Politics

ಮೈಸೂರು ಗೆಲ್ಲಲು ʻಆಪರೇಷನ್‌ ಹಸ್ತʼ; ಯಡಿಯೂರಪ್ಪ ಆಪ್ತರೇ ಸಿಎಂ ಸಿದ್ದರಾಮಯ್ಯ ಟಾರ್ಗೆಟ್‌

ಮೈಸೂರು; ರಾಜ್ಯದಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಕೂಡಾ ಒಂದು.. ಯಾಕಂದ್ರೆ ಈ ಕ್ಷೇತ್ರದಲ್ಲಿ ರಾಜ ವಂಶಸ್ಥ ಯದುವೀರ್‌ ಒಡೆಯರ್‌ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.. ಇದು ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್‌ಗೆ ಯದುವೀರ್‌ರನ್ನು ಸೋಲಿಸುವುದು ದೊಡ್ಡ ಸವಾಲಾಗಿದೆ..

ಇದನ್ನೂ ಓದಿ; ಜೋಳದ ರೊಟ್ಟಿ ತಿಂದವರು ಗಟ್ಟಿಯಾಗಿರುತ್ತಾರೆ..!; ಯಾಕೆ ಗೊತ್ತಾ..?

ಆಪರೇಷನ್‌ ಹಸ್ತಕ್ಕಿಳಿದ ಸಿಎಂ ಸಿದ್ದರಾಮಯ್ಯ;

ಸಿಎಂ ಸಿದ್ದರಾಮಯ್ಯ ರೆಸಾರ್ಟ್‌ ರಾಜಕೀಯ ಮಾಡಿದ್ದು ತುಂಬಾನೇ ಕಡಿಮೆ.. ಜೊತೆಗೆ ಆಪರೇಷನ್‌ ಹಸ್ತಕ್ಕೂ ಸೀರಿಯಸ್ಸಾಗಿ ಕೈಹಾಕಿದ ಉದಾಹರಣೆಗಳು ಸಿಗೋದಿಲ್ಲ.. ಆದ್ರೆ ಈಗ ಅವರಿಗೆ ಅನಿವಾರ್ಯವಾಗಿಬಿಟ್ಟಿದೆ.. ಯಾಕಂದ್ರೆ, ಮೈಸೂರು-ಕೊಡಗು ಕ್ಷೇತ್ರವನ್ನು ಗೆಲ್ಲಿಸಿಕೊಳ್ಳಲೇಬೇಕಾದ ಅವಶ್ಯಕತೆ ಸಿಎಂ ಸಿದ್ದರಾಮಯ್ಯ ಅವರಿಗಿದೆ.. ಹೀಗಾಗಿಯೇ ಅವರು ಕಳೆದ ಮೂರು ದಿನಗಳಿಂದ ಮೈಸೂರುಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೆಚ್‌ಡಿ ಕೋಟೆಯ ಖಾಸಗಿ ರೆಸಾರ್ಟ್‌ನಲ್ಲಿ ಕುಳಿತು ಆಪರೇಷನ್‌ ಶುರು ಮಾಡಿದ್ದಾರೆ..

ಇದನ್ನೂ ಓದಿ; ಬಾಳೆಹಣ್ಣಿಗಿಂತ ಬಾಳೆಕಾಯಿ ಹೆಚ್ಚು ಆರೋಗ್ಯವಂತೆ; ಇದ್ರಿಂದ ಏನೆಲ್ಲಾ ಪ್ರಯೋಜನ..?

ಯಾರು ಬಂದರೂ ಬೇಡ ಎನ್ನಬೇಡಿ;

ಮೊದಲು ಯಾರಾದರೂ ಕಾಂಗ್ರೆಸ್‌ ಪಕ್ಷಕ್ಕೆ ಬರುತ್ತಾರೆ ಎಂದರೆ ಸ್ವಾಗತ ಮಾಡುವುದಕ್ಕೆ ಪೂರ್ವಾಪರ ವಿಚಾರಿಸುತ್ತಿದ್ದ ಸಿದ್ದರಾಮಯ್ಯ ಈಗ ಬದಲಾಗಿದ್ದಾರೆ.. ಯಾರೇ ಬಂದರೂ ಕೂಡಾ ಬೇಡ ಎನ್ನದೇ ಪಕ್ಷಕ್ಕೆ ಸ್ವಾಗತ ಮಾಡಿ ಎಂದು ಮೈಸೂರು ಭಾಗದ ಮುಖಂಡರಿಗೆ ಹಾಗೂ ಕೆಪಿಸಿಸಿ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.. ಇನ್ನು ಸ್ವತಃ ಸಿದ್ದರಾಮಯ್ಯನವರೇ ಕುಳಿತು ಆಪರೇಷನ್‌ ಹಸ್ತ ಶುರು ಮಾಡಿದ್ದಾರೆ.. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮತ ತಂದುಕೊಡುವ ನಾಯಕರನ್ನು ಹುಡುಕಿ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.. ಈಗಾಗಲೇ ಒಬ್ಬ ನಾಯಕ ಕಾಂಗ್ರೆಸ್‌ಗೆ ಸೇರುವುದಾಗಿ ಘೋಷಿಸಿದ್ದಾರೆ.. ಇಂದು ಅಧಿಕೃತವಾಗಿ ಕಾಂಗ್ರೆಸ್‌ ಸೇರುತ್ತಿದ್ದಾರೆ..

ಇದನ್ನೂ ಓದಿ; ಮಲ್ಲಿಗೆ ಹೂವಿನ ಎಣ್ಣೆಯಿಂದ ನೋವು ಮಾಯ, ಮಾನಸಿಕ ಒತ್ತಡ ದೂರ!

ಹೆಚ್‌.ವಿ.ರಾಜೀವ್‌ ರನ್ನು ಸೆಳೆದ ಸಿದ್ದರಾಮಯ್ಯ;

ಮೈಸೂರು ನಗರದಲ್ಲಿ ಹೆಚ್‌.ವಿ.ರಾಜೀವ್‌ ಸಾಕಷ್ಟು ಪ್ರಭಾವಿ ರಾಜಕಾರಣಿ.. ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು.. ಆದ್ರೆ ಅವರಿಗೆ ಟಿಕೆಟ್‌ ಸಿಗಲಿಲ್ಲ.. ಇದರಿಂದಾಗಿ ಅವರು ಬಿಜೆಪಿ ನಾಯಕರ ಜೊತೆ ಮುನಿಸಿಕೊಂಡಿದ್ದರು.. ಯಡಿಯೂರಪ್ಪ ಅವರ ಆಪ್ತರೂ ಆಗಿದ್ದ ಹೆಚ್‌.ವಿ.ರಾಜೀವ್‌ ಈ ಹಿಂದೆ ಮೂಡಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.. ಇದೀಗ ಅವರನ್ನು ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್‌ ಸೆಳೆದಿದ್ದಾರೆ.. ಇದರಿಂದಾಗಿ ಬಿಜೆಪಿಗೆ ಕೊಂಚ ಹಿನ್ನಡೆಯಾದಂತಾಗಿದೆ..

ಲಿಂಗಾಯತ ನಾಯಕ ಸದಾನಂದಗೆ ಸಿದ್ದರಾಮಯ್ಯ ಗಾಳ;

ಇನ್ನು ವರುಣಾ ಕ್ಷೇತ್ರದಲ್ಲಿ ಸದಾನಂದ ಅವರು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು.. ವೀರಶೈವ ಲಿಂಗಾಯತ ನಾಯಕರಾಗಿರುವ ಸದಾನಂದ ಅವರು, ವರುಣಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಸಾಕಷ್ಟು ಪ್ರಬಲವಾಗಿ ಸಂಘಟಿಸಿದ್ದರು.. ಆದ್ರೆ, ಸೋಮಣ್ಣ ಅವರಿಗೆ ಟಿಕೆಟ್‌ ನೀಡುವ ಸಲುವಾಗಿ ಸದಾನಂದರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು.. ಹೀಗಾಗಿ ಸದಾನಂದ ಅವರು ಅಸಮಾಧಾನಗೊಂಡಿದ್ದರು.. ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರಿಗೆ ಅತ್ಯಂತ ಆಪ್ತರಾಗಿದ್ದ ಸದಾನಂದ ಅವರಿಗೆ ಈಗ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಗಾಳ ಹಾಕಿದ್ದಾರೆ.. ಸದಾನಂದ ಅವರು ಬಹುತೇಕ ಕಾಂಗ್ರೆಸ್‌ ಸೇರೋದು ಗ್ಯಾರೆಂಟಿಯಾಗಿದೆ.. ಸದಾನಂದ ಅವರು ಕಾಂಗ್ರೆಸ್‌ ಸೇರೋದ್ರಿಂದ ಈ ಭಾಗದ ವೀರಶೈವ ಲಿಂಗಾಯತ ಮತಗಳನ್ನು ಸೆಳೆಯಲು ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಮಾತು ಕೇಳುತ್ತಿಲ್ಲ ಅಂತ ಮಕ್ಕಳನ್ನು ಹೊಡೆಯುತ್ತಿದ್ದೀರಾ..?; ಖಂಡಿತ ಅದು ತಪ್ಪು

ಮೈಸೂರು-ಕೊಡಗು, ಚಾಮರಾಜನಗರ ಕ್ಷೇತ್ರ ಗೆಲ್ಲಲು ಪ್ಲ್ಯಾನ್‌;

ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರು-ಕೊಡಗು ಕ್ಷೇತ್ರ.. ಇದರ ಜೊತೆಗೆ ಪಕ್ಕದ ಚಾಮರಾಜನಗರ ಕ್ಷೇತ್ರವನ್ನೂ ಗೆಲ್ಲೋದಕ್ಕೆ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದಾರೆ.. ಅಲ್ಲಿನ ಇತರೆ ಪಕ್ಷದ ನಾಯಕರನ್ನು ಸೆಳೆಯುವ ಪ್ರಯತ್ನಗಳು ಕೂಡಾ ನಡೆಯುತ್ತಿವೆ.. ಇನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಹಲವು ನಾಯಕರು, ಮುಖಂಡರನ್ನು ಸೆಳೆಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.. ಮಾಜಿ ಮೇಯರ್ ಎಲ್.ಬೈರಪ್ಪ, ಪಾಲಿಕೆಯ ಕೆಲವು ಮಾಜಿ ಸದಸ್ಯರು ಕೂಡಾ ಕಾಂಗ್ರೆಸ್‌ ಬಾಗಿಲಲ್ಲಿ ನಿಂತಿದ್ದಾರೆ.. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿರುವುದರಿಂದ ಹಲವು ಕೆಲಸಗಳು ಆಗುತ್ತವೆ ಎಂಬ ದೃಷ್ಟಿಯಿಂದ ಹಲವಾರು ಜೆಡಿಎಸ್‌ ಹಾಗೂ ಬಿಜೆಪಿ ಮುಖಂಡರು ಕಾಂಗ್ರೆಸ್‌ ಸೇರೋದಕ್ಕೆ ಸಿದ್ಧತೆ ನಡೆಸಿದ್ದಾರೆ..

ಇದನ್ನೂ ಓದಿ; ದಾವಣಗೆರೆಯಲ್ಲಿ ಬಿಜೆಪಿಗೆ ಬಂಡಾಯದ ಭೀತಿ; ಬಿಎಸ್‌ವೈ ಸಂಧಾನಕ್ಕೂ ಬಗ್ಗದ ನಾಯಕರು!

ಶಾಸಕರು, ಮುಖಂಡರ ಜೊತೆ ಸಿದ್ದರಾಮಯ್ಯ ಸಭೆ;

ಖಾಸಗಿ ರೆಸಾರ್ಟ್‌ನಲ್ಲಿ ಮೂರು ದಿನಗಳಿಂದ ಕುಳಿತಿದ್ದ ಸಿದ್ದರಾಮಯ್ಯ ಅವರು ಈಗಾಗಲೇ ಮೈಸೂರು-ಕೊಡಗು ಹಾಗೂ ಚಾಮರಾಜನಗರ ಕ್ಷೇತ್ರಗಳ ಕಾಂಗ್ರೆಸ್‌ ಶಾಸಕರು, ಮುಖಂಡರ ಜೊತೆ ಸಭೆಗಳನ್ನು ಮಾಡಿದ್ದಾರೆ.. ಎರಡೂ ಕ್ಷೇತ್ರಗಳನ್ನು ಗೆಲ್ಲೋದಕ್ಕೆ ಏನೆಲ್ಲಾ ತಂತ್ರಗಾರಿಕೆ ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ.. ವಿಶ್ರಾಂತಿ ನೆಪದಲ್ಲಿ ಕಳೆದ ಮೂರು ದಿನಗಳಿಂದ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ಸಿದ್ದರಾಮಯ್ಯ ಅವರು, ಎರಡೂ ಕ್ಷೇತ್ರಗಳ ಗೆಲುವಿಗಾಗಿ ತಂತ್ರಗಾರಿಕೆ ಶುರು ಮಾಡಿದ್ದಾರೆ.. ಮುಂದಿನ ದಿನಗಳಲ್ಲಿ ಅವರು ರಾಜ್ಯಾದ್ಯಂತ ಓಡಾಡಬೇಕಾಗಿದೆ.. ಹೀಗಾಗಿ ಮೈಸೂರು ಕಡೆ ಹೆಚ್ಚಿನ ಗಮನ ಕೊಡೋದಕ್ಕೆ ಆಗದೇ ಇರಬಹುದು.. ಈ ಕಾರಣದಿಂದಾಗಿ ಈಗಲೇ ಆಪರೇಷನ್‌ ಹಸ್ತ ಮಾಡೋದಲ್ಲದೆ, ಪ್ರತಿಯೊಬ್ಬ ನಾಯಕನಿಗೂ ಒಂದೊಂದು ಜವಾಬ್ದಾರಿ ಹೊರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಶುರುವಾಯ್ತು ಪ್ರದೀಪ್‌ ಈಶ್ವರ್‌-ಸುಧಾಕರ್‌ ಯುದ್ಧ; ಟ್ರಿಮ್‌ ಆಗಿ ಅಖಾಡಕ್ಕೆ ರೆಡಿಯಾದ ಮಾಜಿ ಸಚಿವ

 

Share Post