Health

ಜೋಳದ ರೊಟ್ಟಿ ತಿಂದವರು ಗಟ್ಟಿಯಾಗಿರುತ್ತಾರೆ..!; ಯಾಕೆ ಗೊತ್ತಾ..?

ಸಿರಿ ಧಾನ್ಯಗಳಲ್ಲಿ ಜೋಳ ಕೂಡ ಒಂದು. ಜೋಳದಲ್ಲಿ ಅನೇಕ ರೀತಿಯ ಪೋಷಕಾಂಶಗಳಿರುತ್ತವೆ.. ಇದರಿಂದಾಗಿ ಜೋಳದ ಸೇವನೆಯಿಂದ ಅನೇಕ ಅರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.. ದೇಹದ ಶಕ್ತಿ ಹೆಚ್ಚಿಸಲು, ದೇಹ ಸದೃಢವಾಗಿಸಲು ಈ ಜೋಳ ಅತ್ಯಂತ ಉಪಯುಕ್ತವಾಗಲಿದೆ.. ಹೀಗಾಗಿಯೇ ಉತ್ತರ ಕರ್ನಾಟಕದ ಮಂದಿ ಜೋಳದ ರೊಟ್ಟಿ ತಿಂದು ಅತ್ಯಂತ ಕಟ್ಟುಮಸ್ತಾಗಿರುತ್ತಾರೆ..

ಇದನ್ನೂ ಓದಿ; ಬಾಳೆಹಣ್ಣಿಗಿಂತ ಬಾಳೆಕಾಯಿ ಹೆಚ್ಚು ಆರೋಗ್ಯವಂತೆ; ಇದ್ರಿಂದ ಏನೆಲ್ಲಾ ಪ್ರಯೋಜನ..?

ಗೋಧಿ ರೊಟ್ಟಿಗಿಂತ ಜೋಳದ ರೊಟ್ಟಿ ಶ್ರೇಷ್ಠ;

ಉತ್ತರ ಕರ್ನಾಟಕದ ಭಾಗದಲ್ಲಿ ಪ್ರತಿನಿತ್ಯದ ಆಹಾರದ ಭಾಗ ಜೋಳದ ರೊಟ್ಟಿ.. ಖಡಕ್‌ ರೊಟ್ಟಿ ಇಲ್ಲದೆ ಉತ್ತರ ಕರ್ನಾಟಕದ ಮಂದಿಯ ಆಹಾರವೇ ಪೂರ್ಣವಾಗುವುದಿಲ್ಲ.. ಜೋಳದ ರೊಟ್ಟಿ ತಿಂದು ಅವರು ಗಟ್ಟಿಯಾಗಿರುತ್ತಾರೆ.. ಆದ್ರೆ ದಕ್ಷಿಣ ಕರ್ನಾಟಕದಲ್ಲಿ ಜೋಳದ ರೊಟ್ಟಿಗಿಂತ ಗೋಧಿಯನ್ನು ಹೆಚ್ಚಾಗಿ ಬಳಸುತ್ತಾರೆ.. ಆರೋಗ್ಯ ಪ್ರಯೋಜನದ ವಿಷಯಕ್ಕೆ ಬಂದರೆ ಗೋಧಿ ರೊಟ್ಟಿಗಿಂತ ಜೋಳದ ಆರೋಗ್ಯಕ್ಕೆ ಅತ್ಯಂತ ಶ್ರೇಷ್ಠವಾಗುದುದು.. ಜೋಳದ ರೊಟ್ಟಿ ತಿನ್ನುವುದರಿಂದ ದೇಹ ಕಟ್ಟುಮಸ್ತಾಗುತ್ತದೆ..

ಇದನ್ನೂ ಓದಿ; ಮಲ್ಲಿಗೆ ಹೂವಿನ ಎಣ್ಣೆಯಿಂದ ನೋವು ಮಾಯ, ಮಾನಸಿಕ ಒತ್ತಡ ದೂರ!

ರೋಗನಿರೋಧಕ ಶಕ್ತಿ ಹೆಚ್ಚಿಸುವ ಜೋಳ;

ಜೋಳದ ರೊಟ್ಟಿ ತಿನ್ನುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಇದನ್ನು ತಿನ್ನುವುದರಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿ ನಮ್ಮ ದೇಹದಲ್ಲಿ ವೃದ್ಧಿಯಾಗುತ್ತದೆ..  ಜೋಳದಲ್ಲಿ ನಾರಿನಂಶವೂ ಹೆಚ್ಚಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಚೆನ್ನಾಗಿ ಜೀರ್ಣವಾಗುವುದಲ್ಲದೆ ಪೋಷಕಾಂಶಗಳು ನಮ್ಮ ದೇಹ ಸೇರುವಂತೆ ಮಾಡುತ್ತದೆ..

ಇದನ್ನೂ ಓದಿ; ಮಾತು ಕೇಳುತ್ತಿಲ್ಲ ಅಂತ ಮಕ್ಕಳನ್ನು ಹೊಡೆಯುತ್ತಿದ್ದೀರಾ..?; ಖಂಡಿತ ಅದು ತಪ್ಪು

ಜೋಳದ ರೊಟ್ಟಿಯಲ್ಲಿ ಕಬ್ಬಿಣದ ಅಂಶ ಹೇರಳ;

ಜೋಳದಿಂದ ತಯಾರು ಮಾಡಿದ ರೊಟ್ಟಿಗಳಲ್ಲೂ ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ಹಾಗಾಗಿ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ತಿಂದರೆ, ರಕ್ತಹೀನತೆಯಿಂದ ಮುಕ್ತಿ ಪಡೆಯಬಹುದು. ಈ ರೊಟ್ಟಿಗಳನ್ನು ಹೆಚ್ಚಾಗಿ ತಿಂದರೆ ದೇಹದಲ್ಲಿ ವಯಸ್ಸಾಗುವ ಲಕ್ಷಣಗಳು ಕಡಿಮೆಯಾಗುತ್ತವೆ. ವಯಸ್ಸು ಬೆಳೆಯುತ್ತಿದ್ದರೂ ಇನ್ನೂ ಯಂಗ್‌ ಆಗಿ ಕಾಣುತ್ತಿರುತ್ತಾರೆ..

 

ಇದನ್ನೂ ಓದಿ; Success mantra; ಯಶಸ್ಸು ನಿಮ್ಮಲ್ಲಿಯೇ ಇದೆ; ಉಪಯೋಗಿಸಿಕೊಳ್ಳಿ ಅಷ್ಟೆ..

ತೂಕ ಇಳಿಸಿಕೊಳ್ಳಲೂ ಸಹಾಯ ಮಾಡುತ್ತದೆ;

ಇದು ದೇಹದಲ್ಲಿನ ಫ್ರೀ ರಾಡಿಕಲ್ಗಳನ್ನು ಸಹ ನಾಶಪಡಿಸುತ್ತದೆ. ಅದೇ ರೀತಿ ತೂಕ ಇಳಿಸಿಕೊಳ್ಳಲು ಬಯಸುವವರು ಈ ಜೋಳದ ರೊಟ್ಟಿಗಳನ್ನು ತಿಂದರೆ ಬೇಗ ತೂಕ ಕಡಿಮೆಯಾಗುತ್ತದೆ. ಇವುಗಳನ್ನು ತಿನ್ನುವುದರಿಂದ ತಕ್ಷಣವೇ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಇದು ದೇಹದಲ್ಲಿರುವ ಫ್ರೀ ರಾಡಿಕಲ್‌ಗಳನ್ನು ನಾಶಪಡಿಸುತ್ತದೆ. ಸೋರ್ಗಮ್ ಬ್ರೆಡ್ ತಿನ್ನುವುದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಮಧುಮೇಹ, ಬಿಪಿ ಇರುವವರೂ ಇದನ್ನು ತಿನ್ನಬಹುದು.

ಇದನ್ನೂ ಓದಿ; ದಾವಣಗೆರೆಯಲ್ಲಿ ಬಿಜೆಪಿಗೆ ಬಂಡಾಯದ ಭೀತಿ; ಬಿಎಸ್‌ವೈ ಸಂಧಾನಕ್ಕೂ ಬಗ್ಗದ ನಾಯಕರು!

Share Post