CinemaLifestyle

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸಿದ್ಧಾರ್ಥ್‌-ನಟಿ ಅದಿತಿ ರಾವ್‌ ಹೈದರಿ

ಹೈದರಾಬಾದ್‌; ಖ್ಯಾತ ಬಹುಭಾಷಾ ನಟ ಸಿದ್ಧಾರ್ಥ್‌ ಹಾಗೂ ಅದಿತಿರಾವ್‌ ಹೈದರಿ ಸಪ್ತಪದಿ ತುಳಿದಿದ್ದಾರೆ.. ತೆಲಂಗಾಣದ ವಾನಪರ್ತಿಯಲ್ಲಿರುವ 400 ವರ್ಷ ಪುರಾತನ ರಂಗಸ್ವಾಮಿ ದೇಗುಲದಲ್ಲಿ ಈ ಮದುವೆ ನಡೆದಿದೆ.. ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಿದ್ದು, ಎರಡು ಕಡೆಯವರ ಕುಟುಂಬಸ್ಥರು ಹಾಗೂ ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು..
2021ರಲ್ಲಿ ಮಹಾ ಸಮುದ್ರಂ ಎಂಬ ತೆಲುಗು ಸಿನಿಮಾದಲ್ಲಿ ಸಿದ್ಧಾರ್ಥ್‌ ಹಾಗೂ ಅದಿತಿ ರಾವ್‌ ಹೈದರಿ ಒಟ್ಟಿಗೆ ನಟಿಸಿದ್ದರು.. ಇದಾದ ಮೇಲೆ ಇಬ್ಬರ ನಡುವೆ ಲವ್‌ ಆಗಿತ್ತು.. ಇದೀಗ ಗುರು ಹಿರಿಯರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.. ಸರಳವಾಗಿ ದೇವಸ್ಥಾನದಲ್ಲಿ ಮದುವೆಯಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ..
ತಮ್ಮ ಮದುವೆಯ ಫೋಟೋಗಳನ್ನು ನಟಿ ಅದಿತಿ ರಾವ್‌ ಇನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಇವರಿಬ್ಬರೂ ಕೆಲ ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.. ಅದಿತಿ ಖ್ಯಾತ ಮಾಡೆಲ್‌ ಆಗಿಯೂ ಗುರುತಿಸಿಕೊಂಡಿದ್ದಾರೆ..

Share Post