BengaluruPolitics

ಸರ್ಕಾರದಿಂದ ಮದ್ಯದ ದರ ಏರಿಕೆ ಮಾಡಿಲ್ಲ; ಅಬಕಾರಿ ಸಚಿವರ ಸ್ಪಷ್ಟನೆ

ಬೆಂಗಳೂರು; ಇಂದಿನಿಂದ ಬಡವರು ಕುಡಿಯುವ ಲಿಕ್ಕರ್‌ ಬ್ರಾಂಡ್‌ಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ಆದ್ರೆ ಇದನ್ನು ಅಬಕಾರಿ ಸಚಿವರು ನಿರಾಕರಣೆ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರು, ಸರ್ಕಾರದಿಂದ ಯಾವುದೇ ದರ ಏರಿಕೆ ಮಾಡಿಲ್ಲ ಎಂದು ಹೇಳಿದ್ದಾರೆ. 

ನಾವು ಅಬಕಾರಿ ಸುಂಕದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಮದ್ಯದ ಉತ್ಪಾದಕರು ದರ ಏರಿಕೆ ಮಾಡಿರಬಹುದು. ಇದರಿಂದಾಗಿ ಬೆಲೆ ಏರಿಕೆಯಾಗಿರಬಹುದು. ಆದ್ರೆ ಸರ್ಕಾರದಿಂದ ಯಾವುದೇ ದರ ಏರಿಕೆ ಮಾಡಿಲ್ಲ. ಒಂದು ವೇಳೆ ಅಬಕಾರಿ ಶುಲ್ಕ ಏರಿಕೆ ಮಾಡೋದಾದರೆ ನಾವೇ ಮೊದಲೇ ತಿಳಿಸುತ್ತೇವೆ. ಈಗ ನಾವು ದರ ಏರಿಕೆ ಮಾಡಿಲ್ಲ. ಇದೆಲ್ಲಾ ಸುಳ್ಳು ಸುದ್ದಿ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಸ್ಪಷ್ಟನೆ ನೀಡಿದ್ದಾರೆ.

 

Share Post