Politics

ಡಿಕೆ ಬ್ರದರ್ಸ್‌ ನಿದ್ದೆಗೆಡಿಸಿದ ಡಾ.ಮಂಜುನಾಥ್‌; ಶಾಸಕರ ಸಭೆ ನಡೆಸಿ ಬಿಸಿಬಿಸಿ ಚರ್ಚೆ!

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದೇವೇಗೌಡರ ಅಳಿಯ ಹಾಗೂ ಜಯದೇವ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರು ಡಿಕೆ ಸಹೋದರರ ನಿದ್ದೆಗೆಡಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಡಾ.ಸಿ.ಎನ್‌.ಮಂಜುನಾಥ್‌ ಹೆಸರನ್ನು ಬಿಜೆಪಿ ಎರಡು ದಿನದ ಹಿಂದೆ ಪ್ರಕಟ ಮಾಡಿದೆ.. ಈ ಬೆನ್ನಲ್ಲೇ ಡಿ.ಕೆ. ಸಹೋದರರು ಬಿರುಸಿನ ರಾಜಕೀಯ ಚಟುವಟಿಕೆ ನಡೆಸಿದ್ದಾರೆ.. ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ರಣತಂತ್ರ ಶುರು ಮಾಡಿದ್ದಾರೆ.

ಇದನ್ನೂ ಓದಿ; ನಾಳೆಯೇ ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ; ರಂಗೇರಲಿದೆ ಅಖಾಡ!

ಶಾಸಕರ ಸಭೆ ನಡೆಸಿದ ಡಿಕೆ ಸಹೋದರರು;

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಡಿಕೆ ಬ್ರದರ್ಸ್‌ ತವರು ಕ್ಷೇತ್ರ… ಡಿ.ಕೆ.ಶಿವಕುಮಾರ್‌ ಪ್ರತಿನಿಧಿಸುವ ಕನಕಪುರ ವಿಧಾನಸಭಾ ಕ್ಷೇತ್ರ ಈ ಕ್ಷೇತ್ರ ವ್ಯಾಪ್ತಿಯಲ್ಲೇ ಬರುತ್ತದೆ. ಇನ್ನು ಡಿ.ಕೆ.ಶಿವಕುಮಾರ್‌ ಅವರ ಸ್ವಗ್ರಾಮ ಕೂಡಾ ಇದೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಇದೆ. ಇದರ ಜೊತೆಗೆ ಡಿ.ಕೆ.ಶಿವಕುಮಾರ್‌ ಸಹೋದರ ಎರಡು ಬಾರಿ ಇಲ್ಲಿ ಸಂಸದರಾಗಿದ್ದಾರೆ. ಈ ಬಾರಿಯೂ ಡಿ.ಕೆ.ಸುರೇಶ್‌ ಅವರೇ ಕಾಂಗ್ರೆಸ್‌ ಅಭ್ಯರ್ಥಿ… ಡಿ.ಕೆ.ಶಿವಕುಮಾರ್‌ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ.. ಜೊತೆಗೆ ಸಹೋದರನೇ ತವರು ಕ್ಷೇತ್ರದಲ್ಲಿ ಅಭ್ಯರ್ಥಿ.. ಹೀಗಾಗಿ ಸಹೋದರನನ್ನು ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಡಿ.ಕೆ.ಶಿವಕುಮಾರ್‌ ಅವರಿಗಿದೆ… ಬೇರೆ ಯಾರಾದರೂ ಅಭ್ಯರ್ಥಿ ಆಗಿದ್ದಿದ್ದರೆ ಡಿಕೆ ಸಹೋದರರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದ್ರೆ ಡಾ.ಸಿ.ಎನ್‌.ಮಂಜುನಾಥ್‌ ಅವರು ಅಭ್ಯರ್ಥಿಯಾಗಿರೋದು ಅವರ ತಲೆನೋವಿಗೆ ಕಾರಣವಾಗಿದೆ.. ಹೀಗಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಶಾಸಕರು ಹಾಗೂ ಪರಾಭವಗೊಂಡ ಅಭ್ಯರ್ಥಿಗಳನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ.. ಗೆಲ್ಲೋದಕ್ಕೇ ಏನೇನು ಮಾಡಬೇಕು ಎಂಬುದರ ಕುರಿತಂತೆ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ;ಬಾಲಿವುಡ್‌ ಬಿಗ್‌ಬಿ ಅಮಿತಾಬ್‌ಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು!

ಸಭೆಯಲ್ಲಿ ಯಾರು ಯಾರು ಭಾಗವಹಿಸಿದ್ದರು..?

ಬೆಂಗಳೂರು ಸದಾಶಿವ ನಗರದಲ್ಲಿರುವ ಡಿ.ಕೆ.ಶಿವಕುಮಾರ್‌ ನಿವಾಸದಲ್ಲಿ ಈ ಸಭೆ ನಡೆಸಲಾಗಿದೆ. ಸಭೆಯಲ್ಲಿ ಮಾಗಡಿ ಶಾಸಕ ಬಾಲಕೃಷ್ಣ. ಆನೇಕಲ್‌ನ ಶಿವಣ್ಣ, ಕುಣಿಗಲ್‌ನ ರಂಗನಾಥ್‌, ಪರಿಷತ್‌ ಸದಸ್ಯರಾದ ಪುಟ್ಟಣ್ಣ, ಎಸ್‌.ರವಿ, ರಘುನಂದನ್‌ ರಾಮಣ್ಣ, ಮನೋಹರ್‌, ಹನುಮಂತರಾಯಪಪ್ಪ, ಕುಸುಮ ಎಚ್‌ ಗಂಗಾಧರ್‌ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ. ಸಭೆ ಬಳಿಕ ಭೋಜಕೂಟ ಕೂಡಾ ಏರ್ಪಡಿಸಲಾಗಿತ್ತು.

ಇದನ್ನೂ ಓದಿ; BSY ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ!

ಡಾ.ಸಿ.ಎನ್‌.ಮಂಜುನಾಥ್‌ ಪರ ಭರ್ಜರಿ ಕ್ಯಾಂಪೇನ್‌;

ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಒಂದಾಗಿವೆ.. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಕೂಟ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್‌ ನಿಂತಿದ್ದರು.. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅಶ್ವತ್ಥನಾರಾಯಣ ಕಡಿಮೆ ಅಂತರದಲ್ಲಿ ಸೋತಿದ್ದರು.. ಇದೀಗ ಬಿಜೆಪಿ ಹಾಗೂ ಜೆಡಿಎಸ್‌ ಒಂದಾಗಿವೆ.. ಜೊತೆಗೆ ಡಾ.ಸಿ.ಎನ್‌.ಮಂಜುನಾಥ್‌ಗೆ ದೊಡ್ಡ ಅಭಿಮಾನಿ ಬಳಗವೇ ಇದೆ.. ಮೋದಿ ವರ್ಚುಸ್ಸು ಈ ಬಾರಿ ಇನ್ನೂ ಜಾಸ್ತಿಯಾಗಿದೆ.. ಇದರ ನಡುವೆ ದೇವೇಗೌಡರು, ಕುಮಾರಸ್ವಾಮಿ, ಯೋಗೇಶ್ವರ್‌ ಹಾಗೂ ಮುನಿರತ್ನ ಅವರು ಮಂಜುನಾಥ್‌ ಅವರ ಗೆಲುವಿಗಾಗಿ ಕಂಕಣಬದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆ ಸಹೋದರರಿಗೆ ತಲೆನೋವು ಶುರುವಾಗಿದೆ.

ಇದನ್ನೂ ಓದಿ;ಬಹುತೇಕ ಇವರಿಗೇ ಕಾಂಗ್ರೆಸ್‌ ಟಿಕೆಟ್‌ ಫೈನಲ್‌; 21 ಕ್ಷೇತ್ರಗಳಲ್ಲಿ ಯಾರ್ಯಾರಿಗೆ ಟಿಕೆಟ್‌..?

ಮಂಜುನಾಥ್‌ ಸ್ಪರ್ಧೆಯಿಂದ ಆಗುವ ಪರಿಣಾಮಗಳೇನು..?;

ಡಾ.ಸಿ.ಎನ್‌.ಮಂಜುನಾಥ್‌ ಅವರು ದೇವೇಗೌಡರ ಅಳಿಯ.. ಜೊತೆಗೆ ಬಿಜೆಪಿ ಅಭ್ಯರ್ಥಿ.. ಜೆಡಿಎಸ್‌ ಬೆಂಬಲವೂ ಸಂಪೂರ್ಣ ಸಿಗುತ್ತದೆ.. ಹೀಗಾಗಿ ಮಂಜುನಾಥ್‌ ಸ್ಪರ್ಧೆಯಿಂದ ಆಗುವ ಪರಿಣಾಮಗಳು ಹಾಗೂ ಅದನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಡಿ.ಕೆ.ಶಿವಕುಮಾರ್‌ ಚರ್ಚೆ ನಡೆಸಿದ್ದಾರೆ. ಶಾಸಕರು ಹಾಗೂ ಪರಾಭವಗೊಂಡ ಅಭ್ಯರ್ಥಿಗಳಿಂದ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ. ಅನಂತರ ಮುಖಂಡರನ್ನು ಕರೆಸಿಕೊಂಡು ಮಾತನಾಡುವುದಕ್ಕೂ ಸಿದ್ಧತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.. ಡಿ.ಕೆ.ಶಿವಕುಮಾರ್‌ ಡಿಸಿಎಂ ಆಗಿದ್ದಾರೆ.. ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರೂ ಅವರೇ.. ಜೊತೆಗೆ ಮುಖ್ಯಮಂತ್ರಿಯಾಗೋದಕ್ಕೆ ಸತತ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಹೋದರ ಡಿ.ಕೆ.ಸುರೇಶ್‌ ಸ್ವಕ್ಷೇತ್ರದಲ್ಲಿ ಸೋತರೆ ಅವಮಾನವಾಗುತ್ತದೆ ಅನ್ನೋದು ಡಿ.ಕೆ.ಶಿವಕುಮಾರ್‌ಗೆ ಗೊತ್ತಿದೆ.. ಹೀಗಾಗಿ ಮೊದಲ ದಿನದಿಂದಲೇ ಗೆಲ್ಲೋದಕ್ಕೆ ತಂತ್ರಗಾರಿಕೆ ಹೆಣೆಯಲಾಗುತ್ತಿದೆ.

ಇದನ್ನೂ ಓದಿ; ಬಿಡದಿ ತೋಟದ ಮನೆಯಲ್ಲಿ 25 ತಲೆ ಬರುಡೆ ಪತ್ತೆ; ಎಲ್ಲಿಂದ ಬಂದವು ಇವು..?

 

Share Post