ಮುಸ್ಲಿಂ ಪತಿ 2ನೇ ಮದುವೆಯಾಗುವಂತಿಲ್ಲ; ಅಲಹಾಬಾದ್ ಹೈಕೋರ್ಟ್
ಲಕ್ನೋ; ಮೊದಲ ಹೆಂಡತಿ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಾಗದ ಮುಸ್ಲಿಂ ವ್ಯಕ್ತಿ ಕುರಾನ್ ಪ್ರಕಾರವೇ ಎರಡನೇ ಮದುವೆಯಾಗಲು ಅವಕಾಶವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿತು. ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಸೂರ್ಯಪ್ರಕಾಶ್ ಕೇಸರವಾಣಿ ಹಾಗೂ ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ಪೀಠ ಮೇಲಿನ ಆದೇ ಹೊರಡಿಸಿದೆ.
ಮೊದಲ ಪತ್ನಿಯ ಇಚ್ಛೆಯನ್ನು ವಿರೋಧಿಸಿ, 2ನೇ ಮದುವೆಯಾದ ವ್ಯಕ್ತಿ ಮೊದಲ ಪತ್ನಿಯೂ ತನ್ನೊಂದಿಗೆ ಇರಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ತಿಳಿಸಿದೆ.