NationalUncategorized

ಪ್ಯಾಂಟ್ರಿ ಬೋಗಿಯಲ್ಲಿ ಬೆಂಕಿ; ಧಗ ಧಗ ಹೊತ್ತಿ ಉರಿದ ರೈಲು

ಸೂರತ್‌: ನಂದೂರ್ ಬಾರ್ ನಿಂದ ಗಾಂಧಿಧಾಮಕ್ಕೆ ಹೋಗುವ ಸೂಪರ್ ಫಾಸ್ಟ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.  ಪ್ಯಾಂಟ್ರಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತ ಮುತ್ತ ದಟ್ಟ ಹೊಗೆ ಆವರಿಸಿತ್ತು. ಹೀಗಾಗಿ ಕೂಡಲೇ ಬೋಗಿಯನ್ನು ಬೇರ್ಪಡಿಸಿ, ಬೆಂಕಿಯನ್ನು ನಂದಿಸಲಾಗಿದೆ.

ಬೆಳಗ್ಗೆ ೧೦.೩೫ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಕೂಡಲೇ ಎಚ್ಚೆತ್ತುಕೊಂಡು, ಬೋಗಿಯನ್ನು ಬೇರ್ಪಡಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಪ್ಯಾಂಟ್ರಿ ಬೋಗಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸಮಯಕ್ಕೆ ಸರಿಯಾಗಿ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದರಿಂದ ಬಹುಬೇಗ ಬೆಂಕಿ ನಂದಿಸಲಾಗಿದ್ದು, ದೊಡ್ಡ ನಾಹುತ ತಪ್ಪಿದೆ.

 

 

Share Post