CrimeNational

ಪ್ರಿಯಕರನ ಜೊತೆ ಸೇರಿ ಹೆತ್ತ ಮಗನನ್ನೇ ಕೊಂದ ತಾಯಿ!

ಪುಣೆ; ತಾಯಿಯನ್ನು ದೇವರಿಗೆ ಸಮಾನ ಎಂದು ಹೇಳುತ್ತಾರೆ.. ಆದ್ರೆ ಸಾವಿರಕ್ಕೊಬ್ಬರು ಕಟುಕ ತಾಯಂದಿರೂ ಇರುತ್ತಾರೆ.. ಅವರು ಕೂಡಾ ರಾಕ್ಷಸಿಗಳಂತೆ ವರ್ತಿಸುತ್ತಾರೆ.. ಅದಕ್ಕೆ ಸೂಕ್ತ ಉದಾಹರಣೆಯೇ ಈ ಸ್ಟೋರಿ.. ತನ್ನ ಅಕ್ರಮ ಸಂಬಂಧಕ್ಕೆ ಮಗ ಅಡ್ಡಿ ಬರುತ್ತಿದ್ದಾನೆ ಎಂದು ಹೆತ್ತ ತಾಯಿಯೇ ತನ್ನ ಪ್ರಿಯಕರನ ಜೊತೆ ಸೇರಿ ಮಗನನ್ನು ಕೊಲೆ ಮಾಡಿದ್ದಾಳೆ.. ಮಹಾರಾಷ್ಟ್ರದ ಪುಣೆ ನಗರದ ಲೋನಿಕಂಡ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ..
30 ವರ್ಷದ ಅನಿಲ್‌ ಲಾಲ್ಸಿಂಗ್‌ ಠಾಕೂರ್‌ ಎಂಬಾತನೇ ತಾಯಿಯಿಂದ ಕೊಲೆಯಾದ ಮಗನಾಗಿದ್ದಾರೆ.. ಕೊಲೆಯಾದ ಅನಿಲ್‌ ಲಾಲ್‌ಸಿಂಗ್‌ ಕುಟುಂಬ ಉತ್ತರ ಪ್ರದೇಶ ಮೂಲದವರು.. ಇವರು ಪುಣೆಯ ಪೆರ್ನೆ ಫಾಟಾ ಪ್ರದೇಶದಲ್ಲಿ ಕೂಲಿ ಕೆಲಸ ಮಾಡಲು ಬಂದಿದ್ದರು.. ಅನಿಲ್‌ಗೆ ತಂದೆ ಇಲ್ಲ.. ತಾಯಿ ಸಮಿತ್ರಾ ಜೊತೆ ವಾಸವಿದ್ದ.. ಆದ್ರೆ 55 ವರ್ಷದ ಸುಮಿತ್ರಾ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು.. 34 ವರ್ಷದ ಪ್ರಫುಲ್‌ ಪುಂಡಲೀಕ್‌ ರಾಥೋಡ್‌ ಎಂಬಾತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು..
ಇವರ ಈ ಸಂಬಂಧಕ್ಕೆ ವಯಸ್ಸಿಗೆ ಬಂದಿದ್ದ ಮಗ ಅನಿಲ್‌ ಅಡ್ಡಿಯಾಗಿದ್ದ.. ಆಗಾಗ ಇದೇ ವಿಚಾರವಾಗಿ ಅನಿಲ್‌ ತಾಯಿಯ ಜೊತೆ ಜಗಳವಾಡುತ್ತಿದ್ದ.. ಇದರಿಂದ ಕೆರಳಿದ್ದ ತಾಯಿ ತನ್ನ ಪ್ರಿಯಕರನ ಜೊತೆ ಸೇರಿ ಅನಿಲ್‌ ಮೇಲೆ ಮನಬಂದಂತೆ ಹಲ್ಲೆ ಮಾಡಿ ದೊಡ್ಡ ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡಲಾಗಿದೆ.. ಈ ಸಂಬಂಧ ಅನಿಲ್‌ ಸಹೋದರ ದೂರು ನೀಡಿದ್ದು, ಸದ್ಯ ತಾಯಿ ಸುಮಿತ್ರಾಳನ್ನು ಪೊಲೀಸರು ಬಂಧಿಸಿದ್ದಾರೆ.. ಆಕೆಯ ಪ್ರಿಯಕರ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

Share Post