ಸಾವರ್ಕರ್ ದನದ ಮಾಂಸ, ಜಿನ್ನಾ ಹಂದಿ ಮಾಂಸ ಸೇವಿಸುತ್ತಿದ್ದರು; ದಿನೇಶ್ ಗುಂಡೂರಾವ್
ಬೆಂಗಳೂರು; ಸಾವರ್ಕರ್ ದನದ ಮಾಂಸ ಸೇವಿಸುತ್ತಿದ್ದರು ಎಂದು ಕೆಲವರು ಹೇಳುತ್ತಾರೆ, ಜೊತೆಗೆ ಜಿನ್ನಾ ಅವರು ಹಂದಿ ಮಾಂಸ ಸೇವನೆ ಮಾಡುತ್ತಿದ್ದರು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಸಾವರ್ಕರ್ ಬ್ರಾಹ್ಮಣನಾದರೂ ಮಾಂಸ ಸೇವನೆ ಮಾಡುತ್ತಿದ್ದರು.. ಜಿನ್ನಾ ಮುಸಲ್ಮಾನರಾದರೂ ಹಂದಿ ಮಾಂಸ ಸೇವಿಸಿದ್ದರು ಎಂದು ಹೇಳಿದ್ದಾರೆ..
ಸಾರ್ವಕರ್ ಮೂಲಭೂತವಾಗಿಯಾಗಿದ್ದರೂ, ಅವರು ಮಾಡರ್ನ್ ಆಗಿದ್ದರು ಎಂದೂ ದಿನೇಶ್ ಗುಂಡೂರಾವ್ ಹೇಳಿದ್ದಾರೆ.. ದಿನೇಶ್ ಗುಂಡೂರಾವ್ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.. ಸಾವರ್ಕರ್ ಬಹಿರಂಗವಾಗಿಯೇ ಮಾಂಸಾಹಾರ ಸೇವನೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು ಎಂದಿರುವ ದಿನೇಶ್ ಗುಂಡೂರಾವ್, ಮಹಾತ್ಮಾಗಾಂಧಿ ಸಸ್ಯಾಹಾರಿಯಾಗಿದ್ದು, ಹಿಂದೂ ಸಂಸ್ಕೃತಿ ಬಗ್ಗೆ ಗೌರವ ಇತ್ತು.. ಆದ್ರೆ ಅವರ ಅಭಿಪ್ರಾಯ ಬೇರೆಯೇ ಇತ್ತು.. ಅವರು ಡೆಮಾಕ್ರಟಿಕ್ ಆಗಿದ್ದರು ಎಂದೂ ಹೇಳಿದ್ದಾರೆ..
ಮಹಮ್ಮದ್ ಅಲಿ ಜಿನ್ನಾ ಕೂಡಾ ಡೆಮಾಕ್ರಟಿಕ್ ಆಗಿದ್ದು, ಅವರು ಕಟ್ಟಾ ಇಸ್ಲಾಂವಾದಿಯಾಗಿರಲಿಲ್ಲ. ಅವರು ವೈನ್ ಕುಡಿಯುತ್ತಿದ್ದರು, ಹಂದಿ ಮಾಂಸ ಸೇವಿಸುತ್ತಿದ್ದರು ಎಂದು ಹೇಳಿದ್ದಾರೆ.. ಆದ್ರೆ ಸಚಿವ ಗುಂಡೂರಾವ್ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ..