DistrictsHealth

ಐದು ವರ್ಷದ ಮಗುವಿನಲ್ಲಿ ಝೀಕಾ ವೈರಸ್‌ ಪತ್ತೆ; ಹೆಚ್ಚಿದ ಆತಂಕ

ರಾಯಚೂರು; ರಾಯಚೂರು ಜಿಲ್ಲೆಯಲ್ಲಿ ಮೊದಲ ಜೀಕಾ ವೈರಸ್‌ ಪ್ರಕರಣ ಪತ್ತೆಯಾಗಿದೆ. ಮಾನ್ವಿ ತಾಲೂಕಿನ ಕೋಳಿ ಕ್ಯಾಂಪ್‌ನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಕಂಡುಬಂದಿದೆ. ಇದನ್ನು ತಜ್ಞರು ದೃಢಪಡಿಸಿದ್ದಾರೆ.

ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಫುಲ್‌ ಅಲರ್ಟ್‌ ಆಗಿದ್ದಾರೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಗ್ರಾಮದ ವಾತಾವರಣದ ಬಗ್ಗೆಯೂ ಅಧ್ಯಯನ ಮಾಡಿದ್ದಾರೆ. 5 ವರ್ಷದ ಮಗುವಿಗೆ ಕೆಲ ದಿನಗಳಿಂದ ಜ್ವರ ಕಾಡುತ್ತಿತ್ತು. ಇತ್ತೀಚೆಗೆ ಜ್ವರ ಹೆಚ್ಚಾಗಿದ್ದರಿಂದ ಬಳ್ಳಾರಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಡೆಂಗ್ಯೂ, ಚಿಕನ್ ಗುನ್ಯಾ ಇರಬಹುದೆಂದು ಮೊದಲು ಶಂಕಿಸಲಾಗಿತ್ತು. ಆದ್ರೆ ಪರೀಕ್ಷೆಯಲ್ಲಿ ಎಲ್ಲವೂ ನೆಗೆಟಿವ್‌ ಬಂದಿತ್ತು. ಅನಂತರ ಮಗುವಿನ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಲಾಯಿತು. ಅಲ್ಲಿ ಮಗುವಿನಲ್ಲಿ ಜೀಕಾ ವೈರಸ್‌ ಇರುವುದು ಪತ್ತೆಯಾಗಿದೆ. ಆದ್ರೆ ವರದಿ ಕೈಸೇರುವಷ್ಟರಲ್ಲಿ ಮಗು ಸಂಪೂರ್ಣ ಗುಣಮುಖವಾಗಿತ್ತು. ಅನಂತರ ಪರೀಕ್ಷೆ ಮಾಡಿಸಿದಾಗ ನೆಗೆಟಿವ್‌ ವರದಿ ಬಂದಿದೆ.

Share Post