CrimeLifestyle

ಪತಿಗೇ ತಿಂಗಳಿಗೆ 5 ಸಾವಿರ ಜೀವನಾಂಶ ನೀಡಲು ಆದೇಶ; ಗಮನ ಸೆಳೆದ ಕೋರ್ಟ್‌ ತೀರ್ಪು

ಮಧ್ಯಪ್ರದೇಶ; ಗಂಡ-ಹೆಂಡತಿ ವಿಚ್ಛೇದನ ಪಡೆದಾಗ ಗಂಡ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಬೇಕಾಗುತ್ತದೆ. ಕೋರ್ಟ್‌ ಈ ಬಗ್ಗೆ ಆದೇಶ ಹೊರಡಿಸುತ್ತದೆ. ಆದ್ರೆ ಇದೇ ಮೊದಲ ಬಾರಿಗೆ ವಿಚ್ಛೇದಿತ ಗಂಡನಿಗೆ ಹೆಂಡತಿ ಜೀವನಾಂಶ ನೀಡುವಂತೆ ಕೋರ್ಟ್‌ ಆದೇಶ ನೀಡಿದೆ. ವಿಶೇಷ ಪ್ರಕರಣವೊಂದರಲ್ಲಿ ಮಧ್ಯಪ್ರದೇಶದ ಕೌಟುಂಬಿಕ ನ್ಯಾಯಾಲಯವು ಈ ಮಹತ್ವದ ತೀರ್ಪು ಪ್ರಕಟಿಸಿದೆ. ಗಂಡನಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಕೋರ್ಟ್‌ ಆದೇಶ ನೀಡಿದ್ದು, ಕೋರ್ಟ್‌ ಮೆಟ್ಟಿಲೇರಿದ್ದ ಮಹಿಳೆಗೆ ಸಂಕಷ್ಟು ಎದುರಾಗಿದೆ.

ಇದನ್ನೂ ನೋಡಿ; Breaking; ಲೋಕಸಭೆ ವಿಪಕ್ಷ ನಾಯಕ ಅಧೀರ್‌ ರಂಜನ್‌ ಬಿಜೆಪಿ ಸೇರ್ಪಡೆ ಸಾಧ್ಯತೆ!

ಗಂಡನ ವಿರುದ್ಧ ಮಹಿಳೆ ದೂರು, ಗಂಡನಿಂದ ಪ್ರತಿದೂರು;

ಗಂಡನ ವಿರುದ್ಧ ಮಹಿಳೆ ದೂರು, ಗಂಡನಿಂದ ಪ್ರತಿದೂರು; ಉಜ್ಜೈನ್ ಮೂಲದ ಈ ಜೋಡಿ 2021ರಲ್ಲಿ ವಿವಾಹವಾಗಿದ್ದರು.. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಗಂಡ ನಿತ್ಯ ಕಿರುಕುಳ ನೀಡುತ್ತಾರೆ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಳು.. ತನಗೆ ವಿಚ್ಛೇದನ ನೀಡಬೇಕು, ಜೀವನಾಂಶ ನೀಡಬೇಕೆಂದು ಮಹಿಳೆ ದೂರು ದಾಖಲಿಸಿದ್ದರು. ಆದ್ರೆ ಪತಿ ಕೂಡಾ ಪತ್ನಿ ವಿರುದ್ಧ ಪ್ರತಿ ದೂರು ದಾಖಲಿಸಿದ್ದರು. ಆಕೆಯೇ ನನಗೆ ಕಿರುಕುಳ ನೀಡುತ್ತಿದ್ದಾರೆ. ಆಕೆ ಜೀವನಾಂಶ ಪಡೆಯೋದಕ್ಕಾಗಿ ಹೀಗೆ ಸುಳ್ಳು ಆರೋಪ ಮಾಡುತ್ತಿದ್ದಾಳೆ. ನನಗೆ ಆಕೆ ತುಂಬಾನೆ ಟಾರ್ಚರ್‌ ಕೊಡುತ್ತಿದ್ದು, ಇದರಿಂದಾಗಿ ನಾನು ವಿದ್ಯಾಭ್ಯಾಸವನ್ನೂ ಅರ್ಧಕ್ಕೇ ನಿಲ್ಲಿಸಿದ್ದೇನೆ. ಇದರಿಂದಾಗಿ ನಾನು ನಿರುದ್ಯೋಗಿಯಾಗಿದ್ದೇನೆ ಎಂದು ಗಂಡ ಹೇಳಿದ್ದಾನೆ.

ಇದನ್ನೂ ಓದಿ; Loksabha; ಚಿತ್ರದುರ್ಗಕ್ಕೆ ಮಾದಾರ ಚೆನ್ನಯ್ಯ ಶ್ರೀ, ಬೆಂ. ಗ್ರಾಮಾಂತರಕ್ಕೆ ಡಾ.ಸಿ.ಎನ್.ಮಂಜುನಾಥ್?

ಮಹಿಳೆಯ ಹೇಳಿಕೆಯಲ್ಲಿ ದ್ವಂದ್ವ ಇದ್ದಿದ್ದೇ ತೀರ್ಪಿಗೆ ಕಾರಣ;

ಮಹಿಳೆಯ ಹೇಳಿಕೆಯಲ್ಲಿ ದ್ವಂದ್ವ ಇದ್ದಿದ್ದೇ ತೀರ್ಪಿಗೆ ಕಾರಣ; ಮಹಿಳೆ ಗಂಡನ ವಿರುದ್ಧ ದೂರು ನೀಡುವಾಗ ತಾನು ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದೇನೆ ಎಂದು ಹೇಳಿದ್ದಳು. ಆದ್ರೆ ಕೋರ್ಟ್‌ನಲ್ಲಿ ಜೀವನಾಂಶ ಕೇಳುವಾಗ ತಾನು ನಿರುದ್ಯೋಗಿ ಎಂದು ಹೇಳಿಕೊಂಡಿದ್ದಳು. ಇದರ ಜೊತೆಗೆ ಗಂಡ ಕಿರುಕುಳ ನೀಡುತ್ತಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಕೂಡಾ ಒದಗಿಸಿರಲಿಲ್ಲ. ಹೀಗಾಗಿ ಮಹಿಳೆ ಸುಳ್ಳು ಹೇಳುತ್ತಿದ್ದಾಳೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿತ್ತು ಇದರಿಂದಾಗಿ ಗಂಡನಿಗೇ ಜೀವನಾಂಶ ನೀಡುವಂತೆ ಕೋರ್ಟ್‌ ಆದೇಶ ಹೊರಡಿಸಿದೆ.

ಇದನ್ನೂ ಓದಿ; ಆಯೋಧ್ಯೆಯಿಂದ ವಾಪಸ್ಸಾಗುತ್ತಿದ್ದವರಿಗೆ ಬೆದರಿಕೆ; ರೈಲಿಗೆ ಬೆಂಕಿ ಹಚ್ಚುವ ಧಮ್ಕಿ!

2020ರಲ್ಲಿ ಭೇಟಿಯಾಗಿದ್ದ ಜೋಡಿ;

2020ರಲ್ಲಿ ಭೇಟಿಯಾಗಿದ್ದ ಜೋಡಿ; ಇಬ್ಬರೂ 2020ರಲ್ಲಿ ಮೊದಲ ಬಾರಿಗೆ ಭೇಟಿ ಆಗಿದ್ದರು. ಇಬ್ಬರು ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಈ ವೇಳೆ ಆ ವ್ಯಕ್ತಿ 12 ನೇ ತರಗತಿ ಓದುತ್ತಿದ್ದ. 2021ರಲ್ಲಿ ಇಬ್ಬರೂ ಆರ್ಯ ಸಮಾಜ ಟೆಂಪಲ್​ನಲ್ಲಿ ಮದುವೆಯಾಗಿದ್ದರು. ನಂತರ ಇಂದೋರ್‌ನಲ್ಲಿ ಇಬ್ಬರೂ ಬಾಡಿಗೆ ಮನೆ ಮಾಡಿಕೊಂಡಿದ್ದರು. ಕೆಲ ದಿನಗಳ ನಂತರ ಆಕೆ ಗಂಡನಿಗೆ ಕಿರುಕುಳ ಕೊಡೋದಕ್ಕೆ ಶುರು ಮಾಡಿದ್ದಳಂತೆ.

ಇದನ್ನೂ ಓದಿ; Loksabha; ಚಿತ್ರದುರ್ಗಕ್ಕೆ ಮಾದಾರ ಚೆನ್ನಯ್ಯ ಶ್ರೀ, ಬೆಂ. ಗ್ರಾಮಾಂತರಕ್ಕೆ ಡಾ.ಸಿ.ಎನ್.ಮಂಜುನಾಥ್?

Share Post