ScienceTechTechnology

ಬೂದಿಯಲ್ಲಿ ಮುಚ್ಚಿಟ್ಟರೆ 6 ತಿಂಗಳವರೆಗೂ ಟೊಮ್ಯಾಟೋ ಫ್ರೆಶ್‌!

ಬೆಂಗಳೂರು; ರೈತರ ಪ್ರಮುಖ ಸಮಸ್ಯೆಯೇ ಬೆಳೆದ ಬೆಳೆಗಳನ್ನು ಸಂರಕ್ಷಿಸಿಕೊಳ್ಳೋದಕ್ಕೆ ಆಗದೇ ಇರುವುದು.. ತರಕಾರಿಯಂತಹ ಫಸಲು ಬಹುಬೇಗ ಹಾಳಾಗುತ್ತದೆ.. ಹೀಗಾಗಿ ತಕ್ಷಣವೇ ಮಾರಾಟ ಮಾಡಬೇಕು.. ಆ ಸಮಯದಲ್ಲಿ ಎಷ್ಟು ಬೆಲೆಗೆ ಹೋಗುತ್ತದೋ ಅಷ್ಟಕ್ಕೇ ಮಾರಿಬಿಡಬೇಕು.. ಇಲ್ಲದಿದ್ದರೆ ಕೊಳೆತುಹೋಗುತ್ತದೆ.. ಹೀಗಾಗಿ ಎಷ್ಟೋ ರೈತರು ಉತ್ತಮ ಬೆಳೆ ಬೆಳೆದರೂ ಅದಕ್ಕೆ ಸೂಕ್ತ ಬೆಲೆ ಸಿಗದೇ ಸಂಕಷ್ಟ ಅನುಭವಿಸುತ್ತಾರೆ.. ನಷ್ಟ ಉಂಟಾಗಿ ದಿಕ್ಕು ತೋಚದಂತಾಗುತ್ತಾರೆ…

ಇದನ್ನೂ ಓದಿ; ಸಮುದ್ರದ ಉಪ್ಪು ನೀರಿಂದ ಚಲಿಸುತ್ತಂತೆ ಈ ಕಾರು!; ಹೊಸ ಆವಿಷ್ಕಾರ!

ಟೊಮ್ಯಾಟೋ ಬೆಳೆಯನ್ನೇ ನಂಬಿಕೊಂಡ ರೈತರು;

ಕರ್ನಾಟಕದ ಹಲವು ಭಾಗಗಳಲ್ಲಿ ರೈತರು ಅತಿಹೆಚ್ಚಾಗಿ ಟೊಮ್ಯಾಟೋ ಬೆಳೆಯುತ್ತಾರೆ.. ಒಮ್ಮೊಮ್ಮೆ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತದೆ.. ಆದ್ರೆ ಬಹುತೇಕ ಸಮಯದಲ್ಲಿ ಅದನ್ನು ಕೇಳೋರೇ ಇರೋದಿಲ್ಲ.. ಇಂತಹ ಸಮಯದಲ್ಲಿ ಟೊಮ್ಯಾಟೋವನ್ನು ಸ್ಟೋರ್‌ ಮಾಡಿಟ್ಟು, ಬೆಲೆ ಬಂದಾಗ ಮಾರಿಕೊಳ್ಳುವ ಹಾಗಿದ್ದರೆ ರೈತರು ಸುಖವಾಗಿರುತ್ತಿದ್ದರು.. ಆದ್ರೆ ನಮ್ಮನ್ನ ಆಳುವ ಸರ್ಕಾರಗಳು ರೈತರಿಗೆ ತಾಲ್ಲೂಕಿಗೊಂದು ಕೋಲ್ಡ್‌ ಸ್ಟೋರೇಜ್‌ ಕೂಡಾ ಮಾಡಿಸಿಲ್ಲ..

ಇದನ್ನೂ ಓದಿ; ಕಣ್ಣು ದೊಡ್ಡದು ಮಾಡಿದ ಸುಧಾಕರ್‌..!; ʻಕೈʼ ಶಾಸಕರನ್ನೇ ಬುಟ್ಟಿಗೆ ಬೀಳಿಸಿದ್ರಾ ಮಾಜಿ ಸಚಿವ..?

ಟೊಮ್ಯಾಟೋ ಸಂಗ್ರಹಿಸಲು ಕಟ್ಟಿಗೆಯ ಬೂದಿ ಸಾಕು!;

ಟೊಮ್ಯಾಟೋಗೆ ರೇಟು ಇಲ್ಲದಿರುವಾಗ ಅದನ್ನು ಕಟ್ಟಿಗೆಯ ಬೂದಿಯಲ್ಲಿ ಮುಳುಗಿಸಿ ಇಟ್ಟರೆ ಹೆಚ್ಚು ಕಾಲ ಅದು ಕೆಡದೇ ಹಾಗೇಯೇ ಇರುತ್ತದ್ದಂತೆ.. ಸೂಕ್ತ ರೀತಿಯಲ್ಲಿ ಅದನ್ನು ಬೂದಿಯಲ್ಲಿ ಮುಚ್ಚಿಟ್ಟರೆ, ಸುಮಾರು ಆರು ತಿಂಗಳವರೆಗೂ ಸಂಗ್ರಹಿಸಿ ಇಡಬಹುದಂತೆ.. ತಾಂಜಾನಿಯಾದ ರೈತರು ಇದೇ ವಿಧಾನವನ್ನು ಬಳಸಿ ರೇಟು ಇಲ್ಲದಿದ್ದಾಗ ಟೊಮ್ಯಾಟೋವನ್ನು ಸಂಗ್ರಹ ಮಾಡಿಟ್ಟು, ಬೆಲೆ ಬಂದಾಗ ಅನ್ನು ಮಾರುತ್ತಾರೆ.. ತಾಂಜಾನಿಯಾದಲ್ಲಿ ಈ ಕಟ್ಟಿಗೆ ಬೂದಿಯನ್ನು ಟೊಮ್ಯಾಟೋ ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವ ಪದ್ಧತಿ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ..

ಇದನ್ನೂ ಓದಿ;ಚಿಕ್ಕಬಳ್ಳಾಪುರಕ್ಕೆ ಯಾರು ಕಾಂಗ್ರೆಸ್‌ ಅಭ್ಯರ್ಥಿ..?; ಸೋನಿಯಾ ಅಂಗಳದಲ್ಲಿ ಚೆಂಡು..!

ರಟ್ಟಿನ ಬಾಕ್ಸ್‌ನಲ್ಲಿ ಬೂದಿ ಹಾಕಿ ಟೊಮ್ಯಾಟೋ ಸಂಗ್ರಹ;

ತಾಂಜಾನಿಯಾದ ರೈತರು ಟೊಮ್ಯಾಟೋಗೆ ಬೆಲೆ ಇಲ್ಲದಿದ್ದಾಗ ತಮ್ಮ ಬೆಳೆಯನ್ನು ಹಾಳು ಮಾಡುವುದಿಲ್ಲ.. ಬದಲಾಗಿ ಟೊಮ್ಯಾಟೋಗಳನ್ನು ಸಂಗ್ರಹ ಮಾಡುತ್ತಾರೆ.. ರಟ್ಟಿ ಬಾಕ್ಸ್‌ಗಳನ್ನು ತಂದು ಅದಕ್ಕೆ ಮೊದಲು ನಾಲ್ಕು ಇಂಚಿನಷ್ಟು ಬೂದಿಯನ್ನು ತುಂಬುತ್ತಾರೆ. ಅದರ ಮೇಲೆ ಒಂದು ಪದರ ಟೊಮ್ಯಾಟೋಗಳನ್ನು ಜೋಡಿಸುತ್ತಾರೆ.. ನಂತರ ಒಂದು ಪದ ಬೂದಿ ಹಾಕುತ್ತಾರೆ.. ಹೀಗೆ ರಟ್ಟಿಗ ಬಾಕ್ಸ್‌ ತುಂಬಿದ ಮೇಲೆ ಅದನ್ನು ಹೆಚ್ಚು ಗಾಳಿ, ಬೆಳಕು ಬಾರದ ಕೊಠಡಿಯಲ್ಲಿ ಇಡುತ್ತಾರೆ.. ಹಾಗೆ ಇಡುವ ಟೊಮ್ಯಾಟೋ ಆರು ತಿಂಗಳಾದರೂ ಕೆಡವುದಿಲ್ಲವಂತೆ..

ಇದನ್ನೂ ಓದಿ; ಮೈಸೂರಲ್ಲಿ ವಿಜಯೇಂದ್ರ ರಿವರ್ಸ್‌ ಆಪರೇಷನ್‌; ಸಿಎಂಗೆ ನಿರಾಸೆ ತಂದ ʻಸದಾನಂದʼ

ಬಳಸಿದ ಬೂದಿಯನ್ನು ಬೆಳೆಗೆ ಗೊಬ್ಬರವಾಗಿ ಬಳಕೆ;

ತಾಂಜಾನಿಯಾದ ರೈತರು ತಮ್ಮ ಜಮೀನುಗಳಲ್ಲಿರುವ ಮುಳ್ಳಿನ ಗಿಡಗಳು, ಉಪಯೋಗಕ್ಕೆ ಬಾರದ ಮರಗಳನ್ನು ಕಡಿದು ತರುತ್ತಾರೆ.. ಅವುಗಳನ್ನು ಚೆನ್ನಾಗಿ ಸುಡುತ್ತಾರೆ.. ಅದರಿಂದ ಬರುವ ಬೂದಿಯನ್ನು ಒಂದು ಸುರಕ್ಷಿತವಾಗಿ ಸಂಗ್ರಹಿಸಿ ಇಟ್ಟಿರುತ್ತಾರೆ.. ಟೊಮ್ಯಾಟೋ ಬೆಲೆ ಕಡಿಮೆಯಾದಾಗ ಅದನ್ನು ಸಂಗ್ರಹಿಸಿಲು ಈ ಬೂದಿಯನ್ನು ಬಳಸುತ್ತಾರೆ.. ಹೀಗೆ ಬಳಸಿದ ಬೂದಿಯನ್ನು ನಂತರ ಮುಂದಿನ ಟೊಮ್ಯಾಟೋ ಬೆಳೆಗೆ ಬಳಸಲಾಗುತ್ತದೆ.. ಟೊಮ್ಯಾಟೋ ಕೆಡದಂತೆ ಸಂಗ್ರಹಿಸಲು ಬಳಸಿದ್ದ ಬೂದಿಯನ್ನು ಮುಂದಿನ ಟೊಮ್ಯಾಟೋ ಬೆಳೆ ಇಟ್ಟಾಗ ಅದಕ್ಕೆ ಗೊಬ್ಬರವಾಗಿ ಬೂದಿಯನ್ನು ಹಾಕಲಾಗುತ್ತದೆ.. ಇದರಿಂದಾಗಿ ರೈತರು ಎರಡೂ ರೀತಿಯಲ್ಲಿ ಬೂದಿ ಉಪಯೋಗಕ್ಕೆ ಬರುತ್ತದೆ.

ಇದನ್ನೂ ಓದಿ; ಈ ಚುನಾವಣೆ ಬೆಳಗಾವಿ ಜನತೆಯ ಸ್ವಾಭಿಮಾನದ ಪ್ರಶ್ನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

 

Share Post