಗಳು ಕಡಿಮೆಯಾಗುತ್ತವೆ.. ಹಠಾತ್ ಆಗಿ ನಿಮಗೆ ಹಣ ಹರಿವು ಹೆಚ್ಚಾಗಲಿದೆ.. ಸುಮ್ಮನೆ ನಿಮಗೆ ಹಣ ಬರಲಿದೆ.. ನಿಮಗೆ ಬರಬೇಕಾದ ಹಣ ಪೈಸೆ ಪೈಸೆಯೂ ವಾಪಸ್ ಬರಲಿದೆ..
ಕನ್ಯಾ ರಾಶಿ;
ನಿಮ್ಮ ಆದಾಯ ಆದಷ್ಟು ವೃದ್ಧಿಯಾಗುತ್ತದೆ.. ನಿಮ್ಮ ಶ್ರಮ ಮೀರಿ ನಿಮಗೆ ಆದಾಯ ಬರುತ್ತದೆ.. ನೀವು ಊಹೆ ಮಾಡದ ಕಡೆಯಿಂದಲೂ ನಿಮಗೆ ಬ್ಯುಸಿನೆಸ್ ಸಿಗಲಿದ್ದು, ಆದಾಯ ಬರುತ್ತದೆ.. ನಿಮಗೆ ಗೊತ್ತಿರುವ ಕ್ಷೇತ್ರದಲ್ಲಿ ನೀವು ಮುಂದುವರೆದರೆ ನಿಮಗೆ ದೊಡ್ಡ ಲಾಭವಾಗಲಿದೆ.. ದೀರ್ಘಾವಧಿಯಿಂದ ಸಾಲದ ಸುಳಿಯಲ್ಲಿ ಸಿಲುಕಿದವರು ಕೂಡಾ ಅದರಿಂದ ಹೊರಬರುವ ಸಮಯವಿದು.. ಸಾಲ ಮುಕ್ತರಾಗಿ ಬೇರೆಯವರಿಗೆ ಸಾಲ ನೀಡುವ ಕಾಲ ನಿಮಗೆ ಹತ್ತಿರವಾಗಿದೆ..
ವೃಶ್ಚಿಕ ರಾಶಿ;
ನಿಮಗೆ ಐಹಿಕ ಆಸ್ತಿ ಕೂಡಿ ಬರುತ್ತದೆ. ಭೂಮಿ ಮಾರಾಟದಿಂದ ಭಾರೀ ಆದಾಯ ನಿಮ್ಮದಾಗಲಿದೆ.. ಸ್ವಲ್ಪ ದಿನಗಳ ಕಾಲ ನೀವು ರಿಯಲ್ ಎಸ್ಟೇಟ್ ಮಾಡಿದರೂ ಒಳ್ಳೆಯ ಲಾಭ ಗಳಿಸುವುರಿ.. ಆಸ್ತಿ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಇದು ಸುಸಮಯ. ಬೆಲೆಬಾಳುವ ಆಸ್ತಿ ನಿಮ್ಮ ಸುಪರ್ದಿಗೆ ಬರಲಿದೆ.. ಇದರಿಂದ ನಿಮ್ಮ ಸ್ಟೇಟಸ್ ಒಮ್ಮೆಗೇ ಬದಲಾಗಿಬಿಡುತ್ತದೆ.. ವೃತ್ತಿಯಲ್ಲಾಗಲೀ ಹಾಗೂ ವ್ಯಾಪಾರದಲ್ಲಾಗಲೀ ನಿಮಗೆ ನಿರೀಕ್ಷೆ ಮೀರಿ ಲಾಭವಾಗಲಿದೆ..
ಮಕರ ರಾಶಿ;
ಉದ್ಯೋಗದಲ್ಲಿ ಸ್ಥಾನಮಾನ ಹೆಚ್ಚಳವಾಗುವ ಸಾಧ್ಯತೆ ಇದೆ.. ಸಂಬಳ ಹೆಚ್ಚಳವಾಗಲಿದೆ.. ಒಂದು ಯೋಜನೆಯ ಪ್ರಕಾರ ಗಳಿಕೆ ಮತ್ತು ಖರ್ಚು ಮಾಡುವುದರಿಂದ ಬ್ಯಾಂಕ್ ಸಾಲ ಮತ್ತು ಗೃಹ ಸಾಲಗಳನ್ನು ಕಡಿಮೆ ಮಾಡಬಹುದು. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದು ಮತ್ತು ಮಿತವ್ಯಯವನ್ನು ಅಭ್ಯಾಸ ಮಾಡುವುದರಿಂದ ಆದಾಯ ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ.