Politics

ಕಣ್ಣು ದೊಡ್ಡದು ಮಾಡಿದ ಸುಧಾಕರ್‌..!; ʻಕೈʼ ಶಾಸಕರನ್ನೇ ಬುಟ್ಟಿಗೆ ಬೀಳಿಸಿದ್ರಾ ಮಾಜಿ ಸಚಿವ..?

ಚಿಕ್ಕಬಳ್ಳಾಪುರ; ಸುಧಾಕರ್‌ ಅವರನ್ನು ಗೆಲ್ಲೋದಕ್ಕೆ ಬಿಡೋದಿಲ್ಲ ಅಂತ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಹೇಳುತ್ತಿದ್ದಾರೆ.. ಈ ಬೆನ್ನಲ್ಲೇ ಆ ಚಾನ್ಸ್‌ ನಿಮಗೆ ಕೊಡೋದಿಲ್ಲ ನಾವೇ ಸೋಲಿಸ್ತೀವಿ ಅನ್ನೋ ಮಟ್ಟಕ್ಕೆ ಬಿಜೆಪಿ ಕಾರ್ಯಕರ್ತರು ಇಳಿದಂತೆ ಕಾಣುತ್ತಿದೆ.. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಡಾ.ಕೆ.ಸುಧಾಕರ್‌ಗೆ ಬಿಜೆಪಿ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಹಲವೆಡೆ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.. ಸುಧಾಕರ್‌ಗೆ ಎಲ್ಲಿ ಬೆಂಬಲ ಅಗತ್ಯವಿದೆಯೋ ಅಲ್ಲಿಯೇ ಸುಧಾಕರ್‌ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.. ಇದು ಆರಂಭಿಕ ಆಕ್ರೋಶ ಎಂದುಕೊಂಡರೂ ಇದು ಹಾಗೆಯೇ ಮುಂದುವರೆದರೆ ಸುಧಾಕರ್‌ಗೆ ಕಷ್ಟ ಕಷ್ಟ ಅನ್ನುವಂತಹ ಸ್ಥಿತಿ… ಆದ್ರೆ, ಸುಧಾಕರ್‌ ಮಾಡಿರುವ ಈ ಬಾರಿಯ ತಂತ್ರಗಾರಿಕೆ ನೋಡಿದರೆ ಎಂಥವರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ..

ಇದನ್ನೂ ಓದಿ; ಚಿಕ್ಕಬಳ್ಳಾಪುರಕ್ಕೆ ಯಾರು ಕಾಂಗ್ರೆಸ್‌ ಅಭ್ಯರ್ಥಿ..?; ಸೋನಿಯಾ ಅಂಗಳದಲ್ಲಿ ಚೆಂಡು..!

ಕಣ್ಣು ದೊಡ್ಡದು ಮಾಡಿದ ಡಾ.ಕೆ.ಸುಧಾಕರ್‌..!;

ರಾಜಕೀಯದಲ್ಲಿ ದೊಡ್ಡ ಅನುಭವ ಏನೂ ಇಲ್ಲದಿದ್ದರೂ ಡಾ.ಕೆ.ಸುಧಾಕರ್‌ ಈಗಾಗಲೇ ರಾಜಕೀಯ ಪಟ್ಟುಗಳನ್ನೆಲ್ಲಾ ಕಲಿತಿದ್ದಾರೆ.. ಎಲ್ಲಿ ಯಾರನ್ನು ಹಿಡಿದರೆ ಕೆಲಸ ಆಗುತ್ತದೆ ಅನ್ನೋದು ಗೊತ್ತಿದೆ.. ಹೇಗೆ ಪ್ರಚಾರ ಮಾಡಿದರೆ ಗೆಲ್ಲಬಹುದು ಅನ್ನೋದು ಕರಗತ ಮಾಡಿಕೊಂಡಿದ್ದಾರೆ.. ಆದ್ರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನ ಇವೆಲ್ಲವನ್ನೂ ಮೀರಿದವರು.. ಯಾವಾಗ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅರ್ಥವಾಗುವುದಿಲ್ಲ.. ಹಾಗೆ ನೋಡಿದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಪುತ್ರ ಅಲೋಕ್‌ ವಿಶ್ವನಾಥ್‌ ಟಿಕೆಟ್‌ ಬಯಸಿದ್ದರು… ಬಿಜೆಪಿಯಲ್ಲಿನ ಅನುಭವ, ಸಂಘ ಪರಿವಾರದೊಂದಿಗೆ ನಂಟು ನೋಡಿದರೆ ಅಲೋಕ್‌ಗೇ ಟಿಕೆಟ್‌ ಕನ್ಫರ್ಮ್‌ ಆಗಬೇಕಿತ್ತು.. ಆದ್ರೆ ಅದೆಲ್ಲವನ್ನೂ ಮೀರಿ ಸುಧಾಕರ್‌ ಟಿಕೆಟ್‌ ತಂದಿದ್ದಾರೆ.. ಆದ್ರೆ ಸುಧಾಕರ್‌ಗೆ ನೆಲಮಂಗಲ, ದೊಡ್ಡಬಳ್ಳಾಪುರ ಭಾಗದಲ್ಲಿ ವಿರೋಧ ವ್ಯಕ್ತವಾಗಿದೆ.. ಅವರು ಮಾಡಿದ ಸಭೆಗಳಲ್ಲೇ ಅಪಸ್ವರ ಎತ್ತಲಾಗಿದೆ.. ಇದು ಸುಧಾಕರ್‌ ಕಣ್ಣು ದೊಡ್ಡದು ಮಾಡುವಂತೆ ಮಾಡಿದೆ..

ಇದನ್ನೂ ಓದಿ; ಮೈಸೂರಲ್ಲಿ ವಿಜಯೇಂದ್ರ ರಿವರ್ಸ್‌ ಆಪರೇಷನ್‌; ಸಿಎಂಗೆ ನಿರಾಸೆ ತಂದ ʻಸದಾನಂದʼ

ಹಾಗೇ ಕಣ್ಣುಬಿಟ್ಟುಕೊಂಡು ನಿಂತುಬಿಟ್ಟ ಸುಧಾಕರ್‌;

ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ದೊಡ್ಡಬಳ್ಳಾಪುರದಲ್ಲಿ ಧೀರಜ್‌ ಮುನಿರಾಜು ಬಿಜೆಪಿ ಟಿಕೆಟ್‌ ಬಯಸಿದ್ದರು.. ಆದ್ರೆ ಸುಧಾಕರ್‌ ಅವರು ಧೀರಜ್‌ಗೆ ಟಿಕೆಟ್‌ ಕೊಡುವುದಕ್ಕೆ ವಿರೋಧಿಸಿದ್ದರು ಎನ್ನಲಾಗಿದೆ.. ಆದ್ರೂ ಬಿಜೆಪಿಯಿಂದ ಟಿಕೆಟ್‌ ಪಡೆದಿದ್ದ ಧೀರಜ್‌ ಮುನಿರಾಜು ಗೆದ್ದು ಬಂದಿದ್ದಾರೆ.. ಇದೀಗ ಅವರನ್ನು ಮುಂದಿಟ್ಟುಕೊಂಡೇ ದೊಡ್ಡಬಳ್ಳಾಪುರದಲ್ಲಿ ಸಭೆ ಮಾಡಿದ್ದಾರೆ.. ಈ ಸಭೆಯಲ್ಲಿ ಒಂದಷ್ಟು ಮಂದಿ ಆಕ್ರೋಶ ಹೊರಹಾಕಿದ್ದಾರೆ.. ಓ ನಲ್ಲ, ನೀನಲ್ಲ, ಚಿಕ್ಕಬಳ್ಳಾಪುರ ಲೋಕಸಭೆಗೆ ನೀ ಲಾಯಕ್ಕಿಲ್ಲ ಎಂದು ಸೋಷಿಯಲ್‌ ಮೀಡಿಯಾ ದಾಟಿಯಲ್ಲಿ ಟಾಂಗ್‌ ಕೊಟ್ಟಿದ್ದಾರೆ.. ಈ ವೇಳೆ ಸುಧಾಕರ್‌ ಹಾಗೆಯೇ ಕಣ್ಣು ದೊಡ್ಡದು ಮಾಡಿಕೊಂಡು ನಿಂತಿದ್ದರು… ಇದೇನು ವಿಶೇಷವೂ ಅಲ್ಲ… ಇಂತಹ ವಿರೋಧಗಳನ್ನು ನಿಯಂತ್ರಿಸುವುದು ಸುಧಾಕರ್‌ಗೆ ದೊಡ್ಡ ವಿಚಾರವೂ ಆಗುವುದಿಲ್ಲ.. ಆದರೂ ಕೂಡಾ ಒಮ್ಮೆ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಸುಧಾಕರ್‌ಗೆ ಆ ಕ್ಷಣಕ್ಕೆ ಒಂದು ರೀತಿಯಲ್ಲಿ ಏನಪ್ಪಾ ಹೀಗೆ ಆಗೋಯ್ತು ಎಂದೆನಿಸಿರಬಹುದು..

ಇದನ್ನೂ ಓದಿ; ಈ ಚುನಾವಣೆ ಬೆಳಗಾವಿ ಜನತೆಯ ಸ್ವಾಭಿಮಾನದ ಪ್ರಶ್ನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕಾಂಗ್ರೆಸ್‌ ಶಾಸಕರನ್ನೇ ಬುಕ್‌ ಮಾಡಿಕೊಂಡರಾ ಸುಧಾಕರ್‌..?;

ಬಿಜೆಪಿಯಲ್ಲಿನ ವಿರೋಧ, ಶಾಸಕ ವಿಶ್ವನಾಥ್‌ ಮಗನಿಗೆ ಟಿಕೆಟ್‌ ಸಿಗದಿದ್ದಕ್ಕೆ ಸಿಟ್ಟು ಇಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಸುಧಾಕರ್‌ ಸೋಲು, ಗೆಲುವಿನ ಬಗ್ಗೆ ಎಲ್ಲರೂ ಲೆಕಾಚಾರ ಹಾಕುತ್ತಿದ್ದಾರೆ.. ಆದ್ರೆ ಅದಕ್ಕೂ ಮೀರಿ ಮುಂದೆ ಹೋಗಿದ್ದಾರೆ ಎಂಬ ಮಾಹಿತಿ ಇದೆ… ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿನ ಸೋಲನ್ನು ಇನ್ನೂ ಮರೆಯದ ಸುಧಾಕರ್‌, ಈಗಾಗಲೇ ಭಾರೀ ತಂತ್ರಗಾರಿಕೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.. ಮೂಲಗಳ ಪ್ರಕಾರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೂವರು ಕಾಂಗ್ರೆಸ್‌ ಶಾಸಕರನ್ನೇ ಸುಧಾಕರ್‌ ಬುಕ್‌ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.. ಇದಕ್ಕೆ ಹಲವಾರು ಕಾರಣಗಳಿವೆ.. ಈ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಶಾಸಕರು ವೀರಪ್ಪ ಮೊಯ್ಲಿಯವರಿಗೆ ಟಿಕೆಟ್‌ ಬಯಸುತ್ತಿದ್ದಾರೆ.. ಆದ್ರೆ ಹೈಕಮಾಂಡ್‌ ಬೇರೆಯವರಿಗೆ ಟಿಕೆಟ್‌ ನೀಡಲು ಮುಂದಾಗಿದೆ ಎನ್ನಲಾಗಿದೆ.. ಈ ಹಿನ್ನೆಲೆಯಲ್ಲಿ ಹಿಂಬಾಗಿಲ ಮೂಲಕ ಮೂವರು ಶಾಸಕರು ಸುಧಾಕರ್‌ಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ..

ಇದನ್ನೂ ಓದಿ; ಯೂರಿಕ್‌ ಆಮ್ಲ ಕಡಿಮೆ ಮಾಡಲು ಈ ಡ್ರೈಫ್ರೂಟ್ಸ್‌ ತಿನ್ನಿ ಸಾಕು!

ಸುಧಾಕರ್‌ಗೆ ಗೆಲ್ಲಲೇಬೇಕಾದ ಅನಿವಾರ್ಯತೆ..!;

ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷವೇ ಇಲ್ಲದಂತೆ ಮಾಡಿದವರು.. ಆದರೂ ಕೂಡಾ ಸಾಮಾನ್ಯ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.. ಹೀಗಾಗಿ, ತೀವ್ರ ಮುಜುಗರಕ್ಕೊಳಗಾಗಿದ್ದಾರೆ.. ಈ ಕಾರಣಕ್ಕೇ ಅವರು ಕಳೆದ ಕೆಲ ತಿಂಗಳಿಂದ ಗಡ್ಡ, ಮೀಸೆ ಬಿಟ್ಟು ಬೇಸರದಲ್ಲೇ ಇದ್ದರು.. ಇದೀಗ ಫುಲ್‌ ಟ್ರಿಮ್‌ ಆಗಿ ತಮ್ಮ ತಂತ್ರಗಾರಿಕೆ ಶುರು ಮಾಡಿದ್ದಾರೆ.. ಸುಧಾಕರ್‌ ಮೊದಲಿನಿಂದಲೂ ರಾಜಕೀಯ ಮಾಡಿರೋದು, ಸ್ವಂತ ಪಕ್ಷದವರನ್ನು ಸಂಘಟಿಸಿದ್ದಕ್ಕಿದ್ದಂತೆ ಬೇರೆ ಪಕ್ಷದವರನ್ನು ಎಳೆದು ತಂದಿದ್ದೇ ಹೆಚ್ಚು.. ಲೋಕಸಭಾ ಚುನಾವಣೆಯಲ್ಲೂ ಅದೇ ತಂತ್ರಗಾರಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ..

ಇದನ್ನೂ ಓದಿ; ಹೀರೇಕಾಯಿ ಬಗ್ಗೆ ನಿರ್ಲಕ್ಷ್ಯ ಬೇಡ; ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಗೊತ್ತಾ..?

ನೆಲಮಂಗಲ, ದೊಡ್ಡಬಳ್ಳಾಪುರ, ಯಲಹಂಕ ಬಗ್ಗೆ ಅನುಮಾನ;

ಸುಧಾಕರ್‌ಗೆ ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ಯಲಹಂಕ ಕ್ಷೇತ್ರಗಳಿಂದ ಹೆಚ್ಚು ಮತ ಸಿಗುವ ಬಗ್ಗೆ ಅನುಮಾನ ಇದೆ.. ಯಾಕಂದ್ರೆ ಅಲೋಕ್‌ ವಿಶ್ವನಾಥ್‌ ಟಿಕೆಟ್‌ ಸಿಗದಿದ್ದರಿಂದ ಇಲ್ಲಿ ಸ್ವಲ್ಪ ಹಿನ್ನಡೆ ಆಗಲೂ ಬಹುದು.. ಇದನ್ನು ಮನಗಂಡೇ ಸುಧಾಕರ್‌ ಅವರು, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ ಹಾಗೂ ಹೊಸಕೋಟೆ ವಿಧಾನಸಭಾ ಕ್ಷೇತ್ರಗಳ ಮತಗಳನ್ನು ಪಕ್ಕಾ ಮಾಡಿಕೊಳ್ಳಲು ಹೊರಟಿದಿದ್ದಾರೆ.. ಈ ಕ್ಷೇತ್ರದಲ್ಲಿ ದಾಖಲೆ ಮಟ್ಟದಲ್ಲಿ, ಅದೂ ಕೂಡಾ ಬೇರೆ ಪಕ್ಷದ ಮತಗಳನ್ನು ಹೆಚ್ಚು ಸೆಳೆಯೋ ಪ್ಲ್ಯಾನ್‌ ಮಾಡಲಾಗಿದ್ದು, ಅದಕ್ಕೆ ಅಭಯ ಕೂಡಾ ಸಿಕ್ಕಿದೆ ಎನ್ನಲಾಗ್ತಿದೆ..

ಇದನ್ನೂ ಓದಿ; Loksabha; ಅಭ್ಯರ್ಥಿ ಆಯ್ಕೆಯಲ್ಲಿ ಯಡಿಯೂರಪ್ಪ ಎಡವಿದ್ರಾ..?; ಬಿಜೆಪಿಯಲ್ಲಿ ಇಷ್ಟೊಂದು ಅಪಸ್ವರ ಯಾಕೆ..?

 

Share Post