Breaking; ಈಶ್ವರಪ್ಪ ಮುನಿಸು ಶಮನವಾಯ್ತಾ..?; ಶಿವಮೊಗ್ಗ ಅಖಾಡದಿಂದ ಹಿಂದಕ್ಕೆ?
ಬೆಂಗಳೂರು; ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ಹೈಕಮಾಂಡ್ ನಾಯಕರ ಮಾತಿಗೆ ಮರು ಮಾತನಾಡುವುದಿಲ್ಲ.. ಇದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ.. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಟಿಕೆಟ್ ಸಿಗಲಿಲ್ಲ ಅಂತ ಈಶ್ವರಪ್ಪ ಮುನಿಸಿಕೊಂಡಿದ್ದರು.. ಈ ವೇಳೆ ಮೋದಿ ಮಾಡಿದ ಒಂದು ಕರೆಗೆ ಓಗೊಟ್ಟು ಅವರು ಪ್ರಚಾರಕ್ಕೆ ತೆರಳಿದ್ದರು.. ಈ ಬಾರಿ ಯಾರು ಹೇಳಿದರೂ ಕಣದಿಂದ ಹಿಂದೆ ಸರಿಯಲ್ಲ ಅಂತ ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರನ ವಿರುದ್ಧ ಬಂಡಾಯ ಸಾರಿದ್ದರು.. ಆದ್ರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಕರೆ ಈಶ್ವರಪ್ಪ ಅವರ ಬಂಡಾಯವನ್ನು ಶಮನ ಮಾಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ; ಸೀರೆ ಕ್ಯಾನ್ಸರ್; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್!
ಇಂದೇ ಈಶ್ವರಪ್ಪ ಅವರು ನಿರ್ಧಾರ ಪ್ರಕಟ ಸಾಧ್ಯತೆ;
ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ.. ಇದೇ ವೇಳೆ ಅವರು ಎಲ್ಲೆಲ್ಲಿ ಬಂಡಾಯ ಇದೆಯೋ ಅಲ್ಲೆಲ್ಲಾ ಶಮನ ಮಾಡುವ ಪ್ರಯತ್ನ ಮಾಡಿದ್ದಾರೆ.. ಅದೇ ರೀತಿಯ ಈಶ್ವರಪ್ಪ ಅವರಿಗೂ ಇಂದು ಬೆಳಗ್ಗೆ ಕರೆ ಮಾಡಿ ಮಾತನಾಡಿದ್ದಾರೆ.. ಅಮಿತ್ ಶಾ ಅವರೇ ಕರೆ ಮಾಡಿರುವುದರಿಂದ ಖುಷಿಯಾದ ಈಶ್ವರಪ್ಪ ಅವರು ಈಗ ಮುನಿಸು ಮರೆತಿದ್ದಾರೆ.. ಇಷ್ಟು ದಿನ ಅವರು ಮೋದಿ ಫೋಟೋ ಜೊತೆಗೆ ಪ್ರಚಾರ ಮಾಡುತ್ತಿದ್ದರು.. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಿದ್ದರು.. ಆದ್ರೆ ಈಗ ಅಮಿತ್ ಶಾ ಮಾತಿನಿಂದ ಶಾಂತವಾಗಿದಾರೆ ಎಂದು ಹೇಳಲಾಗುತ್ತಿದೆ. ಇಂಧು ತುರ್ತು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಪರ ಕೆಲಸ ಮಾಡುವ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ..
ಇದನ್ನೂ ಓದಿ; ಸಹೋದ್ಯೋಗಿ ಹೆರಿಗೆ ರಜೆಗೆ ಹೋಗುವುದನ್ನು ತಡೆಯಲು ನೀರಲ್ಲಿ ವಿಷ ಬೆರೆಸಿದ ಉದ್ಯೋಗಿ!
ಈಶ್ವರಪ್ಪ ಜೊತೆ 10 ನಿಮಿಷ ಮಾತನಾಡಿದ ಈಶ್ವರಪ್ಪ;
ಇಂದು ಅರಮನೆ ಮೈದಾನದಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯುತ್ತಿದೆ.. ಅದರ ನಂತರ ಅಮಿತ್ ಶಾ ಅವರು ಹಲಚವು ಸಭೆಗಳನ್ನು ನಡೆಸಲಿದ್ದಾರೆ.. ಅನಂತರ ಅವರು ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ.. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಅವರು ಬೆಂಗಳೂರಿಗೆ ಆಗಮಿಸಿದ್ದರು.. ಇಂದು ಬೆಳಗ್ಗೆ ಹಲವು ನಾಯಕರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ.. ಈಸಂದರ್ಭದಲ್ಲೇ ಈಶ್ವರಪ್ಪ ಅವರಿಗೆ ಅಮಿತ್ ಶಾ ಅವರು ಕರೆ ಮಾಡಿ ಮಾತನಾಡಿದ್ದಾರೆ.. ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆದಿದ್ದು, ಸಂಧಾನ ಫಲಪ್ರದವಾಗಿದೆ.. ಹೀಗಾಗಿ ಈಶ್ವರಪ್ಪ ಬಂಡಾಯವೇಳದೇ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ; ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!
ಈಶ್ವರಪ್ಪ ಮಗನಿಗೆ ಬೇರೆ ವ್ಯವಸ್ಥೆ ಮಾಡುವ ಭರವಸೆ;
ಅಮಿತ್ ಶಾ ಅವರು ಈಶ್ವರಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಈ ವೇಳೆ ಈಶ್ವರಪ್ಪ ಅವರು ತಮ್ಮ ಮಗನ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.. ಆಗ ಅಮಿತ್ ಶಾ ಅವರು, ಒಂದಷ್ಟು ಭರವಸೆಗಳನ್ನು ನೀಡಿದ್ದಾರೆ.. ಇದರಿಂದಾಗಿ ಈಶ್ವರಪ್ಪ ಅವರು ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.. ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್‌ಗೆ ಈಶ್ವರಪ್ಪ ಅವರು ಟಿಕೆಟ್ ಕೇಳಿದ್ದರು.. ಆದ್ರೆ ಹೈಕಮಾಂಡ್ ಟಿಕೆಟ್ ನಿರಾಕರಿಸಿತ್ತು.. ಯಡಿಯೂರಪ್ಪ ಅವರು ಬೇಕಂತಾನೇ ನನ್ನ ಮಗನಿಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಈಶ್ವರಪ್ಪ ಆರೋಪ ಮಾಡಿದ್ದರು.. ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಿ, ಈ ಬಗ್ಗೆ ಘೋಷಣೆ ಕೂಡಾ ಮಾಡಿದ್ದರು..
ಅಮಿತ್ ಶಾ ದೂರವಾಣಿ ಕರೆ ಮಾಡಿದ ಬಳಿಕ ಕೆ.ಎಸ್ ಈಶ್ವರಪ್ಪನವರು ತಮ್ಮ ನಿರ್ಧಾರ ಬದಲಿಸಿದ್ದಾರೆ ಎನ್ನಲಾಗಿದೆ.. ಆದ್ರೆ ಅದನ್ನು ಇನ್ನೂ ಯಾರೂ ಅಧಿಕೃತವಾಗಿ ಪ್ರಕಟಿಸಿಲ್ಲ.. ಅವರು ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ; ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಿದ ಯದುವೀರ್; ಅವರ ಆಸ್ತಿ ಎಷ್ಟಿದೆ ಗೊತ್ತಾ..?