BengaluruPolitics

Loksabha congress list; ಅಳೆದೂತೂಗಿ ಸಂಭಾವ್ಯರ ಪಟ್ಟಿ ರೆಡಿ ಮಾಡಿದ ಕಾಂಗ್ರೆಸ್‌, ಇದ್ರಲ್ಲಿ ಗೆಲ್ಲೋರು ಯಾರು..?

ಬೆಂಗಳೂರು; ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಕಾಂಗ್ರೆಸ್‌ ಹೈಕಮಾಂಡ್‌ದು. ಈ ನಿಟ್ಟಿನಲ್ಲಿ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಎಚ್ಚರಿಕೆಯ ಹೆಜ್ಜೆ ಇಡಲಿದೆ. ಇನ್ನು ಇನ್ನೇನು ಇನ್ನೆರಡು ತಿಂಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದೆ. ಅಷ್ಟರಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಕೊಳ್ಳಬೇಕು. ಕೊನೇ ಕ್ಷಣದಲ್ಲಿ ಪರದಾಡುವ ಬದಲು ಈಗಲೇ ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡಿ, ಕ್ಷೇತ್ರದಲ್ಲಿ ಸಂಘಟನೆಗೆ ಒತ್ತು ನೀಡಲು ಕಾಂಗ್ರೆಸ್‌ ನಾಯಕರು ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಅಳೆದೂತೂಗಿ 15 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡಿದ್ದಾರೆ. 

ಕೊನೇ ಕ್ಷಣದಲ್ಲಿ ಏನು ಬೇಕಾದರೂ ಬದಲಾವನೆ ಆಗಬಹುದಾದರೂ, ಸದ್ಯಕ್ಕೆ ಈ ಹೆಸರುಗಳೇ ಫೈನಲ್‌ ಎಂದು ಹೇಳಲಾಗುತ್ತಿದೆ. ಜಾತಿ, ಹಣ ಬಲ, ಜನಬಲ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಪಟ್ಟಿ ರೆಡಿ ಮಾಡಲಾಗಿದೆ. ಈಗಾಗಲೇ ಪಟ್ಟಿಯಲ್ಲಿರುವವರಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಆಕ್ಟೀವ್‌ ಆಗಿರುವಂತೆಯೂ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ..?

೧. ಬೆಂಗಳೂರು ಕೇಂದ್ರ – ಎನ್‌.ಎ.ಹ್ಯಾರೀಸ್‌

೨. ಬೆಂಗಳೂರು ದಕ್ಷಿಣ – ಎನ್‌.ರಮೇಶ್‌ ಕುಮಾರ್‌

೩. ಬೆಂಗಳೂರು ಉತ್ತರ – ಕುಸುಮಾ ಹನುಮಂತರಾಯಪ್ಪ ಅಥವಾ ಸೌಮ್ಯಾರೆಡ್ಡಿ

೪. ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ, ತಪ್ಪಿದರೆ ಎಂ.ವೀರಪ್ಪ ಮೊಯ್ಲಿ

೫. ಕೋಲಾರ – ಕೆ.ಹೆಚ್‌.ಮುನಿಯಪ್ಪ ಅಥವಾ ಚಿಕ್ಕಪೆದ್ದಣ್ಣ

೬. ತುಮಕೂರು – ಮುದ್ದಹನುಮೇಗೌಡ (ಮಾಜಿ ಸಂಸದ, ಸದ್ಯ ಬಿಜೆಪಿಯಲ್ಲಿದ್ದಾರೆ)

೭. ಮೈಸೂರು-ಕೊಡಗು – ಎಂ.ಲಕ್ಷ್ಮಣ್‌, ಯತೀಂದ್ರ ಅಥವಾ ಡಾ.ಶುಶ್ರುತ್‌ ಗೌಡ

೮. ಚಾಮರಾಜನಗರ – ಹೆಚ್‌.ಸಿ.ಮಹದೇವಪ್ಪ

೯. ಬಳ್ಳಾರಿ – ಸೌಪರ್ಣಿಕಾ (ಇ.ತುಕಾರಂ ಮಗಳು)

೧೦. ಕಲಬುರಗಿ – ರಾಧಾಕೃಷ್ಣ (ಮಲ್ಲಿಕಾರ್ಜುನ ಖರ್ಗೆ ಅಳಿಯ)

೧೧. ಬೀದರ್‌ – ಸಾಗರ್‌ ಖಂಡ್ರೆ (ಈಶ್ವರ್‌ ಖಂಡ್ರೆ ಪುತ್ರ)

೧೨. ಬೆಳಗಾವಿ – ಮೃಣಾಲ್‌ (ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ) ಅಥವಾ ಡಾ.ಗಿರೀಶ್‌

೧೩. ಮಂಡ್ಯ – ಸುಮಲತಾ ಅಂಬರೀಶ್‌ ಅಥವಾ ಸ್ಟಾರ್‌ ಚಂದ್ರು

೧೪. ಚಿಕ್ಕೋಡಿ – ಪ್ರಕಾಶ್‌ ಹುಕ್ಕೇರಿ

೧೫. ಹುಬ್ಬಳ್ಳಿ-ಧಾರವಾಡ – ಶಿವಲೀಲಾ (ವಿನಯ್‌ ಕುಲಕರ್ಣಿ ಪತ್ನಿ) ಅಥವಾ ರಜತ್‌ ಉಳ್ಳಾಗಡ್ಡಿ

೧೬. ಕೊಪ್ಪಳ – ರಾಜಶೇಖರ್‌ ಹಿಟ್ನಾಳ್‌, ಶಿವರಾಮೇಗೌಡ, ಅಮರೇಗೌಡ ಬಯ್ಯಾಪುರ

 

ಮೊದಲೇ ಹೇಳಿದಂತೆ ಈ ಲಿಸ್ಟ್‌ನಲ್ಲೊ ಹಾಲಿ ಸಚಿವರಿದ್ದಾರೆ. ಶಾಸಕರು, ಮಂತ್ರಿಗಳು, ಹಿರಿಯ ಕಾಂಗ್ರೆಸ್‌ ನಾಯಕರ ಮಕ್ಕಳು ಕೂಡಾ ಇದ್ದಾರೆ.

Share Post