CrimeNational

ಡ್ರಗ್ಸ್‌ ಅಮಲಿನಲ್ಲಿ ತೇಲಾಡುತ್ತಿರುವ ಯುವತಿಯರ ದೃಶ್ಯ ವೈರಲ್‌..!

ಕೇರಳ; ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ಡ್ರಗ್ಸ್‌ ದಾಸರಾಗುತ್ತಿದ್ದಾರೆ.. ಮೈಮೇಲೆ ಪ್ರಜ್ಞೆ ಇಲ್ಲದಂತೆ ಆಡುತ್ತಿದ್ದಾರೆ.. ಇದಕ್ಕೆ ಉದಾಹರಣೆಯಾಗಿ ಒಂದು ವಿಡಿಯೋ ಈಗ ವೈರಲ್‌ ಆಗುತ್ತಿದೆ.. ಈ ವಿಡಿಯೋದಲ್ಲಿ ಯುವತಿಯರು ಬಯಲು ಪ್ರದೇಶವೊಂದರಲ್ಲಿ ಡ್ರಗ್ಸ್‌ ಸೇವಿಸಿ ತೂರಾಡುತ್ತಿರುವ ದೃಶ್ಯಗಳಿವೆ..
ಕೇರಳದ ಮಲಪ್ಪುರಂ ಬಳಿ ಈ ಘಟನೆ ನಡೆದಿದೆ.. ಅದರಲ್ಲಿದ್ದ ಯುವತಿಯರು ವಿದೇಶೀಯರು ಎಂದು ಹೇಳಲಾಗುತ್ತಿದೆ.. ಆದ್ರೆ ಖಾತ್ರಿ ಇಲ್ಲ.. ಈ ವಿಡಿಯೋ ಸಾಕಷ್ಟು ವೈರಲ್‌ ಆಗುತ್ತಿದ್ದು, ಸಾರ್ವಜನಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.. ಸಾರ್ವಜನಿಕ ಪ್ರದೇಶದಲ್ಲಿ ಹೀಗೆ ರಾಜಾರೋಷವಾಗಿ ಡ್ರಗ್ಸ್‌ ಸೇವನೆ ಮಾಡಿ ತೂರಾಡುತ್ತಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..
ಡ್ರಗ್ಸ್‌ ಇಷ್ಟು ರಾಜಾರೋಷವಾಗಿ ಸಿಗುತ್ತಿದ್ದರೂ ಕೂಡಾ ಪೊಲೀಸರಿಗೆ ಇದು ಗೊತ್ತಿಲ್ಲವೇ..? ಡ್ರಗ್ಸ್‌ ಎಲ್ಲಿಂದ ಬರುತ್ತಿದೆ..? ಯುವ ಸಮುದಾಯಕ್ಕೆ ಹೇಗೆ ಸರಬರಾಜು ಆಗುತ್ತಿದೆ..? ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ..

Share Post