BengaluruCrime

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಬಾಂಬರ್‌ ಸಂಪರ್ಕದಲ್ಲಿದ್ದ ಇಬ್ಬರು ವಶ!

ಬೆಂಗಳೂರು; ಮಾರ್ಚ್‌ 1ರಂದು ನಡೆದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದೆ.. ಶಂಕಿತ ಉಗ್ರನ ಸುಳಿವು ಸಿಕ್ಕಿದ್ದರೂ ಇನ್ನೂ ಆತನ ಬಂಧನವಾಗುತ್ತಿಲ್ಲ.. ಈ ನಡುವೆ ಎನ್‌ಐಎ ಅಧಿಕಾರಿಗಳು ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮತ್ತಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ..

ಇದನ್ನೂ ಓದಿ; ಮೈಸೂರು ಗೆಲ್ಲಲು ʻಆಪರೇಷನ್‌ ಹಸ್ತʼ; ಯಡಿಯೂರಪ್ಪ ಆಪ್ತರೇ ಸಿಎಂ ಸಿದ್ದರಾಮಯ್ಯ ಟಾರ್ಗೆಟ್‌

ಬೆಂಗಳೂರಿನ ಇಬ್ಬರು ಎನ್‌ಐಎ ವಶಕ್ಕೆ;

ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳಿಗೆ ಈಗಾಗಲೇ ಮಹತ್ವದ ಸುಳಿವು ಸಿಕ್ಕಿದೆ.. ಶಿವಮೊಗ್ಗ ಮೂಲದ ಇಬ್ಬರು ಈ ಕೃತ್ಯ ನಡೆಸಿದ್ದಾರೆ ಅನ್ನೋದಕ್ಕೆ ಹಲವಾರು ಸಾಕ್ಷ್ಯಗಳು ಸಿಕ್ಕಿವೆ.. ಇದರ ಜೊತೆಗೆ ತಮಿಳುನಾಡಿನಲ್ಲಿ ಪ್ಲ್ಯಾನ್‌ ಮಾಡಿ, ಅಲ್ಲಿಂದಲೇ ಬಾಂಬ್‌ ತಯಾರಿಸಿ ತಂದು ಬೆಂಗಳೂರಿನಲ್ಲಿ ಸ್ಫೋಟಿಸಲಾಗಿದೆ.. ಇದಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ತಮಿಳುನಾಡಿನಲ್ಲೂ ತನಿಖೆ ಮುಂದುವರೆಸಿದ್ದಾರೆ.. ಹೀಗಿರುವಾಗಲೇ ಬೆಂಗಳೂರಿನ ಇಬ್ಬರು ವ್ಯಕ್ತಿಗಳನ್ನು ಶನಿವಾರ ಸಂಜೆಯೇ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ..

ಇದನ್ನೂ ಓದಿ; ಜೋಳದ ರೊಟ್ಟಿ ತಿಂದವರು ಗಟ್ಟಿಯಾಗಿರುತ್ತಾರೆ..!; ಯಾಕೆ ಗೊತ್ತಾ..?

ಬಾಂಬರ್‌ ಸಂಪರ್ಕದಲ್ಲಿದ್ದ ಕಾರಣಕ್ಕೆ ವಿಚಾರಣೆ;

ರಾಮೇಶ್ವರಂ ಕೆಫೆಯಲ್ಲಿ ಟೈಮ್‌ ಬಾಂಬ್‌ ಇಟ್ಟು ಹೋದ ವ್ಯಕ್ತಿಯ ಜೊತೆ ಬೆಂಗಳೂರಿನ ಇಬ್ಬರು ವ್ಯಕ್ತಿಗಳು ಸಂಪರ್ಕದಲ್ಲಿದ್ದರು.. ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.. ಬಾಂಬರ್‌ಗೂ ಈ ಇಬ್ಬರು ವ್ಯಕ್ತಿಗಳಿಗೂ ಏನು ಸಂಬಂಧ..? ಸ್ಫೋಟ ಪ್ರಕರಣದಲ್ಲಿ ಈ ಇಬ್ಬರ ಪಾತ್ರ ಏನು..? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.. ಇಬ್ಬರನ್ನೂ ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ; ಬಾಳೆಹಣ್ಣಿಗಿಂತ ಬಾಳೆಕಾಯಿ ಹೆಚ್ಚು ಆರೋಗ್ಯವಂತೆ; ಇದ್ರಿಂದ ಏನೆಲ್ಲಾ ಪ್ರಯೋಜನ..?

ಬಾಂಬರ್​​ಗೆ ತಮಿಳುನಾಡು ನಂಟು

ಶಂಕಿತ ಉಗ್ರ ಮಾರ್ಚ್‌ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ಮೇಲೆ ಅಲ್ಲಿಂದ ಪರಾರಿಯಾಗಿದ್ದ.. ದಾರಿ ನಡುವೆ ಆತ ಬಟ್ಟೆ ಬದಲಾಯಿಸಿದ್ದ.. ಈ ವೇಳೆ ಅರ್ಜೆಂಟ್‌ನಲ್ಲಿ ಟೋಪಿಯನ್ನು ಅಲ್ಲಿಯೇ ಬಿಟ್ಟುಹೋಗಿದ್ದಾನೆ.. ಆ ಟೋಪಿ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿದೆ.. ಜೊತೆಗೆ ಟೋಪಿಯಲ್ಲಿ ಸಿಕ್ಕ ಕೂದಲನ್ನು ಪರೀಕ್ಷೆಗೆ ಕಳುಹಿಸಲಾಗಿದೆ.. ಇನ್ನೊಂದೆಡೆ ಟೋಪಿ ಬ್ರಾಂಡೆಡ್‌ ಆಗಿದ್ದು, ತಮಿಳುನಾಡಿನಲ್ಲಿ ಮಾಲ್‌ ಒಂದರಲ್ಲಿ ಖರೀದಿ ಮಾಡಲಾಗಿತ್ತು.. ಅದರ ಜಾಡು ಹಿಡಿದು ಎನ್‌ಐಎ ಅಧಿಕಾರಿಗಳು, ಟೋಪಿ ಖರೀದಿಸಿದ ಮಾಲ್‌ ನ್ನು ಪತ್ತೆ ಹಚ್ಚಿದ್ದಾರೆ.. ಜೊತೆಗೆ ಆ ದಿನ ಬಾಂಬರ್‌ ಜೊತೆಯಲ್ಲಿ ಮತ್ತೊಬ್ಬ ಇದ್ದದ್ದು ಪತ್ತೆಯಾಗಿದೆ.. ಟೋಪಿಯಲ್ಲಿ ಸಿಕ್ಕಕೂದಲನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ.. ಇದರಿಂದಾಗಿ ಆರೋಪಿಯ ಪೋಷಕರನ್ನು ಕೂಡಾ ಗುರುತು ಹಿಡಿಯಬಹುದು.. ಮೊದಲು ಪೋಷಕರನ್ನು ವಶಕ್ಕೆ ಪಡೆದರೆ, ಶಂಕಿತನ ಬಗ್ಗೆ ಮಾಹಿತಿ ಹೊರಬರುತ್ತದೆ.. ಅದಕ್ಕಾಗಿ ಎನ್‌ಐಎ ಅಧಿಕಾರಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ; ಮಲ್ಲಿಗೆ ಹೂವಿನ ಎಣ್ಣೆಯಿಂದ ನೋವು ಮಾಯ, ಮಾನಸಿಕ ಒತ್ತಡ ದೂರ!

ಐಸಿಸ್‌ ಕೈವಾಡ ಶಂಕೆ;

ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಐಸಿಸ್‌ ಸಂಘಟನೆ ಕೈವಾಡವಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ.. ಯಾಕಂದ್ರೆ ಈ ಪ್ರಕರಣಕ್ಕೂ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಹಾಗೂ ಚರ್ಚ್‌ ಸ್ಟ್ರೀಟ್‌ ಸ್ಫೋಟ ಪ್ರಕರಣಕ್ಕೂ ಸಾಮ್ಯತೆ ಇದೆ.. ಇನ್ನು ಸ್ಥಳೀಯವಾಗಿ ಸಿಗುವ ಪೊಟ್ಯಾಷಿಯಂ ನೈಟ್ರೆಟ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಬಳಕೆ ಮಾಡಿ ಬಾಂಬ್ ತಯಾರಿಸಿದ್ದಾರೆ.. ಇನ್ನು ಮೇಲಿನ ಮೂರೂ ಪ್ರಕರಣಗಳಲ್ಲೂ ಒಬ್ಬನೇ ವ್ಯಕ್ತಿ ಬಂದು ಬಾಂಬ್‌ ಇಟ್ಟಿದ್ದಾನೆ.. ಹೀಗಾಗಿ, ಇದರ ಹಿಂದೆ ಐಸಿಸ್‌ ಕೈವಾಡ ಇರಬಹುದೆಂದು ಶಂಕಿಸಲಾಗಿದೆ.. ಈ ಆಂಗಲ್‌ನಲ್ಲೂ ತನಿಖೆ ಮುಂದುವರೆಸಲಾಗಿದೆ..

ಇದನ್ನೂ ಓದಿ; ಮಾತು ಕೇಳುತ್ತಿಲ್ಲ ಅಂತ ಮಕ್ಕಳನ್ನು ಹೊಡೆಯುತ್ತಿದ್ದೀರಾ..?; ಖಂಡಿತ ಅದು ತಪ್ಪು

 

Share Post