HDK V/S Sumalatha; ಅಂದು ಮಗ, ಇಂದು ಅಪ್ಪ-ಮತ್ತೊಂದು ಸಮರಕ್ಕೆ ಮಂಡ್ಯ ಸಜ್ಜು..?
ಮಂಡ್ಯ; ಕಳೆದ ಲೋಕಸಭಾ ಚುನಾವಣೆಯಲ್ಲಿ ಅಂಬರೀಶ್ ಪತ್ನಿ ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಅಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿಯವರನ್ನು 1 ಲಕ್ಷದ 20 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು. ಇದೀಗ, ಮತ್ತೆ ಮಂಡ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಬಿಜೆಪಿಯಿಂದ ಟಿಕೆಟ್ ಬಯಸಿದ್ದ ಸುಮಲತಾಗೆ ನಿರಾಸೆಯಾಗೋದು ಬಹುತೇಕ ಪಕ್ಕಾ.. ಯಾಕಂದ್ರೆ ಮಂಡ್ಯ ಕ್ಷೇತ್ರವನ್ನು ಬಿಜೆಪಿ ನಾಯಕರು ಜೆಡಿಎಸ್‌ಗೆ ಬಿಟ್ಟುಕೊಡುತ್ತಿದ್ದಾರೆ.. ಬಿಜೆಪಿ ನಾಯಕರ ಸೂಚನೆ ಹಾಗೂ ಮಂಡ್ಯ ಬೆಂಬಲಿಗರ ಆಸೆಯಂತೆ ಕುಮಾರಸ್ವಾಮಿಯವರೇ ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಹಾಗೇನಾದರೂ ಆದರೆ ಸುಮಲತಾ ಅವರು ಕಾಂಗ್ರೆಸ್‌ನಿಂದ ಅಖಾಡಕ್ಕಿಳಿಯೋ ಸಾಧ್ಯತೆ ಇದೆ.
ಕಳೆದ ಬಾರಿ ಮಗ ನಿಖಿಲ್ ಕುಮಾರಸ್ವಾಮಿಯವರನ್ನು ಸೋಲಿಸಿದ್ದ ಸುಮಲತಾ ಈಗ ಅಪ್ಪ ಕುಮಾರಸ್ವಾಮಿ ವಿರುದ್ಧ ಅಖಾಡಕ್ಕಿಳಿಯೋ ಲಕ್ಷಣ ಕಾಣ್ತಾ ಇದೆ. ಬಿಜೆಪಿಯಿಂದ ಅವರು ಟಿಕೆಟ್ ಬಯಸುತ್ತಿದ್ದಾರಾದರೂ, ಮಂಡ್ಯದಿಂದ ಬಿಜೆಪಿ ಟಿಕೆಟ್ ಸಿಗೋದು ಬಹುತೇಕ ಡೌಟು. ಸುಮಲತಾ ಅವರು ಮಾತ್ರ ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡೋದಿಲ್ಲ ಎಂದು ಹೇಳುತ್ತಿದ್ದಾರೆ.. ಜೊತೆಗೆ ಅವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆಯೂ ಆಸಕ್ತಿ ಇದೆ. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಂತೂ ಸ್ಪರ್ಧೆ ಮಾಡೋದು ಕಷ್ಟ. ಇನ್ನೊಂದೆಡೆ ಸಮುಲತಾ ಬಯಸಿದರೆ ಕಾಂಗ್ರೆಸ್ ನವರು ಅವರನ್ನು ಪಕ್ಷಕ್ಕೆ ಆಹ್ವಾನಿಸಿ ಟಿಕೆಟ್ ಕೊಡೋಕೂ ರೆಡಿಯಾಗೋದು ಬಹುತೇಕ ಖಚಿತ. ಹೀಗಾಗಿ, ಈ ಬಾರಿ ಮಂಡ್ಯದಲ್ಲಿ ಸುಮಲತಾ ವರ್ಸಸ್ ಕುಮಾರಸ್ವಾಮಿ ಆಗಬಹುದು ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ನವರು ಈಗಾಗಲೇ ಶಾರ್ಟ್ ಲಿಸ್ಟ್ ಮಾಡಿದ್ದು, ಅದರಲ್ಲಿ ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಅವರ ಹೆಸರನ್ನೂ ಕನ್ಸಿಡರ್ ಮಾಡಿದ್ಧಾರೆ ಎಂದು ಹೇಳಲಾಗುತ್ತಿದೆ. ತೆರೆಮರೆಯಲ್ಲಿ ಅವರೊಂದಿಗೆ ಮಾತನಾಡುವ ಪ್ರಯತ್ನವೂ ನಡೆದಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅದು ನಿಜವೇ ಆದರೂ ಮಂಡ್ಯ ಕ್ಷೇತ್ರ ಮತ್ತೆ ಕುತೂಹಲಕ್ಕೆ ಕಾರಣವಾಗುತ್ತದೆ. ಮಗ ನಿಖಿಲ್ ಕುಮಾರಸ್ವಾಮಿಯವರನ್ನು ಸೋಲಿಸಿದ್ದ ಸುಮಲತಾ ಅವರಿಗೆ ಅಂದು ಸ್ವಾಭಿಮಾನ ಕೈಹಿಡಿದಿತ್ತು. ಇದೀಗ ಅಪ್ಪ ಕುಮಾರಸ್ವಾಮಿ ವಿರುದ್ಧ ಸೆಣಸಾಡಬೇಕಾದರೆ ಸುಮಲತಾ ಅವರು ಮತ್ತೊಂದು ತಂತ್ರಗಾರಿಕೆ ಪ್ಲೇ ಮಾಡಬೇಕಾಗುತ್ತದೆ.
ಈಗಾಗಲೇ ಸುಮಲತಾ ಅವರು ನಾನು ಮಂಡ್ಯಕ್ಕಾಗಿಯೇ ಇರೋದು. ಮಂಡ್ಯಕ್ಕಾಗಿಯೇ ರಾಜಕಾರಣ ಮಾಡುತ್ತಿರೋದು. ಮಂಡ್ಯ ಇಲ್ಲ ಅಂದ ಮೇಲೆ ನನಗರ ರಾಜಕಾರಣವೇ ಬೇಡ ಎಂದಿದ್ದಾರೆ. ಈ ಮೂಲಕ ಮಂಡ್ಯ ಜನರ ಮನಸ್ಸು ಗೆಲ್ಲೋಕೆ ಶುರು ಮಾಡಿದ್ದಾರೆ. ಆದ್ರೆ ಮುಂದಿನ ಬೆಳವಣಿಗೆಗಳು ಹೇಗೆಇರುತ್ತವೆಯೋ ನೋಡಬೇಕು.