ವೀಕೆಂಡ್ ಲೀವ್ಗೆ ಯುಎಇ ಅಸ್ತು; ವಾರಕ್ಕೆ ನಾಲ್ಕು ದಿನ ಕೆಲಸ
ದುಬೈ: ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲೂ ವಾರಾಂತ್ಯದಲ್ಲಿ ಉದ್ಯೋಗಿಗಳಿಗೆ ರಜೆ ನೀಡಲಾಗುತ್ತೆ ಆದ್ರೆ ʻಯುಎಇʼನಲ್ಲಿ ಮಾತ್ರ ಶುಕ್ರವಾರ ರಜೆ ಘೋಷಿಸಲಾಗಿತ್ತು, ಅದನ್ನೀಗ ಸಂಯುಕ್ತ ಅರಬ್ ಅಮೀರ್ ಶಾಹಿ ಅದನ್ನು ವಾರಾಂತ್ಯಕ್ಕೆ ಬದಲಾವಣೆ ಮಾಡಿದ್ದಾರೆ. ಜನವರಿ 1ರಿಂದಲೇ ಈ ಯೋಜನೆ ಜಾರಿಗೆ ಬರುವಂತೆ ಆದೇಶ ಮಾಡಲಾಗಿದೆ. ಇದ್ದಕ್ಕಿದ್ದಂತೆ ಈ ಬದಲಾವಣೆಗೆ ಕಾರಣವೂ ಇದೆ, ಬಹುತೇಕ ದೇಶಗಳು ವಾರಾಂತ್ಯ ರಜೆ ನಿಯಮವನ್ನು ಅನುಸರಿಸುತ್ತಿವೆ. ಈ ದೇಶಗಳೊಂದಿಗೆ ವ್ಯಾಪಾರ-ವಹಿವಾಟು, ಹಣಕಾಸು ವ್ಯವಹಾರದ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇನ್ಮುಂದೆ ದುಬೈನಲ್ಲಿ ಕೆಲಸದ ವ್ಯವಹಾರ ಸೋಮವಾರದಿಂದ ಶುಕ್ರವಾರ ಅರ್ಧದಿನದವರೆಗೆ ಇರಲಿದೆ, ಮುಂದಿನ ದಿನಗಳಲ್ಲಿ ಶಾಲೆಗಳು ಹಾಗೂ ಖಾಸಗಿ ಸಂಸ್ಥೆಗಳು ಕೂಡ ಅನುಸರಿಸುವ ಸಾಧ್ಯತೆ ಇದೆ.