CrimeInternational

ಜೈಶ್ ಉಗ್ರ ಮೌಲಾನಾ ರಹೀಂ ಉಲ್ಲಾ ತಾರೀಖ್ ಪಾಕಿಸ್ತಾನದಲ್ಲಿ ಹತ್ಯೆ

ಕರಾಚಿ; ಭಾರತ, ಅದರಲ್ಲೂ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಡೆಸಲು ಯುವಕರನ್ನು ಸಜ್ಜು ಮಾಡುತ್ತಿದ್ದ ಜೈಶ್‌ ಉಗ್ರ ಸಂಘಟನೆ ಉಗ್ರ ಮೌಲಾನಾ ರಹೀಂ ಉಲ್ಲಾ ತಾರೀಖ್ ಹತನಾಗಿದ್ದಾನೆ. ಪಾಕಿಸ್ತಾನದ ಕರಾಚಿಯ ಒರಂಗಿ ಪಟ್ಟಣ ಪ್ರದೇಶದಲ್ಲಿ ಅಪರಿಚಿತರು ಈ ಉಗ್ರನನ್ನು ಗುಂಡಿಕ್ಕಿ ಕೊಂದಿದ್ದಾರೆ. 

ಪಾಕಿಸ್ತಾನ, ಕೆನಡಾ ಸೇರಿ ಹಲವು ದೇಶಗಳಲ್ಲಿ ಮೋಸ್ಟ್‌ ವಾಂಟೆಡ್ಚ್‌ ಹತ್ಯೆಗಳು ಇತ್ತೀಚೆಗೆ ನಡೆಯುತ್ತಲೇ ಇವೆ. ಅದರ ಸರಣಿ ಇನ್ನೂ ಮುಂದುವರೆದಿದೆ. ಪಾಕಿಸ್ತಾನದಲ್ಲಿ ಹತ್ಯೆಯಾದ ಉಗ್ರ ತಾರೀಖ್‌ ಭಾರತಕ್ಕೆ ಬೇಕಾದ 20ನೇ ಮೋಸ್ಟ್‌ ವಾಂಟೆಡ್‌ ಉಗ್ರ ಎಂದು ತಿಳಿದುಬಂದಿದೆ.

ಈ ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದ. ಜೈಶ್-ಇ-ಮೊಹಮ್ಮದ್ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್‌ನ ಆಪ್ತನಾಗಿದ್ದ ತಾರೀಖ್ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಡೆಸಲು ಒಂದಷ್ಟು ಯುವಕರನ್ನು ನೇಮಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಉಗ್ರ ತಾರೀಖ್‌ ಪ್ರಾರ್ಥನೆ ಮಾಡಲೆಂದು ಒರಂಗಿ ಪಟ್ಟಣದಲ್ಲಿ ಮಸೀದಿಗೆ ತೆರಳುತ್ತಿದ್ದ. ಈ ವೇಳೆ ಅಪರಿಚಿತರು ದಾಳಿ ನಡೆಸಿ, ಆತನನ್ನು ಹೊಡೆದುರುಳಿಸಿದ್ದರು. 3 ದಿನ ಹಿಂದಷ್ಟೇ ಲಷ್ಕರ್ ಉಗ್ರ ಅಕ್ರಂ ಖಾನ್ ಘಜೈನನ್ನು ಕೊಲ್ಲಲಾಗಿತ್ತು.

 

Share Post