Districts

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರ; ಸಿಎಂ ಮನೆ ಮುಂದೆ ನಡೆಯಬೇಕಿದ್ದ ಧರಣಿಗೆ ಬ್ರೇಕ್‌

ಹಾವೇರಿ; ಪಂಚಮಸಾಲಿಗೆ 2ಎ ಮೀಸಲಾತಿ ವಿಚಾರವಾಗಿ ಜೂನ್‌ 27ರಂದು ಸಿಎಂ ಮನೆ ಮುಂದೆ ನಡೆಯಬೇಕಿದ್ದ ಧರಣಿಯನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಸರ್ಕಾರ ಮೂರು ಬಾರಿ ಮಾತು ಕೊಟ್ಟು ತಪ್ಪಿತ್ತು. ಮಾತು ತಪ್ಪಿದ್ದಕ್ಕೆ ಜೂನ್ 27 ರಂದು ಸಿಎಂ ಬೊಮ್ಮಾಯಿ ನಿವಾಸದ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಸರ್ಕಾರ ಎರಡು ಬಾರಿ ನಮ್ಮ ಜೊತೆ ಮಾತುಕತೆ ನಡೆಸಿದೆ. ಹೋರಾಟದ ಕಾವು ಸರ್ಕಾರಕ್ಕೆ ಮುಟ್ಟಿದ್ದರಿಂದ ಆಯೋಗವನ್ನು ಅಧ್ಯಯನಕ್ಕೆ ಕಳುಹಿಸಿದೆ. ಸರ್ಕಾರ ಎರಡು ತಿಂಗಳ ಕಾಲವಕಾಶ ಕೇಳಿದೆ ಹೇಳಿದ್ದಾರೆ.

ಎರಡು ತಿಂಗಳಲ್ಲಿ ಸಮಾಜಕ್ಕೆ ಸಿಹಿ ಸುದ್ದಿ ಕೊಡುವುದಾಗಿ ಬಸವರಾಜ ಬೊಮ್ಮಾಯಿಯವರು ಭರವಸೆ ನೀಡಿದ್ದಾರೆ. ಎರಡು ತಿಂಗಳು ಕಾಲವಕಾಶ ಕೇಳಿದ್ದರಿಂದ ಸಿಎಂ ನಿವಾಸದ ಮುಂದಿನ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಮುಂದೂಡಲಾಗಿದೆ. ಆಗಸ್ಟ್ 22ರ ಒಳಗಾಗಿ ಸರ್ಕಾರ ಸಮಾಜಕ್ಕೆ ಸಿಹಿ ಸುದ್ದಿ ಕೊಡುವುದಾಗಿ ಹೇಳಿದೆ. ಬಸವರಾಜ ಬೊಮ್ಮಾಯಿಯವರ ಮೇಲೆ ವಿಶ್ವಾಸವಿದೆ ಎಂದು ಶ್ರೀಗಳು ಹೇಳಿದ್ದಾರೆ.

 

Share Post