ದೇಶದ ಮೊದಲ ಖಾಸಗಿ ಉಪಗ್ರಹ ಉಡಾಯಿಸಿದ ಇಸ್ರೋ
ಶ್ರೀಹರಿಕೋಟಾ; ದೇಶದ ಮೊದಲ ಖಾಸಗಿ ಉಪಗ್ರಹ ವಿಕ್ರಮ್-ಎಸ್ ರಾಕೆಟ್ ಮೂಲಕ ಮೂರು ಚಿಕ್ಕ ಉಪಗ್ರಹಗಳನ್ನು ಇಂದು ಇಸ್ರೋ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಮ್-ಎಸ್ ಹೆಸರಿನ ಖಾಸಗಿ ರಾಕೆಟ್ ಉಡಾಯಿಸಲಾಯಿತು. ತೆಲಂಗಾಣ ಮೂಲದ ಟೆಕ್ ಸ್ಟಾರ್ಟ್‌ಅಪ್ ಸ್ಕೈರೂಟ್ ಏರೋಸ್ಪೇಸ್ ಈ ರಾಕೆಟ್‌ನ್ನು ನಿರ್ಮಾಣ ಮಾಡಿತ್ತು.
ವಿಕ್ರಮ್-ಎಸ್ ರಾಕೆಟ್ 3 ಚಿಕ್ಕ ಉಪಗ್ರಹಗಳನ್ನು ಕೊಂಡೊಯ್ದು ಭೂಮಿಯ ಕಕ್ಷೆಗೆ ಸೇರಿಸಲಿದೆ.