Health

ಬಾಳೆಹಣ್ಣಿಗಿಂತ ಬಾಳೆಕಾಯಿ ಹೆಚ್ಚು ಆರೋಗ್ಯವಂತೆ; ಇದ್ರಿಂದ ಏನೆಲ್ಲಾ ಪ್ರಯೋಜನ..?

ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು.. ನಾವು ತಿಂದ ಆಹಾರವನ್ನು ಚೆನ್ನಾಗಿ ಜೀರ್ಣವಾಗುವಂತೆ ಮಾಡುತ್ತದೆ.. ಹೀಗಾಗಿ ಊಟದ ನಂತರ ಒಂದು ಬಾಳೆಹಣ್ಣು ತಿನ್ನುವ ಸಂಪ್ರದಾಯ ನಮ್ಮಲ್ಲಿದೆ.. ಆದ್ರೆ ಬಾಳೆಹಣ್ಣಿಗಿಂತ ಬಾಳೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಮತ್ತಷ್ಟು ಅನುಕೂಲವಿದೆಯಂತೆ.. ಹಾಗಾದ್ರೆ ಬಾಳೆಕಾಯಿಯಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ ಬನ್ನಿ..

ಇದನ್ನೂ ಓದಿ; ಮಲ್ಲಿಗೆ ಹೂವಿನ ಎಣ್ಣೆಯಿಂದ ನೋವು ಮಾಯ, ಮಾನಸಿಕ ಒತ್ತಡ ದೂರ!

ಬಾಳೆಕಾಯಿಯಲ್ಲಿ ಹೇರಳ ಪೋಷಕಾಂಶಗಳು;

ಬಾಳೆಕಾಯಿಯಲ್ಲಿ ಹಲವಾರು ಪೋಷಕಾಂಶಗಳಿವೆ.. ಪೊಟ್ಯಾಸಿಯಮ್, ಮೆಗ್ನೀಷಿಯಮ್, ವಿಟಮಿನ್ ಬಿ 6 ಸೇರಿ ಹಲವು ಪೋಷಕಾಂಶಗಳಿವೆ ಎಂದು ತಜ್ಞರು ಹೇಳುತ್ತಾರೆ.. ಹೀಗಾಗಿ ಬಾಳೆಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಮತ್ತು ಹೃದಯದ ಆರೋಗ್ಯ ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ. ಬಾಳೆಕಾಯಿಯಲ್ಲಿ ಹೆಚ್ಚಿನ ಫೈಬರ್ ಅಂಶ ಮತ್ತು ರೋಗ ನಿರೋಧಕ ಪಿಷ್ಟ ಇರುವ ಕಾರಣದಿಂದಾಗಿ ಹಸಿವನ್ನು ಕಡಿಮೆಗೊಳಿಸುವ ಶಕ್ತಿಯನ್ನು ಇದು ಹೊಂದಿದೆ.

ಇದನ್ನೂ ಓದಿ; ಮಾತು ಕೇಳುತ್ತಿಲ್ಲ ಅಂತ ಮಕ್ಕಳನ್ನು ಹೊಡೆಯುತ್ತಿದ್ದೀರಾ..?; ಖಂಡಿತ ಅದು ತಪ್ಪು

ಕರುಳಿನ ಗುಡ್‌ ಬ್ಯಾಕ್ಟೀರಿಯಾ ಪೋಷಿಸುತ್ತೆ;

ಬಾಳೆಕಾಯಿಯಲ್ಲಿ ನಿರೋಧಕ ಪಿಷ್ಟ ಇದೆ.. ಅಂದರೆ ಇದು ಹೆಚ್ಚಿನ ಫೈಬರ್ ಅನ್ನು ಹೊಂದಿದೆ. ಹೀಗಾಗಿ ಬಾಳೆಕಾಯಿ ಸೇವನೆಯಿಂದ ಇದು ಕರಗುವ ಫೈಬರ್‌ನಂತೆ ಕೆಲಸ ಮಾಡುತ್ತದೆ. ಇದು ಕರುಳಿನ ಗುಡ್‌ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ಇದರಿಂದಾಗಿ ಸುಗಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ; Success mantra; ಯಶಸ್ಸು ನಿಮ್ಮಲ್ಲಿಯೇ ಇದೆ; ಉಪಯೋಗಿಸಿಕೊಳ್ಳಿ ಅಷ್ಟೆ..

ಕಡಿಮೆ ಗ್ಲೈಸೆಮಿಕ್‌ ಹೊಂದಿರುತ್ತದೆ;

ಬಾಳೆ ಹಣ್ಣುಗಳಿಗಿಂತ ಬಾಳೆ ಕಾಯಿ ಸೇವನೆ ಉತ್ತಮ ಎಂದು ಹೇಳುತ್ತಾರೆ. ಯಾಕಂದ್ರೆ ಹಸಿರು ಬಾಳೆಕಾಯಿಗಳಲ್ಲಿ ಕಡಿಮೆ ಗ್ಲೈಸೆಮಿಕ್‌ ಸೂಚಿ ಇರುತ್ತದೆ.. ಇದು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಕಡಿಮೆ ಪರಿಣಾಮ ಬೀರಲಿದೆ.. ಇದರಲ್ಲಿನ ನಿರೋಧಕ ಪಿಷ್ಟ ಪೂರ್ಣತೆಯ ಭಾವನೆ ಉತ್ತೇಜಿಸುತ್ತದೆ.. ಜೊತೆಗೆ  ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.. ಇದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ; ಬೇಸಿಗೆಯಲ್ಲಿ ಮೊಟ್ಟೆ ಸೇವನೆ ಒಳ್ಳೆಯದಾ..? ಕೆಟ್ಟದ್ದಾ..?

ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ;

ಹಸಿರು ಬಾಳೆಕಾಯಿಯಲ್ಲಿ ಫೈಬರ್ ಅಂಶ ಯಥೇಚ್ಚವಾಗಿರುತ್ತದೆ.. ಇದರಿಂದಾಗಿ ಕರುಳು ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತದೆ.. ಇದರಿಂದಾಗಿ ಮಲಬದ್ಧತೆ ಸಮಸ್ಯೆಯಿಂದ ನಮ್ಮನ್ನು ದೂರ ಮಾಡುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ಆಗಲಿದೆ.

ರಕ್ತದೊತ್ತಡ ನಿವಾರಿಸುವ ಪೊಟ್ಯಾಷಿಯಂ;

ಪೊಟ್ಯಾಷಿಯಂ ಈ ಹಸಿ ಬಾಳೆಕಾಯಿಯಲ್ಲಿ ಸಮೃದ್ಧವಾಗಿರುತ್ತದೆ.. ಇದು ನಮ್ಮ ಹೃದಯದ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಹಸಿರು ಬಾಳೆಕಾಯಿಯಲ್ಲಿನ ಪೊಟ್ಯಾಷಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಪಾರ್ಶ್ವವಾಯು ಹಾಗೂ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ; ನೀರು ಪೋಲು ಮಾಡಿದರೆ ಹುಷಾರ್‌; 1.10 ಲಕ್ಷ ದಂಡ ವಿಧಿಸಿದ ಅಧಿಕಾರಿಗಳು!

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ;

ಬಾಳೆಕಾಯಿ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.. ಇದರಲ್ಲಿ ಕಂಡುಬರುವ ವಿಟಮಿನ್‌ ಸಿ ನಮ್ಮನ್ನು ರೋಗಗಳಿಂದ ದೂರವಿಡುತ್ತದೆ.. ಹೀಗಾಗಿ ನಾವು ಸೇವಿಸುವ ಆಹಾರ ಪದಾರ್ಥಗಳ ತಯಾರಿಯಲ್ಲಿ ಹೆಚ್ಚಾಗಿ ಬಾಳೆಕಾಯಿಯನ್ನು ಸೇರಿಸುವುದು ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೆಯದು.. ಇದರಿಂದಾಗಿ ನಮ್ಮ ದೇಃದಲ್ಲಿ ಆರೋಗ್ಯಕರ ರೋಗ ನಿರೋಧಕ ವ್ಯವಸ್ಥೆಯನ್ನು ಏರ್ಪಾಟು ಮಾಡಿದಂತಾಗುತ್ತದೆ.

ಇದನ್ನೂ ಓದಿ; ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟವರು ಶಿವಮೊಗ್ಗದವರು!; ತಮಿಳಿನಾಡಿನಲ್ಲಿ ಕುಳಿತು ಸ್ಕೆಚ್‌!

ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತದೆ;

ಹಸಿರು ಬಾಳೆಕಾಯಿಯಲ್ಲಿರುವ ಫೈಬರ್ ಅಂಶದಿಂದಾಗಿ ನಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.. ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿ ಆದರೂ ಅದರಿಂದಾಗಿ ಕರುಳಿನಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

 

Share Post