BengaluruCrime

Breaking; ಮುನಿರತ್ನರ ಇನ್ನೂ 2 ಆಡಿಯೋ ಇದೆ; ನಾಳೆ ರಿಲೀಸ್‌ ಎಂದ ಚಲುವರಾಜು!

ಬೆಂಗಳೂರು; ಆರ್‌ಆರ್‌ ನಗರ ಶಾಸಕ ಮುನಿರತ್ನ ಅವರನ್ನು ಬೆದರಿಕೆ ಆರೋಪದ ಮೇಲೆ ಬಂಧಿಸಲಾಗಿದೆ.. ಹೀಗಿರುವಾಗಲೇ ಮುನಿರತ್ನ ಬಂಧನಕ್ಕೆ ಕಾರಣರಾಗಿದ್ದ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರು ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ.. ಶಾಸಕ ಮುನಿರತ್ನ ಅವರ ಇನ್ನೂ ಎರಡು ಆಡಿಯೋಗಳು ನನ್ನ ಬಳಿ ಇದ್ದು, ನಾಳೆಯೇ ರಿಲೀಸ್‌ ಮಾಡೋದಾಗಿ ಅವರು ಹೇಳಿದ್ದಾರೆ..
ಗುತ್ತಿಗೆದಾರ ಚಲುವರಾಜು ಅವರಿಗೆ ಶಾಸಕ ಮುನಿರತ್ನ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.. ಈ ಸಂಬಂಧ ಚಲುವರಾಜು ಅವರು ಮೊನ್ನೆ ಒಂದು ಆಡಿಯೋ ಬಿಡುಗಡೆ ಮಾಡಿದ್ದರು.. ಅದರಲ್ಲಿ ಅತ್ಯಂತ ಕೆಟ್ಟದಾಗಿ ಬೈದರ ಮಾತುಗಳಿದ್ದವು.. ಈ ಸಂಬಂಧ ಶಾಸಕ ಮುನಿರತ್ನ ವಿರುದ್ಧ ಎರಡು ಎಫ್‌ಐಆರ್‌ ದಾಖಲಾಗಿತ್ತು.. ಈ ಹಿನ್ನೆಲೆಯಲ್ಲಿ ಕೋಲಾರದ ಬಳಿ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿತ್ತು..
ಹೀಗಿರುವಾಗಲೇ ಗುತ್ತಿಗೆದಾರ ಚಲುವರಾಜು ಅವರು ಶಾಸಕ ಮುನಿರತ್ನ ಅವರ ಇನ್ನೂ ಎರಡು ಆಡಿಯೋಗಳನ್ನು ರಿಲೀಸ್‌ ಮಾಡೋದಾಗಿ ಹೇಳಿದ್ದಾರೆ.. ಅವರ ಈ ಹೇಳಿಕೆ ರಾಜಕೀಯ ವಯಲದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ..

Share Post