National

ಶಾಲಾ-ಕಾಲೇಜುಗಳ ಬಂದ್‌ಗೆ ಬಿಎಂಸಿ ಅಸ್ತು: ಆನ್ಲೈನ್‌ ತರಗತಿ ಪ್ರಾರಂಭ

ಮುಂಬೈ: ಮಹಾರಾಷ್ಟ್ರದಲ್ಲಿ ಮಿತಿಮೀರಿದ ಕೊರೊನಾ ಕೇಸ್‌ಗಳ ಹಾವಳಿಗೆ ಬ್ರೇಕ್‌ ಹಾಕಲು ಬಿಎಂಸಿ ನಿರ್ಧಾರ ಮಾಡಿದ್ದು, ಶಾಲಾ ಕಾಲೇಜುಗಳನ್ನು ಬಂದ್‌ ಮಾಡುವಂತೆ ಆದೇಶಿಸಿದೆ. ೧ ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದ್ದು ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಆನ್ಲೈನ್‌ ತರಗತಿಗಳನ್ನು ನಡೆಸುವಂತೆ ಸೂಚಿಸಿದೆ. ಮೊನ್ನೆಯಷ್ಟೇ ಸಂಪುಟದಲ್ಲೂ ೨೩ಮಂದಿಗೆ ಕೊರೊನಾ ಬಂದಿತ್ತು ಇದರ ಜೊತೆಗೆ ದಿನೇ ದಿನೇ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲಿದೆ. ಮುಂಜಾಗ್ರತಾ ಕ್ರಮವಾಗಿ ಜನವರಿ 31ರವರೆಗೆ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ. ಮಕ್ಕಳ ಲಸಿಕಾ ಅಭಿಯಾನಕ್ಕೆ ತಡೆಯಾಗದಂತೆ ೧೫ರಿಂದ೧೮ ವರ್ಷದೊಳಗಿನ ಲಸಿಕೆ ಪಡೆಯುವ ಮಕ್ಕಳಿಗೆ ಮಾತ್ರ ಬರಲು ಅವಕಾಶವಿದ್ದು, ಲಸಿಕೆ ಪಡೆದ ಕೂಡಲೇ ಅವರನ್ನು ವಾಪಸ್‌ ಕಳಿಸಲಾಗುವುದು ಎಂದು ಬಿಎಂಸಿ ತಿಳಿಸಿದೆ.

ಕೊರೊನಾ, ಓಮಿಕ್ರಾನ್‌ ಪ್ರಕರಣಗಳು ಇಳಿಮುಖವಾಗುವವರಗೆ ಈ ಆದೇಶ ಪಾಲನೆಯಾಗಲಿದೆ. ಹೊಸದಾಗಿ ೫೦ ಓಮಿಕ್ರಾನ್‌ ಪ್ರಕರಣ ಬೆಳಕಿಗೆ ಬಂದಿವೆ. ಇಲ್ಲಿವರೆಗೂ ಮಹಾರಾಷ್ಟ್ರದಲ್ಲಿ ೫೧೦ ಓಮಿಕ್ರಾನ್‌ ಪ್ರಕರಣಗಳು ದಾಖಲಾಗಿವೆ.  66,99,868 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ನಿನ್ನೆ (ಭಾನುವಾರ) 11,877 ಕೇಸ್‌ಗಳು ದಾಖಲಾಗಿವೆ.

 

Share Post