Keragodu Issue; ಹೋರಾಟದಿಂದ ಜೆಡಿಎಸ್ ಪಕ್ಷ ಅಂತರ..?; ನಾಳೆ ಮಂಡ್ಯ ಬಂದ್ ಆಗುತ್ತಾ..?
ಮಂಡ್ಯ; ಕೆರಗೋಡು (Keragodu).. ಈ ಊರು ಕೆಲ ದಿನಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.. ಇದಕ್ಕೆ ಕಾರಣ ಗ್ರಾಮದ ಧ್ವಜ ಸ್ತಂಭದಲ್ಲಿ ಹನುಮ ಧ್ವಜ (hanuma flag) ಹಾರಿಸಲಾಗಿತ್ತು. ಅದನ್ನು ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ತೆಗೆಸಿದ್ದರು. ಸಿದ್ದರಾಮಯ್ಯ (siddamaiah) ಸರ್ಕಾರವೇ ಈ ಕೆಲಸ ಮಾಡಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ (State guvernment) ಹಿಂದೂ ವಿರೋಧಿ ಎಂದು ಆರೋಪಿಸಲಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ದೊಡ್ಡ ಹೋರಾಟ ಕೂಡಾ ಮಾಡಿದ್ದರು. ವಿಶೇಷ ಅಂದ್ರೆ ಅಂದು ನಡೆದ ಹೋರಾಟದಲ್ಲಿ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಕೇಸರಿ ಶಾಲು ಧರಿಸಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಮತ್ತೆ ನಾಳೆ ಹಿಂದೂಪರ ಸಂಘಟನೆಗಳು ಮಂಡ್ಯ ಹಾಗೂ ಕೆರಗೋಡು ಬಂದ್‌ಗೆ ಕರೆ ನೀಡಿದ್ದಾರೆ. ಅದು ನಡೆಯುತ್ತಾ..? ಯಶಸ್ವಿಯಾಗುತ್ತಾ..? ಎಂಬುದರ ಬಗ್ಗೆ ಹಲವು ಅನುಮಾನಗಳು ಮೂಡಿವೆ.
ಇದನ್ನೂ ಓದಿ;ಈತ 20 ವರ್ಷಗಳ ಹಿಂದೆ ಕೊಲೆಗಾರ; ಜೈಲಿಂದ ಹೊರಬಂದಾಗ ಕಲೆಗಾರನಾಗಿದ್ದ!
ಜೆಡಿಎಸ್ ಬೆಂಬಲಿಸಿದ್ದರಿಂದ ಅಂದು ಹೋರಾಟ ಯಶಸ್ವಿ
ಜೆಡಿಎಸ್ ಬೆಂಬಲಿಸಿದ್ದರಿಂದ ಅಂದು ಹೋರಾಟ ಯಶಸ್ವಿ; ಅಂದು ಧ್ವಜ ಕೆಳಗಿಸಿಳಿದಾಗ ಕೆರಗೋಡಿಗೆ ನೂರಾರು ನಾಯಕರು ದೌಡಾಯಿಸಿದ್ದರು. ಬಿಜೆಪಿ ನಾಯಕರಂತೂ ದೊಡ್ಡ ಹೋರಾಟ ಹಮ್ಮಿಕೊಂಡಿದ್ದರು. ಪಾದಯಾತ್ರೆ ನಡೆಸಿದರು. ಹಿಂದೂ ಪರ ಸಂಘಟನೆಗಳಿಗೆ ಬಿಜೆಪಿ ಬೆಂಬಲವಾಗಿ ನಿಂತಿತ್ತು. ಆದ್ರೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಮಾತ್ರ ಮಂಡ್ಯದಲ್ಲಿ ಹೋರಾಟ ಮಾಡಿದ್ದಿದ್ದರೆ ಅದು ಯಶಸ್ವಿಯಾಗುತ್ತಿರಲಿಲ್ಲ. ಆದ್ರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಜೆಡಿಎಸ್ ಕೂಡಾ ಈ ಹೋರಾಟದಲ್ಲಿ ಪಾಲ್ಗೊಂಡಿತ್ತು. ಈ ವೇಳೆ ಕುಮಾರಸ್ವಾಮಿಯವರು ಕೇಸರಿ ಶಾಲು ಧರಿಸಿಯೇ ಹೋರಾಟದಲ್ಲಿ ಪಾಲ್ಗೊಂಡಿದ್ದರು. ನಂತರ ಅದನ್ನು ಸಮರ್ಥಿಸಿಕೊಂಡಿದ್ದರು ಕೂಡಾ.
ಇದನ್ನೂ ಓದಿ;ಅಂದು ಮಗ, ಇಂದು ಅಪ್ಪ-ಮತ್ತೊಂದು ಸಮರಕ್ಕೆ ಮಂಡ್ಯ ಸಜ್ಜು..?
ಕೇಸರಿ ಶಾಲು ಧರಿಸಬಾರದಿತ್ತು ಎಂದಿದ್ದ ದೇವೇಗೌಡರು
ಕೇಸರಿ ಶಾಲು ಧರಿಸಬಾರದಿತ್ತು ಎಂದಿದ್ದ ದೇವೇಗೌಡರು; ಕುಮಾರಸ್ವಾಮಿಯವರು ಇತ್ತೀಚೆಗೆ ಜಾತ್ಯತೀತ ವಾದ ಬಿಟ್ಟು ಹಿಂದುತ್ವ ವಾದ ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಅಂದು ಕೇಸರಿ ಶಾಲು ಧರಿಸಿದ್ದನ್ನು ಅವರು ಸಮರ್ಥಿಸಿಕೊಂಡಿದ್ದರು. ನಾನು ಹಿಂದೂ ಹೀಗಾಗಿ ಕೇಸರಿ ಶಾಲು ಧರಿಸಿದ್ದೇನೆ ಎಂದು ಹೇಳಿದ್ದರು. ಆದ್ರೆ ಕೆಲ ದಿನಗಳ ಬಳಿಕ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದರು. ಕುಮಾರಸ್ವಾಮಿಯವರು ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕೆ ನನ್ನ ಅಭ್ಯಂತರವಿಲ್ಲ. ಆದ್ರೆ ಅವರು ಹೋರಾಟದ ವೇಳೆ ಕೇಸರಿ ಶಾಲು ಧರಿಸಬಾರದಿತ್ತು. ನಮ್ಮ ಜೆಡಿಎಸ್‌ನವರು ನಮ್ಮ ಶಾಲನ್ನೇ ಧರಿಸಬೇಕಿತ್ತು. ಅವರು ಕೇಸರಿ ಶಾಲು ಧರಿಸಿದರೂ ಕೂಡಾ ನಾವು ನಮ್ಮ ಪಕ್ಷದ ಶಾಲನ್ನೇ ಧರಿಸಿ ಹೋರಾಟ ಮಾಡಬೇಕಿತ್ತು ಎಂದು ಹೇಳಿದ್ದರು.
ದೇವೇಗೌಡರ ಹೇಳಿಕೆ ಬಳಿ ಹೋರಾಟದಿಂದ ಅಂತರ
ದೇವೇಗೌಡರ ಹೇಳಿಕೆ ಬಳಿ ಹೋರಾಟದಿಂದ ಅಂತರ; ದೇವೇಗೌಡರು ಈ ರೀತಿಯಾಗಿ ಹೇಳಿಕೆ ನೀಡಿದ ಬಳಿಕ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರು ಕೆರಗೋಡು ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದಾರೆ. ದೇವೇಗೌಡರ ಹೇಳಿಕೆ ನಂತರ ಕುಮಾರಸ್ವಾಮಿಯವರಾಗಲೀ, ಇತರೆ ಜೆಡಿಎಸ್ ನಾಯಕರಾಗಲೀ ಕರೆಗೋಡು ಹೋರಾಟದ ಬಗ್ಗೆ ಮಾತನಾಡಿಲ್ಲ. ನಾಳೆಯ ಮಂಡ್ಯ ಹಾಗೂ ಕೆರಗೋಡು ಬಂದ್ ಹೋರಾಟದ ಬಗ್ಗೆಯೂ ಜೆಡಿಎಸ್ ತನ್ನ ನಿಲುವು ಪ್ರಕಟಿಸಿಲ್ಲ. ಹೀಗಾಗಿ, ಜೆಡಿಎಸ್ ಕಾರ್ಯಕರ್ತರನ್ನು ಬಿಟ್ಟು ವಿಹಿಂಪ ಕಾರ್ಯಕರ್ತರೇ ಮನೆಮನೆಗೆ ಹನುಮಧ್ವಜಗಳನ್ನು ಹಂಚಿಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ;ಕೆರಗೋಡು ಹೋರಾಟದಲ್ಲಿ ಹೆಚ್ಡಿಕೆ ಕೇಸರಿ ಶಾಲು ಹಾಕಬಾರದಿತ್ತು; ಹೆಚ್.ಡಿ.ದೇವೇಗೌಡ
ಇಂದು ಮಧ್ಯಾಹ್ನ ಸಭೆ ಬಳಿಕ ತೀರ್ಮಾನವಾಗುತ್ತಾ..?
ಇಂದು ಮಧ್ಯಾಹ್ನ ಸಭೆ ಬಳಿಕ ತೀರ್ಮಾನವಾಗುತ್ತಾ..?; ಫೆಬ್ರವರಿ 7ರಂದು ಮಂಡ್ಯ ಬಂದ್‌ಗೆ ಕರೆ ನೀಡಲಾಗಿತ್ತು. ಆದ್ರೆ ಜಿಲ್ಲಾಡಳಿತ ಮನವೊಲಿಸಿದ್ದರಿಂದ ಅಂದು ವಾಪಸ್ ಪಡೆಯಲಾಗಿತ್ತು. ಈಗ ನಾಳೆ ಬಂದ್ ನಡೆಸೋದಾಗಿ ಘೋಷಣೆ ಮಾಡಲಾಗಿದೆ. ಬಜರಂಗದಳ ಕರೆಕೊಟ್ಟ ಈ ಬಂದ್‌ಗೆ ಬಿಜೆಪಿ ಹಾಗೂ ಇತರ ಹಿಂದೂಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಆದ್ರೆ ಜೆಡಿಎಸ್ ಮಾತ್ರ ಅಂತರ ಕಾಯ್ದುಕೊಂಡಿದೆ. ಹೀಗಾಗಿ ಬಂದ್ ನಡೆಯುತ್ತೋ, ಇಲ್ಲವೋ ಎಂಬುದರ ಬಗ್ಗೆ ಅನುಮಾನ ಮೂಡಿದೆ. ಇಂದು ಮಧ್ಯಾಹ್ನ ಬಂದ್‌ಗೆ ಕರೆಕೊಟ್ಟ ಹೋರಾಟಗಾರರು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ನಾಳೆ ಬಂದ್ ನಡೆದೇ ನಡೆಯುತ್ತಿದೆ ಎಂದೂ ಹೇಳಲಾಗುತ್ತಿದೆ.