ಸ್ಕೂಟಿಯಲ್ಲಿ ಹೋಗುವಾಗ ಕೇಳಿಸಿತು ಬುಸ್ ಬುಸ್ ಶಬ್ದ!; ಡಿಕ್ಕಿಯಲ್ಲಿತ್ತು ಹಾವಿನ ಮೊಟ್ಟೆಗಳು!
ಆಂಧ್ರಪ್ರದೇಶ; ಸ್ಕೂಟಿಯನಲ್ಲಿ ಹೋಗುತ್ತಿದ್ದಾಗ ಡಿಕ್ಕಿಯಿಂದ ಬುಸ್ ಬುಸ್ ಶಬ್ದ ಕೇಳಿ ಬಂದಿದೆ.. ಇದ್ರಿಂದ ದ್ವಿಚಕ್ರ ವಾಹನ ಸವಾರ ಆತಂಕಗೊಂಡು ನಿಲ್ಲಿಸಿದ್ದಾನೆ.. ನೋಡಿದರೆ ಅದ್ರಲ್ಲಿ ನಾಗರಹಾವು..! ಅದೂ ಕೂಡಾ ಪಟ್ಟಣದ ಮಧ್ಯೆಯೇ ಈ ಘಟನೆ ನಡೆದಿದ್ದರಿಂದ ಜನರು ಆತಂಕಗೊಂಡಿದ್ದರು.. ಇನ್ನು ಮೂರ್ತಿ ಎಂಬುವವರು ಬಂದು ಹಾವನ್ನು ಸೇಫಾಗಿ ಹಿಡಿದು ಕಾಡಿಗೆ ಬಿಟ್ಟು ಬಂದರು.. ಅನಂತರ ವಾಹನದ ಡಿಕ್ಕಿ ತೆಗೆದು ನೋಡಿದರೆ, ಸವಾರನಿಗೆ ಮತ್ತಷ್ಟು ಗಾಬರಿಯಾಗಿತ್ತು..
ಸ್ಕೂಟಿಯ ಡಿಕ್ಕಿಯಲ್ಲಿ ಹಾವಿನ ಮೊಟ್ಟೆಗಳು ಸಿಕ್ಕಿವೆ.. ಹೀಗಾಗಿ ಹಾವು ಹಲವಾರು ದಿನಗಳಿಂದ ಸ್ಕೂಟಿಯಲ್ಲೇ ಸಂಸಾರ ಹೂಡಿದೆ ಅನ್ನೋದು ಅರ್ಥವಾಗಿದೆ.. ಅದೂ ಕೂಡಾ ಅದೇ ಸ್ಕೂಟಿಯಲ್ಲಿ ಆ ವ್ಯಕ್ತಿ ತುಂಬಾ ಕಡೆ ಸುತ್ತಾಡಿದ್ದಾನೆ.. ಇವತ್ತೂ ಕೂಡಾ ಒಂದು ಗಂಟೆಗೂ ಹೆಚ್ಚು ಕಾಲ ಸ್ಕೂಟರ್ ಚಲಾಯಿಸಿದ ಮೇಲೆ ಶಬ್ದ ಕೇಳಿಬಂದಿದೆ.. ಎಲ್ಲಿ ಕಚ್ಚಿದೆಯೋ ಎಂಬ ಭೀತಿಯಲ್ಲೇ ಸವಾರ ಇದ್ದ.. ಆದ್ರೆ ಹಾವು ಹಿಡಿದ ಮೇಲೆ ಆತ ನಿಟ್ಟುಸಿರು ಬಿಟ್ಟಿದ್ದಾನೆ..
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿಯ ಪ್ರಶಾಂತಿ ನಿಲಯದ ರಸ್ತೆಯಲ್ಲೇ ಈ ಘಟನೆ ನಡೆದಿದೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ..