ಬೆಂಗಳೂರಲ್ಲಿ ಮತ್ತೆ ಮೂವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್!
ಆನೇಕಲ್; ಪಾಕಿಸ್ತಾನದಿಂದ ಬಂದು ಹಿಂದೂ ಹೆಸರುಗಳನ್ನಿಟ್ಟು ನಕಲಿ ದಾಖಲೆಗಳನ್ನು ಮಾಡಿಸಿಕೊಂಡು ಜೀವನ ಮಾಡುತ್ತಿದ್ದವರು ಸಿಕ್ಕಿ ಬೀಳುತ್ತಲೇ ಇದ್ದಾರೆ.. ಇವತ್ತು ಮತ್ತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.. ಪೀಣ್ಯದಲ್ಲಿ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನ ಮೂಲದ ಕುಟುಂಬವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.. ಜಿಗಣಿಯಲ್ಲಿ ಮೂವರನ್ನು ಅರೆಸ್ಟ್ ಮಾಡಲಾಗಿದೆ..
ಕಳೆದ ಐದಾರು ದಿನಗಳಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೂ ಐದಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.. ಇನ್ನು ದಾವಣಗೆರೆಯಲ್ಲಿ ವಾಸವಿದ್ದ ಪಾಕಿಸ್ತಾನದ ಪ್ರಜೆಗಳನ್ನು ಕೂಡಾ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲೇ ಬಂಧಿಸಲಾಗಿತ್ತು.. ಜಿಗಣಿಯಲ್ಲೂ ಕೂಡಾ ಒಂದು ಕುಟುಂಬವನ್ನು ಪತ್ತೆ ಹಚ್ಚಲಾಗಿತ್ತು..
ಸೋಮವಾರದಂದು ಜಿಗಣಿ ಬಳಿ ನಾಲ್ವರು ಪಾಕಿಸ್ತಾನದ ಪ್ರಜೆಗಳನ್ನು ಬಂಧಿಸಲಾಗಿತ್ತು.. ಪೇಶಾವರ ಮೂಲಕ ರಷೀದ್ ಅಲಿ ಸಿದ್ದಿಕಿ ಕುಟುಂಬದ ನಾಲ್ವರನ್ನು ಅರೆಸ್ಟ್ ಮಾಡಲಾಗಿದ್ದು, ಅವರನ್ನು ತನಿಖೆ ಮಾಡಲಾಗಿತ್ತು.. ಈ ವೇಳೆ ಪೀಣ್ಯದಲ್ಲಿ ಒಂದು ಕುಟುಂಬ ವಾಸವಿದೆ ಎಂದು ಗೊತ್ತಾಗಿತ್ತು.. ಅಲ್ಲಿ ಪತಿ, ಪತ್ನಿ ಹಾಗೂ ಪುತ್ರಿ ವಾಸವಿದ್ದರು.. ಅವರನ್ನೂ ಕೂಡಾ ಬಂಧಿಸಲಾಗಿದೆ.. ಪಾಕಿಸ್ತಾನದಿಂದ ಸುಮಾರು 15 ಕ್ಕೂ ಹೆಚ್ಚು ಮಂದಿ ಭಾರತಕ್ಕೆ ನುಸುಳಿದ್ದಾರೆ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..