International

ಸಿರಿಯಾ ಕಟ್ಟಡದ ಮೇಲೆ ಇಸ್ರೇಲ್‌ ರಾಕೆಟ್‌ ದಾಳಿ; 7 ಸಾವು!

ಸಿರಿಯಾ; ಇಸ್ರೇಲ್‌ ಮತ್ತೆ ರಾಕೆಟ್‌ ದಾಳಿ ನಡೆಸಿದೆ.. ಸಿರಿಯಾದ ರಾಜಧಾನಿ ಡಮಾಸ್ಕಸ್‌ ನಗರದಲ್ಲಿರುವ ವಸತಿ ಕಟ್ಟಡದ ಮೇಲೆ ರಾಕೆಟ್‌ ದಾಳಿ ಮಾಡಲಾಗಿದ್ದು, ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ.. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಮಹಿಳೆಯರು, ಮಕ್ಕಳು ಕೂಡಾ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.. ಇಸ್ರೇಲ್‌ ಮೂರು ರಾಕೆಟ್‌ ಗಳನ್ನು ಒಂದೇ ಸಮಯದಲ್ಲಿ ಹಾರಿಸಲಾಗಿದ್ದು, ವಸತಿ ಕಟ್ಟಡವೊಂದಕ್ಕೆ ತೀವ್ರ ಹಾನಿಯಾಗಿದೆ.. ಇರಾನ್​ನ ರೆವಲ್ಯೂಷನರಿ ಗಾರ್ಡ್​ ಮತ್ತು ಹಿಜ್ಬುಲ್ಲಾ ನಾಯಕರು ಈ ಕಟ್ಟಡಕ್ಕೆ ಭೇಟಿ ನೀಡುತ್ತಿದ್ದರು… ಈ ಹಿನ್ನೆಲೆಯಲ್ಲಿ ಈ ಕಟ್ಟಡವನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ..

Share Post