DistrictsPoliticsUncategorized

ಪತ್ನಿ ಜೊತೆ ಬಂದ ಮತ ಚಲಾಯಿಸಿದ ಪ್ರಿಯಾಂಕ್‌ ಖರ್ಗೆ

ಬೆಂಗಳೂರು; ಶಾಸಕ ಹಾಗೂ ಚಿತ್ತಾಪುರ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ್‌ ಖರ್ಗೆ ಮತ ಚಲಾವಣೆ ಮಾಡಿದರು. ಚಿತ್ತಾಪುರ ಮತಕ್ಷೇತ್ರದ ಗುಂಡಗುರ್ತಿ ಗ್ರಾಮದಲ್ಲಿ ಪ್ರಿಯಾಂಕಾ ಖರ್ಗೆ ಮತ ಚಲಾಯಿಸಿದರು. ಇದೇ ವೇಳೆ ಅವರ ಜೊತೆ ಪತ್ನಿ ಶೃತಿ ಕೂಡಾ ಮತ ಚಲಾವಣೆ ಮಾಡಿದರು.

ಶೃತಿ ಅವರು ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಶಸ್ತ್ರಚಿಕಿತ್ಸೆಗೊಳಗಾಗಿ ಮನೆಗೆ ವಾಪಸ್ಸಾಗಿದ್ದರು. ದೆಹಲಿಯಲ್ಲಿದ್ದ ಶೃತಿ ವಿಮಾನದ ಮೂಲಕ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಅವರ ಇಬ್ಬರು ಪುತ್ರರು ಕೂಡಾ ಜೊತೆಗಿದ್ದರು.

Share Post