ಹಿಜಾಬ್ ವಿವಾದ: ಅಂತಾರಾಷ್ಟ್ರೀಯ ಮಧ್ಯಪ್ರವೇಶಕ್ಕೆ ವಿದೇಶಾಂಗ ಸಚಿವಾಲಯ ಬ್ರೇಕ್
ದೆಹಲಿ: ಕರ್ನಾಟಕದಲ್ಲಿ ಹಿಜಾಬ್ ವಿವಾದದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಂತಾರಾಷ್ಟ್ರೀಯ ಮಧ್ಯ ಪ್ರವೇಶದ ಬಗ್ಗೆ ಹೇಳಿಕೆ ನೀಡಿದೆ. ಬೇರೆ ದೇಶಗಳು ಮಧ್ಯಪ್ರವೇಶಿಸಿ ಪ್ರಚೋದನಕಾರಿ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. “ಆಂತರಿಕ ವಿಷಯಗಳ ಬಗ್ಗೆ ನಿಮ್ಮ ಕಾಮೆಂಟ್‌ಗಳನ್ನು ನಾವು ಸ್ವಾಗತ” ಮಾಡುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಚಿ ಈ ಹೇಳಿಕೆಯನ್ನು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಹೈಕೋರ್ಟ್ ಸಮವಸ್ತ್ರ ಕುರಿತು ಕಾನೂನು ವಿಚಾರಣೆ ನಡೆಸುತ್ತಿದೆ. ನಮ್ಮ ಸಾಂವಿಧಾನಿಕ ಕೆಲಸ, ಕಾರ್ಯವಿಧಾನ, ಪ್ರಜಾಸತ್ತಾತ್ಮಕ ಆಚರಣೆಗಳು, ರಾಜತಾಂತ್ರಿಕತೆಯಲ್ಲಿ ನಮಗೆ ನಂಬಿಕೆಯಿದೆ. ನಮ್ಮ ಸಮಸ್ಯೆಗಳನ್ನು ನಾವು ಪರಿಹರಿಸಿಕೊಳ್ಳುತ್ತೇವೆ. ಭಾರತದ ಬಗ್ಗೆ ತಿಳಿದವರು ವಾಸ್ತವಿಕತೆಯನ್ನು ಮೆಚ್ಚುತ್ತಾರೆ. ಆಂತರಿಕ ಸಮಸ್ಯೆಗಳ ಕುರಿತು ನಿಮ್ಮ ಕಾಮೆಂಟ್‌ಗಳಿಗೆ ನಾವು ಅನುಮೋದನೆ ನೀಡುವುದಿಲ್ಲ ಎಂದಿದ್ದಾರೆ.
ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುರುವಾದ ಹಿಜಾಬ್ ವಿವಾದ ದೇಶಾದ್ಯಂತ ಹರಡಿದೆ. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಗುಂಪು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದರು. ಕೆಲವು ವಿದ್ಯಾರ್ಥಿಗಳು ಹಿಜಾಬ್ ತಮ್ಮ ಹಕ್ಕು ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಲಾಗಿದೆ.