Districts

ರಾಜ್ಯದಲ್ಲಿ ಮತ್ತೆ ಭೂಕಂಪನದ ಸದ್ದು; ಚಿಂಚೋಳಿಯಲ್ಲಿ ನಡುಗಿದ ಭೂಮಿ

ಕಲಬುರಗಿ; ರಾಜ್ಯದಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಭೂಮಿ ನಡುಗಿದ ಅನುಭವವಾಗಿದ್ದು, ಹಲವು ಗ್ರಾಮಗಳ ಜನರಿಗೆ ಭಾರೀ ಸದ್ದು ಕೇಳಿಸಿದೆ. ಇದರಿಂದಾಗಿ ಭೀತಿಗೊಳಗಾದ ಜನರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

   ಚಿಂಚೋಳಿ ತಾಲೂಕಿನ ಸುಲೇಪೇಟ್, ಚಿಮ್ಮಾಇದ್ಲಾಯಿ, ದಸ್ತಾಪುರ, ನೀಮಾಹೊಸಹಳ್ಳಿ, ಗಡಿಕೇಶ್ವರ, ಅಣವಾರ, ಗೌಡನಹಳ್ಳಿ, ಇಂದ್ರಪಾಡ ಹೊಸಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಾತ್ರಿ 11 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ್ದು, ಜನರು ಮನೆಯಿಂದ ಹೊರಬಂದು ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ.

Share Post