ನಾಯಿ ಮಾಂಸ ಸಾಗಾಟ ಆರೋಪ ಮಾಡಿ ಪ್ರೊಟೆಸ್ಟ್; ಪುನೀತ್ ಕೆರೆಹಳ್ಳಿ ಅಸ್ವಸ್ಥ!
ಬೆಂಗಳೂರು; ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕಳೆದ ರಾತ್ರಿ ದಾಳಿ ನಡೆದಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರೈಲಿನಲ್ಲಿ ರಾಜಸ್ಥಾನದಿಂದ ಮಾಂಸ ಪಾರ್ಸೆಲ್ ಬಂದಿತ್ತು.. ಅದು ಕುರಿ ಮಾಂಸ ಎಂದು ವ್ಯಾಪಾರಿ ಹೇಳುತ್ತಿದ್ದರೆ, ಪುನೀತ್ ಕೆರೆಹಳ್ಳಿ ತಂಡ ಅದು ನಾಯಿ ಮಾಂಸ ಎಂದು ಆರೋಪ ಮಾಡಿದೆ.. ಕಳೆದ ರಾತ್ರಿ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ಮೆಜೆಸ್ಟಿಕ್ನಲ್ಲಿ ದಾಳಿ ನಡೆಸಿ, ಮಾಂಸದ ಬಾಕ್ಸ್ಗಳನ್ನು ಸಾಗಾಟ ಮಾಡದಂತೆ ತಡೆದಿದ್ದಾರೆ.. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.. ಇತ್ತ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಾಂಸವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ..
ಇದನ್ನೂ ಓದಿ; ಸ್ಕೂಟಿಯಲ್ಲಿ ಹೋಗುವಾಗ ಕೇಳಿಸಿತು ಬುಸ್ ಬುಸ್ ಶಬ್ದ!; ಡಿಕ್ಕಿಯಲ್ಲಿತ್ತು ಹಾವಿನ ಮೊಟ್ಟೆಗಳು!
ಇನ್ನೊಂದೆಡೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಪುನೀತ್ ಕೆರೆಹಳ್ಳಿಯವರನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದರು.. ಪೊಲೀಸ್ ಕಸ್ಟಡಿಯಲ್ಲಿರುವಾಗ ಅವರು ಬೆಳಗಿನ ಜಾವ ತೀವ್ರ ಅಸ್ವಸ್ಥರಾಗಿದ್ದಾರೆ.. ಈ ಹಿನ್ನೆಲೆಯಲ್ಲಿ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ..
ಪುನೀತ್ ಕೆರೆಹಳ್ಳಿಯವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ತಿಳಿದುಬಂದಿದೆ.. ಹೀಗಾಗಿ ವೀಲ್ ಚೇರ್ನಲ್ಲಿ ಅವರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ..
ಇದನ್ನೂ ಓದಿ; ನಿಮ್ಮ ಹೆಸರು ʻA’ ಅಕ್ಷರದಿಂದ ಶುರುವಾಗುತ್ತಾ..?; ಹಾಗಾದ್ರೆ ನಿಮ್ಮ ವರ್ತನೆ ಹೀಗೇ ಇರುತ್ತೆ..!