Health

ಬೆನ್ನುನೋವು ಪ್ರಾಣ ಹಿಂಡುತ್ತಿದೆಯೇ..?; ಫಸ್ಟ್‌ ಸಮಸ್ಯೆಗೆ ಕಾರಣ ತಿಳ್ಕೊಳ್ಳಿ!

ವಯಸ್ಸಾದವರಲ್ಲಿ ಕೀಲು ನೋವು, ಬೆನ್ನುನೋವು, ಸಂಧಿವಾತ ಬರುವುದು ಸಾಮಾನ್ಯ.. ಆದ್ರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಹಲವಾರು ಮಂದಿಗೆ ಬೆನ್ನುನೋವು ಕಾಡುತ್ತಿದೆ. ಅದರಲ್ಲೂ ಲೋಯರ್‌ ಬ್ಯಾಕ್‌ ಪೇನ್‌ನಿಂದ ಹೆಚ್ಚು ಜನರು ಬಾಧಿಸುತ್ತಿದ್ದಾರೆ. ಇದಕ್ಕೆ ಕಾರಣ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು, ಇಲ್ಲವೆ ಹೆಚ್ಚು ಭಾರವನ್ನು ಹೊರುವ ಕೆಲಸ ಮಾಡುವುದು.. ಇಂತಹವರು ಕೆಳಬೆನ್ನುನೋವಿನಿಂದ ಹೆಚ್ಚು ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಬಳಲುತ್ತಿರುವ ಜನರು ಹಾಸಿಗೆಯ ಮೇಲೆ ಮಲಗುವುದಕ್ಕೂ ಕಷ್ಟಪಡುತ್ತಾರೆ. ಜೊತೆಗೆ ಕೆಲಸದ ಮೇಲೆ ಕೇಂದ್ರೀಕರಿಸೋದಕ್ಕೂ ಅವರಿಗೆ ಆಗುತ್ತಿಲ್ಲ. ಹಾಗಾದರೆ ಈ ಲೋಯರ್‌ ಬ್ಯಾಕ್‌ ಪೇನ್‌ಗೆ ಕಾರಣಗಳೇನು ನೋಡೋಣ ಬನ್ನಿ..

ಇದನ್ನೂ ಓದಿ; ಈ ಹೂವಿನಿಂದ ಪೂಜಿಸಿದರೆ ಲಕ್ಷ್ಮೀ ಬಹುಬೇಗ ಒಲಿಯುತ್ತಾಳಂತೆ!

ಬಿದ್ದು ಅಥವಾ ಅಪಘಾತದಿಂದ ಗಾಯ;
ಕೆಲವರು ಕೆಲಸ ಮಾಡುವ ವೇಳೆ ಜಾರಿ ಬಿದ್ದಿರುತ್ತಾರೆ. ಇದರಿಂದ ಬೆನ್ನಿಗೆ ಪೆಟ್ಟಾಗಿ ದೀರ್ಘಕಾಲದ ಬೆನ್ನುನೋವಿಗೆ ಕಾರಣವಾಗುತ್ತದೆ. ಇನ್ನು ಕೆಲವರು ಅಪಘಾತದಲ್ಲಿ ಗಾಯಗೊಂಡು ಬೆನ್ನುನೋವಿನ ಸಮಸ್ಯೆ ಎದುರಿಸುತ್ತಿರುತ್ತಾರೆ. ಇನ್ನು ಕೆಲವರು ಜಲಪಾತಗಳಲ್ಲಿ ರಭಸವಾಗಿ ಧುಮ್ಮಿಕ್ಕುವ ನೀರಿಗೆ ಮೈ ಒಡ್ಡಿರುತ್ತಾರೆ. ಇದರಿಂದಾಗಿ ಕೆಲವೊಮ್ಮೆ ಬೆನ್ನುಮೂಳೆಯ ಜಾಯಿಂಟ್‌ಗಳು ಪಕ್ಕಕ್ಕೆ ಸರಿಯುತ್ತವೆ. ಇದರಿಂದಲೂ ಸಮಸ್ಯೆ ಉಂಟಾಗುತ್ತದೆ.
ಅತಿಯಾದ ಬೊಜ್ಜು;
ಅಗತ್ಯಕ್ಕಿಂತ ದೇಹದ ತೂಕ ಹೆಚ್ಚಿರುವುದು. ಜೊತೆಗೆ ವಿಪರೀತ ಬೊಜ್ಜು ಬೆಳೆಸಿಕೊಳ್ಳುವುದರಿಂದಲೂ ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ಬೆನ್ನುಮೂಳೆಯ ವಕ್ರತೆಗೆ ಕಾರಣವಾಗುತ್ತದೆ. ಇದರಿಂದಾಗಿ ಅಸ್ಥಿ ಸಂಧಿವಾತ ಅಥವಾ ಹರ್ನಿಯೇಟೆಡ್‌ ಡಿಸ್ಕ್‌ನಂತರಹ ಸಮಸ್ಯೆಗಳು ತಲೆದೋರುತ್ತವೆ.

ಇದನ್ನೂ ಓದಿ; ಡ್ರಗ್ಸ್‌ ಕೇಸ್‌ನಲ್ಲಿ ನಟಿ ರಕುಲ್‌ ಪ್ರೀತ್‌ಸಿಂಗ್‌ ಸಹೋದರ ಅರೆಸ್ಟ್‌!

ಸರಿಯಾಗಿ ಕುಳಿತುಕೊಳ್ಳದಿರುವುದು;
ನಾವು ಕೂರುವ ಹಾಗೂ ನಿಲ್ಲುವ ಪೊಜಿಷನ್‌ ಸರಿಯಾಗಿರಬೇಕು. ಯಾವಾಗಲೂ ವಕ್ರವಾಗಿ ನಿಲ್ಲುವುದು, ವಕ್ರವಾಗಿ ಕುಳಿತುಕೊಳ್ಳುವುದು ಮಾಡಬಾರದು. ಕಂಪ್ಯೂಟರ್‌ ಮುಂದೆ ಕುಳಿತು ಕೆಲವರು ಗಂಟೆಗಟ್ಟಲೆ ನಿರಂತರವಾಗಿ ಕೆಲಸ ಮಾಡುತ್ತಾರೆ. ಇದರಿಂದಾಗಿ ಬೆನ್ನುನೋವು ಬರುತ್ತದೆ. ಕಾರಣ, ಕುಳಿತ ಭಂಗಿ ನೇರವಾಗಿರುವುದಿಲ್ಲ. ದೇಹದ ಪ್ರಕೃತಿ ವಿರುದ್ಧವಾಗಿ ಕುಳಿತು ನಾವು ಕೆಲಸ ಮಾಡುತ್ತೇವೆ. ಇದರಿಂದ ನಮಗೆ ಬೆನ್ನುನೋವು ಬರುತ್ತದೆ. ಅದೇ ರೀತಿ ನಿಂತು ಕೆಲಸ ಮಾಡುವವರು ಕೂಡಾ ಸರಿಯಾದ ಪೊಜಿಷನ್‌ನಲ್ಲಿ ಕೂರದೇ ಬೆನ್ನುನೋವಿನ ಸಮಸ್ಯೆಯನ್ನು ಆಹ್ವಾನಿಸಿಕೊಳ್ಳುತ್ತಾರೆ. ನಂತರ ಜೀವನ ಪೂರ್ತಿ ಕಷ್ಟಪಡುತ್ತಾರೆ.
ಉಳುಕು;
ವಿಚಿತ್ರವಾದ ಚಲನೆಗಳು ಅಥವಾ ಭಾರವಾದ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಎತ್ತದೇ, ಅಸಮರ್ಪಕ ನಿರ್ವಹಣೆಯಿಂದ ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದಲೂ ಕೂಡಾ ಬೆನ್ನುಮೂಳೆ ಉಳುಕು ಉಂಟಾಗುತ್ತದೆ. ಇದರಿಂದ ನಿರಂತರವಾಗಿ ಬೆನ್ನುನೋವು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ; ಹೆಂಡತಿಯ ಈ ಮೂರು ಅಭ್ಯಾಸಗಳು ಗಂಡನಿಗೆ ಇಷ್ಟವಾಗೋದಿಲ್ಲವಂತೆ..!

ಸಂಧಿವಾತ;
ಬೆನ್ನುಮೂಳೆಯ ಕೀಲುಗಳ ಮೇಲಿನ ಒತ್ತಡ ಮತ್ತು ಕೀಲುಗಳಲ್ಲಿನ ಸವಕಳಿ ಮುಂತಾದ ಅಸ್ಥಿಸಂಧಿವಾತ ಸಮಸ್ಯೆಗಳು ಬೆನ್ನುಮೂಳೆಯ ಕೆಳಭಾಗದಲ್ಲಿ ನೋವು ಮತ್ತು ಊತವನ್ನು ಉಂಟುಮಾಡಬಹುದು.
ಡಿಸ್ಕ್ ಸಮಸ್ಯೆಗಳು;
ಹರ್ನಿಯೇಟೆಡ್ ಡಿಸ್ಕ್‌ಗಳು, ಆಂತರಿಕ ಜೆಲ್ ಹೊರಗೆ ತಳ್ಳುವುದು, ಬೆನ್ನುಮೂಳೆಯ ಬಳಿ ನರಗಳ ಕಿರಿಕಿರಿ ಮತ್ತು ಕಾಲಿನ ಕೆಳಗೆ ನೋವು, ಕಾಲುಗಳು ಎಳೆಯುವುದು (ಸಿಯಾಟಿಕಾ) ಮುಂತಾದ ಡಿಸ್ಕ್ ಸಮಸ್ಯೆಗಳಿಂದ ಕೆಳ ಬೆನ್ನು ನೋವು ಉಂಟಾಗುತ್ತದೆ.
ಬೆನ್ನುಮೂಳೆಯ ಸ್ಟೆನೋಸಿಸ್;
ಬೆನ್ನುಹುರಿಯ ಸಂಕುಚಿತವು ನರಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರ ಪರಿಣಾಮವೆಂದರೆ ನೋವು ಮತ್ತು ಮರಗಟ್ಟುವಿಕೆ ಮುಂತಾದ ಲಕ್ಷಣಗಳು ಕಾಣಿಸುತ್ತವೆ. ಇದು ಬೆನ್ನುಮೂಳೆಯನ್ನು ದುರ್ಬಲಗೊಳಿಸುತ್ತದೆ.

ಇದನ್ನೂ ಓದಿ; ಬಸವನಬಾಗೇವಾಡಿಯಲ್ಲಿ ರಣಭೀಕರ ಅಪಘಾತ; ಮೂವರ ದುರ್ಮರಣ!

ಸ್ಕೋಲಿಯೋಸಿಸ್ ;
ಬೆನ್ನುಮೂಳೆಯ ಅಸಹಜ ವಕ್ರತೆಯು ಡಿಸ್ಕ್‌ಗಳು ​​ಮತ್ತು ಕೀಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ವಿಶೇಷವಾಗಿ ಸ್ಕೋಲಿಯೋಸಿಸ್ ಬೆನ್ನುಮೂಳೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಕಡಿಮೆ ಬೆನ್ನುನೋವಿಗೆ ಕಾರಣವಾಗಬಹುದು.
ಸ್ಪಾಂಡಿಲೋಲಿಸ್ಥೆಸಿಸ್;
ಒಂದು ಕಶೇರುಖಂಡವು ಇನ್ನೊಂದರ ಮೇಲೆ ಮುಂದಕ್ಕೆ ಜಾರಿಬೀಳುವ ಸ್ಥಿತಿಯನ್ನು ಸ್ಪಾಂಡಿಲೋಲಿಸ್ಥೆಸಿಸ್ ಎಂದು ಕರೆಯಲಾಗುತ್ತದೆ. ಇದು ಬೆನ್ನುಮೂಳೆಯ ನೋವು ಮತ್ತು ಅಸ್ಥಿರತೆಯನ್ನು ಉಂಟುಮಾಡಬಹುದು.
ಸಯಾಟಿಕಾ;
ಸೊಂಟದ ನೋವನ್ನು ಸಯಾಟಿಕಾ ಎಂದು ಕರೆಯಲಾಗುತ್ತದೆ. ತೊಡೆಯ ಹಿಂಭಾಗದ ನರವು ಕಾಲುಗಳಿಗೆ ವಿಸ್ತರಿಸುತ್ತದೆ. ಸಯಾಟಿಕಾ ಸಂಕೋಚನ ಅಥವಾ ಕಿರಿಕಿರಿಯಿಂದ ನಿರೂಪಿಸಲ್ಪಟ್ಟಿದೆ. ರೋಗಲಕ್ಷಣಗಳು ನೋವು, ಮರಗಟ್ಟುವಿಕೆ, ಕೆಳ ಬೆನ್ನು ಮತ್ತು ಕಾಲುಗಳಲ್ಲಿ ಜುಮ್ಮೆನಿಸುವಿಕೆ ಸೇರಿವೆ.
ನಿರೋಧಕ ಕ್ರಮಗಳು;
ಸಾಮಾನ್ಯ ಬೆನ್ನು ನೋವನ್ನು ಸರಿಪಡಿಸುವ ಭಂಗಿ, ದೈಹಿಕ ಚಿಕಿತ್ಸೆ ಮತ್ತು ವ್ಯಾಯಾಮಗಳಂತಹ ಸರಳ ಕ್ರಮಗಳೊಂದಿಗೆ ನಿಯಂತ್ರಿಸಬಹುದು. ಆದರೆ ನೋವು ಹೆಚ್ಚು ಕಾಲ ಮುಂದುವರಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

 

Share Post