ಲಸಿಕೆ ಮುಂದೆ ಒಮಿಕ್ರಾನ್ ಆಟ ನಡೆಯೋದಿಲ್ಲ;ವಿಶ್ವ ಆರೋಗ್ಯ ಸಂಸ್ಥೆ
ಕೊರೋನಾ ಲಸಿಕೆಗಳ ಮುಂದೆ ಒಮಿಕ್ರಾನ್ ಆಟ ಕೂಡಾ ನಡೆಯೋದಿಲ್ಲ. ಎರಡೂ ಲಸಿಕೆ ಪಡೆದುಕೊಂಡವರು ಒಮಿಕ್ರಾನ್ ಬಗ್ಗೆ ಆತಂಕಪಡೆಬೇಕಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ.
ಒಮಿಕ್ರಾನ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅದರ ಪರಿಣಾಮದ ಬಗ್ಗೆ ಚರ್ಚೆ ನಡೆಸಲು ನಿನ್ನೆ ವಿಶ್ವ ಆರೋಗ್ಯ ಸಂಸ್ಥೆ ತಜ್ಞರ ಸಭೆಯನ್ನು ಕರೆದಿತ್ತು. ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು. ಬೂಸ್ಟರ್ ಡೋಸ್ ನೀಡುವ ಬಗ್ಗೆಯೂ ಚರ್ಚೆ ನಡೆಯಿತು.
ಆದರೆ ತಜ್ಞರು ಹೇಳುವ ಪ್ರಕಾರ ಒಮಿಕ್ರಾನ್ ತಳಿಯಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಒಮಿಕ್ರಾನ್ ತಗುಲಿದರೂ ಲಸಿಕೆ ಪಡೆದಿದ್ದರೆ ಗಂಭೀರ ಸ್ಥಿತಿಗೆ ತಲುಪುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗ ತಜ್ಞ ಮೈಕೆಲ್ ರಾಯನ್, ಒಮಿಕ್ರಾನ್ ಕೂಡಾ ಲಸಿಕೆಯಿಂದ ತಪ್ಪಿಸಿಕೊಳ್ಳಲು ಆಗಲ್ಲ. ಸದ್ಯ ಒಮಿಕ್ರಾನ್‌ಗೆ ಅತ್ಯುತ್ತಮ ಅಸ್ತ್ರ ಕೊವಿಡ್ ಲಸಿಕೆ ಪಡೆಯುವುದು. ಗಂಭೀರ ಸ್ಥಿತಿಗೆ ತಲುಪದಂತೆ ಲಸಿಕೆಗಳು ರಕ್ಷಣೆ ನೀಡುತ್ತವೆ. ಸೋಂಕು ತಗುಲುವಿಕೆ ಹಾಗೂ ಆಸ್ಪತ್ರೆಗೆ ದಾಖಲಾಗುವುದರಿಂದಲೂ ಲಸಿಕೆಗಳು ರಕ್ಷಣೆ ನೀಡುತ್ತವೆ ಎಂದು ಹೇಳಿದ್ದಾರೆ.