HealthNational

ಬೆವರು ದುರ್ವಾಸನೆಯಿಂದ ರೋಸಿಹೋಗಿದ್ದೀರಾ..?; ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ..

ಬೇಸಿಗೆ ಶುರುವಾಗಿದೆ.. ಬಿಸಿಲ ಧಗೆ ಹೆಚ್ಚಾಗುತ್ತಿದೆ.. ಹೊರಗೆ ಕಾಲಿಡೋದಕ್ಕೆ ಆಗುತ್ತಿಲ್ಲ.. ಬಿಸಿಲ ಧಗೆಗೆ ಬೇವರು ಕಿತ್ತುಕೊಂಡು ಬರುತ್ತಿದೆ.. ಇದರಿಂದಾಗಿ ದೇಹದಲ್ಲಿ ದುರ್ವಾಸನೆ ಕೂಡಾ ಹೆಚ್ಚಾಗುತ್ತಿದೆ.. ಈ ಬೆವರ ದುರ್ವಾಸನೆಯಿಂದ ಕಿರಿಕಿರಿ ಅನುಭವಿಸುವವರ ಸಂಖ್ಯೆ ತುಂಬಾನೇ ಇದೆ.. ಅದ್ರಲ್ಲೂ ಬೇಸಿಗೆಯಲ್ಲಿ ಬರುವ ಬೆವರು ದುರ್ವಾಸನೆಗೆ ಜನ ರೋಸಿಹೋಗುತ್ತಾರೆ.. ಹದಿಹರೆಯದವರು ಮತ್ತು ಯಾವುದೇ ವಯಸ್ಸಿನ ವಯಸ್ಕರು ಬೇಸಿಗೆಯಲ್ಲಿ ಹೆಚ್ಚು ಬೆವರುತ್ತಾರೆ… ಇದರಿಂದ ದುರ್ವಾಸನೆ ಕೂಡಾ ಹೆಚ್ಚಾಗುತ್ತದೆ.. ಇದನ್ನು ಹೋಗಲಾಡಿಸಲು ಅನೇಕರು ಬಾಡಿ ಸ್ಪ್ರೇ ಬಳಸುತ್ತಾರೆ.. ಆದ್ರೆ, ಯಾವುದೇ ಬಾಡಿ ಸ್ಪ್ರೇ ಬಳಸದೆ, ನೈಸರ್ಗಿಕವಾಗಿ ದೇಹದ ದುರ್ವಾಸನೆಯನ್ನು ಹೋಗಲಾಡಿಸಬಹುದು… ಅದು ಹೇಗೆ ಅಂತ ತಿಳಿಯೋಣ ಬನ್ನಿ..

ಇದನ್ನೂ ಓದಿ; ಮಾನಸಿಕ ಒತ್ತಡದಲ್ಲಿದ್ದೀರಾ..?; ಹಾಗಾದರೆ ಈ ಮಂತ್ರಗಳನ್ನು ಜಪಿಸಿ!

ಟೀಟ್ರೀ ಆಯಿಲ್..;

ಬೆವರು ದುರ್ವಾಸನೆ ಹೋಗಲಾಡಿಸಲು ಟೀಟ್ರೀ ಆಯಿಲ್‌ ತುಂಬಾನೇ ಪರಿಣಾಮಕಾರಿ.. ಈ ಆಯಿಲ್‌ ಅನ್ನು ಬೆವರುವ ಜಾಗಕ್ಕೆ ಹಚ್ಚಿಕೊಂಡರೆ ದುರ್ವಾಸನೆ ದೂರವಾಗುತ್ತದೆ.. ಮೊದಲಿಗೆ ನೀವು ಎರಡು ಚಮಚ ಟೀ ಟ್ರೀ ಎಣ್ಣೆಯನ್ನು ತೆಗೆದುಕೊಳ್ಳಿ. ಅದಕ್ಕೆ ಸಮನಾದ ನೀರನ್ನು ಮಿಕ್ಸ್‌ ಮಾಡಿ. ಹಾಗೆ ಮಾಡಿದ ಆಯಿಲ್‌ನ್ನು ಬೆವರು ಬರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ಬೆವರು ದುರ್ವಾಸನೆ ಬರುವುದಿಲ್ಲ.. ಟೀ ಗಿಡದ ಎಣ್ಣೆಯು ನೈಸರ್ಗಿಕ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ ಹೊಂದಿದೆ.. ಈ ಹಿನ್ನೆಲೆಯಲ್ಲಿ ಬೆವರಿನಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ; ಬೇಸಿಗೆಯಲ್ಲಿ ಸನ್ ಟ್ಯಾನ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಜೋಳದ ಪಿಷ್ಟ;
ಕಾರ್ನ್ಸ್ಟಾರ್ಚ್ ಮತ್ತು ನಿಂಬೆ ರಸ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನ ಮಾಡುತ್ತದೆ.. ಇದು ಕೂಡಾ ಬೆವರು ದುರ್ವಾಸನೆ ಬರದಂತೆ ತಡೆಯುತ್ತದೆ.. ಎರಡು ಚಮಚ ನಿಂಬೆ ರಸ ಮತ್ತು ಎರಡು ಚಮಚ ಜೋಳದ ಪಿಷ್ಟವನ್ನು ಬೆರೆಸಿ ಪೇಸ್ಟ್ ತಯಾರಿಸಬೇಕು.. ಇದನ್ನು ಅಂಡರ್ ಆರ್ಮ್ಸ್ ಗೆ ಹಚ್ಚಿ ಹತ್ತು ನಿಮಿಷ ಹಾಗೆಯೇ ಬಿಡಬೇಕು. ನಂತರ ಸ್ವಚ್ಛಗೊಳಿಸಬೇಕು. ಇದರಿಂದ ಬೇಸಿಗೆಯಲ್ಲಿ ಬರುವ ಬೆವರು ದುರ್ವಾಸನೆ ಕಡಿಮೆ ಮಾಡುತ್ತದೆ..

ಇದನ್ನೂ ಓದಿ; ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್‌

 

ಟೊಮ್ಯಾಟೋ ರಸ;

ಟೊಮ್ಯಾಟೋ ರಸ ಕೂಡಾ ನಮ್ಮ ದೇಹದ ಬೆವರಿನ ದುರ್ವಾಸನೆಗಳನ್ನು ಕಡಿಮೆ ಮಾಡುತ್ತದೆ.. ಸ್ನಾನ ಮಾಡುವಾಗ ನೀರಿಗೆ ಟೊಮ್ಯಾಟೋ ರಸ ಬೆರೆಸಬೇಕು.. ಹೌದು, ಸ್ನಾನದ ನೀರಿಗೆ ತಾಜಾ ಟೊಮ್ಯಾಟೋ ರಸವನ್ನು ಸೇರಿಸಬೇಕು.. ಈ ನೀರಿನಿಂದ ಸ್ನಾನ ಮಾಡಿದರೆ ಬೆವರಿನ ದುರ್ವಾಸನೆ ಬರದಂತೆ ತಡೆಯುತ್ತದೆ.. ಮನೆಯಲ್ಲಿ ಬಾತ್‌ ಟಬ್‌ ಇದ್ದರೆ, ನೀರನ್ನು ಟಬ್‌ನಲ್ಲಿ ಸುರಿಯಬೇಕು. ಆ ಬಾತ್‌ ಟಬ್‌ ನಲ್ಲಿ 20 ನಿಮಿಷಗಳ ಕಾಲ ಕುಳಿತುಕೊಳ್ಳಬೇಕು. ಇದು ದೇಹದಲ್ಲಿ ದುರ್ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.. ಬ್ಯಾಕ್ಟೀರಿಯಾಗಳು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.. ಜೊತೆಗೆ ಚರ್ಮದ ಆರೋಗ್ಯ ಕೂಡಾ ಸುಧಾರಿಸುತ್ತದೆ..

ಇದನ್ನೂ ಓದಿ; ಮುಖ ಸುಕ್ಕುಗಟ್ಟದಂತೆ ಯಾವಾಗಲೂ ಯಂಗ್‌ ಆಗಿ ಕಾಣುಲು ಹೀಗೆ ಮಾಡಿ!

ಹಸಿರು ಚಹಾ ಎಲೆಗಳು;

ಹಸಿರು ಚಹಾ ಎಲೆಗಳು ಕೂಡಾ ನಮ್ಮ ದೇಹದ ದುರ್ಗಂಧವನ್ನು ಕಡಿಮೆ ಮಾಡುತ್ತವೆ.. ಮೊದಲಿಗೆ ನಾವು ನೀರನ್ನು ಚೆನ್ನಾಗಿ ಕುದಿಸಬೇಕು.. ನಂತರ ಅದರೊಳಗೆ ಹಸಿರು ಚಹಾ ಎಲೆಗಳನ್ನು ಹಾಕಬೇಕು.. ನಂತರ ಐದು ನಿಮಿಷಗಳ ಕಾಲ ಹಾಗೇ ಇರಿಸಬೇಕು.. ಅನಂತರ ನೀರು ತಣ್ಣಗಾಗಲು ಬಿಡಬೇಕು.. ಆ ನೀರನ್ನು ಹತ್ತಿಯಲ್ಲಿ ಅದ್ದಿ, ಅದನ್ನು ದೇಹದ ಮೇಲೆ ಹಚ್ಚಿಕೊಳ್ಳಬೇಕು.. ಹೀಗೆ ಮಾಡುವುದರಿಂದ ದೇಹದಲ್ಲಿ ಬೆವರು ಬರದಂತೆ ತಡೆಯುತ್ತದೆ.. ವಾರದಲ್ಲಿ ಎರಡು ಮೂರು ಬಾರಿ ಹೀಗೆ ಮಾಡುವುದರಿಂದ ಬೇಸಗೆಯಲ್ಲಿ ಬೆವರಿನ ದರ್ವಾಸನೆ ಬರುವುದಿಲ್ಲ.

ಇದನ್ನೂ ಓದಿ; ರಾತ್ರಿಯಿಡೀ ನೆನೆಸಿಟ್ಟ ಒಣದ್ರಾಕ್ಷಿ ತಿಂದರೆ ಅನಾರೋಗ್ಯಕ್ಕೆ ಚೆಕ್‌!

ಅಡುಗೆ ಸೋಡಾ;

ಬೇಕಿಂಗ್‌ ಸೋಡಾ ಕೂಡಾ ಬೆವರು ದುರ್ವಾಸನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.. ಎರಡು ಚಮಚ ಅಡಿಗೆ ಸೋಡಾವನ್ನು ಒಂದು ಕಪ್ ನೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಕೊಳ್ಳಬೇಕು. ಇದನ್ನು ಕಂಕುಳಲ್ಲಿ ಪ್ರತಿದಿನ ಸ್ಪ್ರೇ ಮಾಡಿಕೊಳ್ಳಬೇಕು.. ಹೀಗೆ ಮಾಡಿದ ನಂತರ ಅದನ್ನು ಒಣಗಲು ಬಿಡಬೇಕು.. ಒಣಗಿದ ನಂತರ ಬಟ್ಟೆಗಳನ್ನು ಧರಿಸಿಕೊಳ್ಳಬೇಕು.. ಹೀಗೆ ಮಾಡುವುದರಿಂದ ಯಾವುದೇ ಕಾರಣಕ್ಕೂ ಬೆವರಿನ ದುರ್ವಾಸನೆ ಬರೋದಿಲ್ಲ..

ಇದನ್ನೂ ಓದಿ; ಡಸ್ಟ್‌ ಅಲರ್ಜಿಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..?; ಹಾಗಾದರೆ ಇದನ್ನು ಓದಿ..

ಆಪಲ್ ಸೈಡರ್ ವಿನೆಗರ್;

ನೀವು ತುಂಬಾ ಬೆವರುತ್ತಿದ್ದೀರಾ..? ಹಾಗಾದ್ರೆ, ಒಂದು ಟೀ ಚಮಚ ಆಪಲ್‌ ಸೈಡರ್ ವಿನೆಗರ್ ತೆಗೆದುಕೊಳ್ಳಿ. ಜೊತೆಗೆ ಅದೇ ಪ್ರಮಾಣದ ನೀರನ್ನು ಅದಕ್ಕೆ ಸೇರಿಸಿಕೊಳ್ಳಿ. ಹತ್ತಿಯನ್ನು ಅದರಲ್ಲಿ ಅದ್ದಿ ದೇಹಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿ ಪಿಎಚ್ ಬ್ಯಾಲೆನ್ಸ್ ಆಗುತ್ತದೆ.. ಜೊತೆಗೆ ದೇಹದಲ್ಲಿನ ಬ್ಯಾಕ್ಟೀರಿಯಾ ದೂರವಾಗುತ್ತದೆ. ಬ್ಯಾಕ್ಟೀರಿಯಾ ದೂರವಾಗುವುದರಿಂದ ದೇಹದಲ್ಲಿನ ದುರ್ವಾಸನೆ ಬರದಂತೆ ತಡೆಯುತ್ತದೆ..

Share Post