CrimeDistricts

ಕಳ್ಳರ ಗ್ಯಾಂಗ್‌ಗೆ ಪೊಲೀಸಪ್ಪನೇ ಸೂತ್ರದಾರ; ಕಾನ್ಸ್‌ಟೇಬಲ್‌ ಹೇಳಿದಂತೆ ಕಳವಿಗೆ ಸ್ಕೆಚ್‌!

ಮಂಡ್ಯ; ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ… ಅಕ್ರಮಗಳನ್ನು ತಡೆಯಬೇಕಾದ ಪೊಲೀಸಪ್ಪನೇ ಇಲ್ಲಿ ಅಕ್ರಮಗಳಿಗೆ ಸೂತ್ರದಾರನಾಗಿದ್ದ.. ಪೊಲೀಸ್‌ ಯೂನಿಫಾರ್ಮ್‌ ಹಾಕ್ಕೊಂಡು ಸರ್ಕಾರಿ ಸಂಬಳ ತೆಗೆದುಕೊಳ್ಳುತ್ತಾ ಕಳ್ಳರ ಗ್ಯಾಂಗ್‌ಗೆ ನಾಯಕನಾಗಿದ್ದ. ಈ ಪೊಲೀಸಪ್ಪ ಸೂಚನೆಯಂತೆ ಕಳ್ಳರ ಗ್ಯಾಂಗ್‌ ಕಳ್ಳತನ ಮಾಡಿಕೊಂಡು ಬರುತ್ತಿತ್ತು.. ಆದ್ರೆ ಇಂತಹ ಕೃತ್ಯಗಳು ಯಾವತ್ತಿದ್ರೂ ಬಯಲಾಗಲೇಬೇಕು ಅಲ್ಲವೇ.. ಕೊನೆಗೂ ಪೊಲೀಸಪ್ಪ ಹಾಗೂ ಆ ಕಳ್ಳರ ಗ್ಯಾಂಗ್‌ ಸಿಕ್ಕಿಬಿದ್ದಿದೆ.

ಇದನ್ನೂ ಓದಿ; Loksabha; ಲೋಕಸಭಾ ಚುನಾವಣೆಯಲ್ಲಿ AI ಬಳಕೆ; ಸುಳ್ಳು ಸುದ್ದಿಗಳಿಗೆ ಬೀಳುತ್ತಾ ಬ್ರೇಕ್‌?

ಕಳ್ಳರ ಗ್ಯಾಂಗ್‌ಗೆ ಪೊಲೀಸಪ್ಪನೇ ಸೂತ್ರದಾರ;

ಕಳ್ಳರ ಗ್ಯಾಂಗ್‌ಗೆ ಪೊಲೀಸಪ್ಪನೇ ಸೂತ್ರದಾರ; ಶಿವಮೊಗ್ಗದ ಕೊಪ್ಪ ಠಾಣೆಯ ಕಾನ್ಸ್‌ಟೇಬಲ್‌ ಕೆಂಡಗಣ್ಣನೇ ಈ ಕೆಲಸದ ಸೂತ್ರದಾರ. ಇದೀಗ ಅರೆಸ್ಟ್‌ ಆಗಿದ್ದಾನೆ. ಮದ್ದೂರು ಪೊಲೀಸರು, ಕಾನ್ಸ್‌ಟೇಬಲ್‌ ಕೆಂಡಗಣ್ಣ ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ. ಕಾನ್ಸ್‌ಟೇಬಲ್‌ನ ಮಾಸ್ಟರ್ ಮೈಂಡ್​​ನಂತೆ ಕಳ್ಳತನ ಮಾಡುತ್ತಿದ್ದ ಅನ್ನೋದು ತನಿಖೆ ವೇಳೆ ಬಯಲಾಗಿದೆ. ಈ ಗ್ಯಾಂಗ್‌ ಮದ್ದೂರು, ಶ್ರೀರಂಗಪಟ್ಟಣ, ಮೈಸೂರಿನ ದಕ್ಷಿಣ, ವಿವಿ ಪುರಂ, ಕೆ.ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡುತ್ತಿತ್ತು.. ಹಲವು ದಿನಗಳಿಂದ ಈ ಗ್ಯಾಂಗ್‌ಗಾಗಿ ಪೊಲೀಸರು ಬಲೆ ಬೀಸಿದ್ದರು. ಕೊನೆಗೂ ಸಿಕ್ಕಿಬಿದ್ದಿದೆ.

ಇದನ್ನೂ ಓದಿ; Bommai; ಕಾಂಗ್ರೆಸ್‌ ಅವಧಿಯಲ್ಲೇ ರಾಜ್ಯಗಳಿಗೆ ಹೆಚ್ಚು ಅನ್ಯಾಯವಾಗಿದೆ; ಬಸವರಾಜ ಬೊಮ್ಮಾಯಿ‌

ಯಾರ್ಯಾರು ಬಂಧಿತರು..?;

ಯಾರ್ಯಾರು ಬಂಧಿತರು..?; ಶಿವಮೊಗ್ಗದ ಕೊಪ್ಪ ಠಾಣೆಯ ಕಾನ್ಸ್‌ಟೇಬಲ್‌ ಕೆಂಡಗಣ್ಣ ಹಾಗೂ ಇತರ ಏಳು ಮಂದಿ ಅರೆಸ್ಟ್‌ ಆಗಿದ್ದಾರೆ. ಮೈಸೂರು ಮೂಲದ ನಯಾಜ್ ಅಹ್ಮದ್, ಮೊಹಮ್ಮದ್ ಸಾದತ್ತ್, ಮೊಹಮ್ಮದ್ ಮುನ್ನಾ, ಸಯ್ಯದ್ ಅಯೂಬ್, ಪ್ರಸಾದ್, ಗಿರೀಶ್ ಬಂಧಿತ ಕಳ್ಳರು. ಇವರು ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹಲವು ಕಡೆ ಕಳ್ಳತನ ಮಾಡಿದ್ದಾರೆ.. ಕಾನ್ಸ್‌ಟೇಬಲ್‌​ ಹೇಳಿದಂತೆ ಬೀಗ ಹಾಕಿದ್ದ ಮನೆಗಳಿಗೆ ಇವರು ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದರು. ನಂತರ ಕಾನ್​​ಸ್ಟೆಬಲ್ ಮೂಲಕವೇ ಎಲ್ಲ ಬಂಗಾರ, ಬೆಳ್ಳಿ ಮಾರಾಟ ಮಾಡಲಾಗುತ್ತಿತ್ತಂತೆ. ಹೀಗೆ ಬಂದ ಹಣವನ್ನು ಎಲ್ಲರೂ ಸೇರಿ ಹಂಚಿಕೊಳ್ಳುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ; ಪತಿಗೇ ತಿಂಗಳಿಗೆ 5 ಸಾವಿರ ಜೀವನಾಂಶ ನೀಡಲು ಆದೇಶ; ಗಮನ ಸೆಳೆದ ಕೋರ್ಟ್‌ ತೀರ್ಪು

ಹಿಂದೆಯೂ ಎರಡು ಪ್ರಕರಣದಲ್ಲಿ ಭಾಗಿ;

ಹಿಂದೆಯೂ ಎರಡು ಪ್ರಕರಣದಲ್ಲಿ ಭಾಗಿ; ಕಾನ್ಸ್‌ಟೇಬಲ್‌ ಕೆಂಡಗಣ್ಣ ಹಿಂದೆಯೂ ಇಂತಹ ಎರಡು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದನಂತೆ. ಈ ಕಾರಣಕ್ಕಾಗಿ ಆತ ಅಮಾನತುಗೊಂಡಿದ್ದ. ಆದ್ರೆ ಹಣದಾಸೆಗೆ ಮತ್ತೆ ಇದೇ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ. ಬಂಧಿತರಿಂದ 37 ಲಕ್ಷ ಮೌಲ್ಯದ 650 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

 

Share Post