Politics

ಚಿಕ್ಕಬಳ್ಳಾಪುರಕ್ಕೆ ಯಾರು ಕಾಂಗ್ರೆಸ್‌ ಅಭ್ಯರ್ಥಿ..?; ಸೋನಿಯಾ ಅಂಗಳದಲ್ಲಿ ಚೆಂಡು..!

ಬೆಂಗಳೂರು; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಫಿಕ್ಸ್‌ ಆಗಿದೆ.. ಡಾ.ಕೆ.ಸುಧಾಕರ್‌ ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ.. ವಿಧಾನಸಭಾ ಚುನಾವಣೆಯಲ್ಲಿ ಸೋತ ಮೇಲೆ ಗಡ್ಡ, ಮೀಸೆ ಬಿಟ್ಟಿದ್ದ ಸುಧಾಕರ್‌ ಈಗ ಎಲ್ಲವನ್ನೂ ಬೋಳಿಸಿಕೊಂಡು ಫುಲ್‌ ಟ್ರಿಮ್‌ ಆಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.. ಆದ್ರೆ ಇವರನ್ನು ಎದರಿಸೋ ಕಾಂಗ್ರೆಸ್‌ ಕಲಿ ಯಾರು ಅನ್ನೋದೇ ಇನ್ನೂ ಗೊತ್ತಾಗುತ್ತಿಲ್ಲ… ಇಲ್ಲಿ ಕಾಂಗ್ರೆಸ್‌ ಟಿಕೆಟ್‌ಗೇ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.. ಯಾರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕರೆ ಫಲಿತಾಂಶ ಹೇಗಿರುತ್ತೆ ನೋಡೋಣ ಬನ್ನಿ…

ಇದನ್ನೂ ಓದಿ; ಮೈಸೂರಲ್ಲಿ ವಿಜಯೇಂದ್ರ ರಿವರ್ಸ್‌ ಆಪರೇಷನ್‌; ಸಿಎಂಗೆ ನಿರಾಸೆ ತಂದ ʻಸದಾನಂದʼ

ಟಿಕೆಟ್‌ಗಾಗಿ ಮೂವರ ನಡುವೆ ಸ್ಪರ್ಧೆ;

ಕಾಂಗ್ರೆಸ್‌ನಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮೂವರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ.. ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ ಹಾಗೂ ಶಿವಶಂಕರರೆಡ್ಡಿ ಟಿಕೆಟ್‌ಗಾಗಿ ಫೈಟ್‌ ನಡೆಸಿದ್ದಾರೆ.. ಒಂದಿಲ್ಲೊಂದು ಕಾರಣಕ್ಕೆ ಮೂವರೂ ಪ್ರಭಾವಿಗಳೇ.. ಮೂವರ ಪರವಾಗಿಯೂ ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ನಡೆಸುತ್ತಿರುವವರಿದ್ದಾರೆ.. ಆದ್ರೆ ಯಾರ ಕೈ ಮೇಲಾಗುತ್ತೆ ಅನ್ನೋದೇ ಪ್ರಶ್ನೆ.. ಸಿಎಂ ಸಿದ್ದರಾಮಯ್ಯ ಅವರು ಅಟ್‌ ಎನಿ ಕಾಸ್ಟ್‌ ರಕ್ಷಾ ರಾಮಯ್ಯಗೇ ಟಿಕೆಟ್‌ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.. ವೀರಪ್ಪ ಮೊಯ್ಲಿ ಪರ ಕೆಲ ಹೈಕಮಾಂಡ್‌ ನಾಯಕರೇ ಇದ್ದಾರೆ.. ಜೊತೆಗೆ ಸ್ಥಳೀಯ ಕಾಂಗ್ರೆಸ್‌ ಶಾಸಕರು ವೀರಪ್ಪ ಮೊಯ್ಲಿ ಪರವಾಗಿ ನಿಂತಿದ್ದಾರೆ.. ಇನ್ನು ಗೌರಿಬಿದನೂರಿನ ಶಿವಶಂಕರರೆಡ್ಡಿ ಪರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಲಾಬಿ ಮಾಡುತ್ತಿದ್ದಾರೆ…

ಇದನ್ನೂ ಓದಿ; ಮಂಡ್ಯಕ್ಕೆ ಕುಮಾರಸ್ವಾಮಿ; ಕೋಲಾರಕ್ಕೆ ಯಾರು ಗೊತ್ತಾ..?

 

ವೀರಪ್ಪ ಮೊಯಿಗೆ ಟಿಕೆಟ್‌ ನೀಡಿದರೆ ಏನಾಗುತ್ತೆ..?

ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಈಗಾಗಲೇ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದಾರೆ.. ಕಳೆದ ಬಾರಿ ಸೋಲನ್ನೂ ಕಂಡಿದ್ದಾರೆ… ಇಳಿ ವಯಸ್ಸಿನಲ್ಲಿ ವೀರಪ್ಪ ಮೊಯ್ಲಿ ಮತ್ತೊಂದು ಅವಕಾಶ ಕೋರುತ್ತಿದ್ದಾರೆ… ಕರಾವಳಿ ಮೂಲದ ವೀರಪ್ಪ ಮೊಯ್ಲಿಗೆ ರಾಜಕೀಯವಾಗಿ ಮುರಹುಟ್ಟು ನೀಡಿದ್ದು ಚಿಕ್ಕಬಳ್ಳಾಪುರದ ಜನ.. ಎತ್ತಿನಹೊಳೆ ಯೋಜನೆ ಹೆಸರಲ್ಲೇ ವೀರಪ್ಪ ಮೊಯ್ಲಿ ಎರಡು ಬಾರಿ ಗೆದ್ದು ಬಂದರು.. ಆದ್ರೆ ನೀರು ಮಾತ್ರ ಬರಲಿಲ್ಲ… ಕೇಂದ್ರ ಸಚಿವರಾದರೂ ಅವರು ಚಿಕ್ಕಬಳ್ಳಾಪುರಕ್ಕೆ ಹೇಳಿಕೊಳ್ಳುವಂತಹದ್ದೇನೂ ಮಾಡಿಲ್ಲ… ಸೋತ ಮೇಲೆ ಹೆಚ್ಚು ಕ್ಷೇತ್ರಕ್ಕೆ ಭೇಟಿಯೂ ಕೊಡಲಿಲ್ಲ… ಒಂದೇನು ಅಂದ್ರೆ ಎಲ್ಲರಿಗೂ ಸುಲಭವಾಗಿ ಸಿಗುತ್ತಾರೆ… ಅದ್ರಲ್ಲೂ ಶಾಸಕರ ಜೊತೆಗೆ ಒಳ್ಳೆ ಸಂಪರ್ಕ ಇಟ್ಟುಕೊಂಡಿದ್ದಾರೆ… ಆದ್ರೆ ಕಾರ್ಯಕರ್ತರು ಹಾಗೂ ಮತದಾರರಿಗೆ ವೀರಪ್ಪ ಮೊಯ್ಲಿ ಬಗ್ಗೆ ಹೆಚ್ಚಿನ ಒಲವಿಲ್ಲ… ಜೊತೆಗೆ ಯುವ ನಾಯಕ ಸುಧಾಕರ್‌ ಎದುರು ವೀರಪ್ಪ ಮೊಯ್ಲಿ ಸಪ್ಪೆಯಾಗಬಹುದು ಎಂಬುದು ಎಲ್ಲರ ಲೆಕ್ಕಾಚಾರ..

ಏನೇ ಆದರೂ ವೀರಪ್ಪ ಮೊಯ್ಲಿ ಹೈಕಮಾಂಡ್‌ಗೆ ಹತ್ತಿರದವರು.. ಸೋನಿಯಾ ಗಾಂಧಿವರೆಗೂ ಎಲ್ಲರೂ ವೀರಪ್ಪ ಮೊಯ್ಲಿಗೆ ಹತ್ತಿರದವರೇ.. ಆಪ್ತರು ಅನ್ನೋ ಕಾರಣಕ್ಕೆ ವೀರಪ್ಪ ಮೊಯ್ಲಿಗೆ ಟಿಕೆಟ್‌ ಕೊಟ್ಟರೆ ಏನಾಗುತ್ತೆ ಅನ್ನೋದು ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರಿಗಷ್ಟೇ ಗೊತ್ತು..

ಇದನ್ನೂ ಓದಿ; ಈ ಚುನಾವಣೆ ಬೆಳಗಾವಿ ಜನತೆಯ ಸ್ವಾಭಿಮಾನದ ಪ್ರಶ್ನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ರಕ್ಷಾ ರಾಮಯ್ಯ ಟಿಕೆಟ್‌ ಗಿಟ್ಟಿಸಿಕೊಳ್ತಾರಾ..?;

ಎಂ.ಎಸ್‌.ರಾಮಯ್ಯ ಅವರ ಮೊಮ್ಮಗ ರಕ್ಷಾ ರಾಮಯ್ಯ… ಈ ಭಾಗದಲ್ಲಿ ಕೊಂಚ ಪ್ರಬಲವಾಗಿರುವ ಬಲಿಜ ಸಮುದಾಯದ ಯುವ ನಾಯಕ… ಯುವ ಕಾಂಗ್ರೆಸ್‌ ಅಧ್ಯಕ್ಷರೂ ಆಗಿದ್ದವರು.. ಅವರ ತಂದೆ ಕೂಡಾ ಕಾಂಗ್ರೆಸ್‌ ನಾಯಕರು… ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 1.80 ಲಕ್ಷಕ್ಕೂ ಅಧಿಕ ಬಲಿಜ ಸಮುದಾಯದ ಮತಗಳಿವೆ.. ಇದರ ಜೊತೆಗೆ ರಕ್ಷಾ ರಾಮಯ್ಯ ಅವರ ದೊಡ್ಡಪ್ಪ ಕೈವಾರ ಕ್ಷೇತ್ರ ಧರ್ಮಾಧಿಕಾರಿಗಳು.. ಈ ಭಾಗದ ಲಕ್ಷಾಂತರ ಜನ ಈ ಕ್ಷೇತ್ರಕ್ಕೆ ನಡೆದುಕೊಳ್ಳುತ್ತಾರೆ.. ಜೊತೆಗೆ ಎಂಎಸ್‌ ರಾಮಯ್ಯ ಆಸ್ಪತ್ರೆಗೂ ಈ ಭಾಗದ ಜನಕ್ಕೂ ನಂಟಿದೆ.. ಜೊತೆಗೆ ಯುವಕ ಬೇರೆ, ಹಣಬಲವೂ ಕೂಡಾ ಇದೆ.. ಇಷ್ಟೆಲ್ಲಾ ಇದ್ದರೂ ರಕ್ಷಾ ರಾಮಯ್ಯ ಕ್ಷೇತ್ರದಲ್ಲಿ ಹೆಚ್ಚು ಓಡಾಡಿಲ್ಲ.. ಕಾರ್ಯಕರ್ತರ ಜೊತೆ ಸಭೆಗಳನ್ನು ನಡೆಸಿಲ್ಲ.. ಟಿಕೆಟ್‌ ಸಿಕ್ಕ ಮೇಲೆ ಓಡಾಡೋಣ ಅಂತ ಕಾಯುತ್ತಿದ್ದಾರೆ.. ಹೀಗಿದ್ದರೂ ರಕ್ಷಾ ರಾಮಯ್ಯ ಬಗ್ಗೆ ಒಲವಿದೆ.. ಇನ್ನು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಎಲ್ಲಾ ಕಡೆ ಯುವಕರಿಗೆ ಟಿಕೆಟ್‌ ಕೊಟ್ಟಿದೆ.. ಇಲ್ಲೂ ಕೂಡಾ ರಕ್ಷಾ ರಾಮಯ್ಯಗೆ ಟಿಕೆಟ್‌ ನೀಡಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.. ಇನ್ನೊಂದೆಡೆ ಹಲವು ರೀತಿಯಲ್ಲಿ ಎಂ.ಎಸ್‌.ರಾಮಯ್ಯ  ಅವರು ಕುಟುಂಬಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯವಾಗಿತ್ತು.. ಈ ಬಾರಿ ರಕ್ಷಾ ರಾಮಯ್ಯಗೆ ಟಿಕೆಟ್‌ ನೀಡುವುದರ ಮೂಲಕ ಅವರಿಗೆ ನ್ಯಾಯ ಒದಗಿಸಿಕೊಡುತ್ತಾರೆಂಬ ಮಾತಿದೆ.. ಇನ್ನು ಈ ಬಾರಿ ಸಿಎಂ ಸಿದ್ದರಾಮಯ್ಯ ಕೂಡಾ ರಕ್ಷಾ ರಾಮಯ್ಯ ಪರವಾಗಿ ನಿಂತಿದ್ದಾರೆ.. ರಕ್ಷಾ ರಾಮಯ್ಯ ಯುವಕರಾದ್ದರಿಂದ, ಹೊಸ ಅಭ್ಯರ್ಥಿ ಆಗುವುದರಿಂದ ಸುಧಾಕರ್‌ಗೆ ಫೈಟ್‌ ನೀಡಲು ಅನುಕೂಲವಾಗಬಹುದು..

ಇದನ್ನೂ ಓದಿ; ಕಾಂಗ್ರೆಸ್ ನಿಂದಾಗಿ ಇಂದು ಭಾರತ ವಿಶ್ವಗುರು ಆಗಿದೆ; ಸತೀಶ್ ಜಾರಕಿಹೊಳಿ

ಶಿವಶಂಕರರೆಡ್ಡಿಗೆ ಟಿಕೆಟ್‌ ಕೊಟ್ಟರೆ ಗೆಲ್ತಾರಾ..?

ಎನ್‌.ಹೆಚ್‌.ಶಿವಶಂಕರೆಡ್ಡಿ ಸಂಭಾವಿತ ಕಾಂಗ್ರೆಸ್‌ ನಾಯಕರು.. ಸತತ ಐದು ಬಾರಿ ಶಾಸಕರಾಗಿದ್ದರು.. ಕಳೆದ ಬಾರಿ ಸೋತಿದ್ದಾರೆ.. ಇವರು ಗೌರಿಬಿದನೂರಿಗೆ ಸೀಮಿತ ರಾಜಕಾರಣಿ… ಆದ್ರೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು 4.5ಲಕ್ಷದಷ್ಟಿವೆ.. ಈ ಮತಗಳನ್ನು ಗಮನದಲ್ಲಿಟ್ಟುಕೊಂಡು ಶಿವಶಂಕರರೆಡ್ಡಿಗೆ ಟಿಕೆಟ್‌ ಕೊಟ್ಟರೆ ಹೇಗೆ ಎಂಬ ಬಗ್ಗೆ ಚಿಂತನೆ ನಡೆದಿದೆ… ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶಿವಶಂಕರರೆಡ್ಡಿ ಪರವಾಗಿ ಲಅಭಿ ಮಾಡುತ್ತಿದ್ದಾರೆ.. ಆದ್ರೆ ಶಿವಶಂಕರರೆಡ್ಡಿಯವರಿಗೆ ಹಣಬಲವಾಗಲೀ, ಜನಬಲವಾಗಲೀ ಇಲ್ಲ ಅನ್ನೋ ಮಾತುಗಳಿವೆ.. ಜೊತೆಗೆ ಅವರು ಗೌರಿಬಿದನೂರು, ಚಿಕ್ಕಬಳ್ಳಾಪುರಕ್ಕೆ ಮಾತ್ರ ಸೀಮಿತ, ಉಳಿದ ಪ್ರದೇಶದಲ್ಲಿ ಅಷ್ಟೊಂದು ಜನಕ್ಕೆ ಗೊತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.. ಇದರ ನಡುವೆ ಶಿವಶಂಕರರೆಡ್ಡಿ ಟಿಕೆಟ್‌ ಗಿಟ್ಟಿಸಿಕೊಂಡರೆ ಅದೊಂದು ಪವಾಡವೇ ಸರಿ..

ಇದನ್ನೂ ಓದಿ; Loksabha; ಅಭ್ಯರ್ಥಿ ಆಯ್ಕೆಯಲ್ಲಿ ಯಡಿಯೂರಪ್ಪ ಎಡವಿದ್ರಾ..?; ಬಿಜೆಪಿಯಲ್ಲಿ ಇಷ್ಟೊಂದು ಅಪಸ್ವರ ಯಾಕೆ..?

ಆರೂವರೆ ಲಕ್ಷದಷ್ಟಿರುವ ದಲಿತ ಮತಗಳು!;

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಹೆಚ್ಚಿವೆ.. ಆದ್ರೆ, ಎಸ್‌ಸಿ, ಎಸ್ಟಿ ಮತಗಳು ಇಲ್ಲಿ ನಿರ್ಣಾಯಕವಾಗುತ್ತವೆ.. ಯಾಕಂದ್ರೆ ಈ ಕ್ಷೇತ್ರದಲ್ಲಿ ಎಸ್‌ಸಿ, ಎಸ್‌ಟಿ ಮತಗಳು 6.5 ಲಕ್ಷಕ್ಕೂ ಅಧಿಕ ಇವೆ.. ದಲಿತರ ಮತಗಳು ಯಾರ ಪಾಲಾಗುತ್ತವೋ ಅವರು ಗೆಲ್ಲೋದು ಗ್ಯಾರೆಂಟಿ.. ಹೀಗಾಗಿ, ಜನ ಸಾಮಾನ್ಯರ ಜೊತೆ ಸುಲಭವಾಗಿ ಬೆರೆಯುವ, ಬಡವರ ಪರವಾದಂತಹ ಕಾಳಜಿ ಇರುವ ನಾಯಕನಿಗೆ ಇಲ್ಲಿ ಮತ ಸಿಗುತ್ತದೆ.. ಹಿಂದಿನ ಫಲಿತಾಂಶಗಳನ್ನು ನೋಡಿದರೆ ಎಂದಿಗೂ ಇಲ್ಲಿ ಜಾತಿ ಕೆಲಸ ಮಾಡೇ ಇಲ್ಲ.. ಈ ಹಿಂದೆ ಪಕ್ಷ ನಿರ್ಣಾಯಕವಾಗುತ್ತಿತ್ತಾದರೂ ಈಗ ಅದೂ ಇಲ್ಲ… ವ್ಯಕ್ತಿ ಹಾಗೂ ಆತನ ವರ್ತನೆ ಮೇಲೆ ಇಲ್ಲಿನ ಜನ ಮತ ಹಾಕುತ್ತಾರೆ..

ಇದನ್ನೂ ಓದಿ; ಮೈಸೂರು ಗೆಲ್ಲಲು ʻಆಪರೇಷನ್‌ ಹಸ್ತʼ; ಯಡಿಯೂರಪ್ಪ ಆಪ್ತರೇ ಸಿಎಂ ಸಿದ್ದರಾಮಯ್ಯ ಟಾರ್ಗೆಟ್‌

ಇಂದಿನ ಸಭೆಯಲ್ಲಿ ಅಭ್ಯರ್ಥಿ ನಿರ್ಧಾರ;

ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ.. ಸಭೆಯಲ್ಲಿ ಅಭ್ಯರ್ಥಿಯ ಆಯ್ಕೆ ಅಂತಿಮವಾಗಲಿದೆ.. ಸೋನಿಯಾ ಗಾಂಧಿ ನಿರ್ಧಾರದ ಮೇಲೆ ಅಭ್ಯರ್ಥಿ ಯಾರಾಗ್ತಾರೆ ಅನ್ನೋದು ನಿಂತಿದೆ.. ಆಪ್ತ ಎಂಬ ಕಾರಣಕ್ಕೆ ವೀರಪ್ಪ ಮೊಯ್ಲಿಗೆ ಟಿಕೆಟ್‌ ನೀಡಿದರೆ ಸುಧಾಕರ್‌ ಗೆಲುವು ಸುಲಭವಾಗಬಹುದು ಎಂದು ಹೇಳಲಾಗುತ್ತಿದೆ.. ಕ್ಷೇತ್ರದ ಜನ ನಾಡಿಮಿಡಿತದ ಪ್ರಕಾದ ರಕ್ಷಾ ರಾಮಯ್ಯ ಹಾಗೂ ಸುಧಾಕರ್‌ ನಡುವೆ ಫೈಟ್‌ ನಡೆದರೆ ಅದು ಭಾರೀ ಕುತೂಹಲ ಕೆರಳಿಸುತ್ತೆ..

 

Share Post