CrimeDistrictsUncategorized

ಮಾರ್ಕೋನಹಳ್ಳಿ ಡ್ಯಾಂನಲ್ಲಿ ಕೊಚ್ಚಿಹೋದ ಯುವಕ-ಯುವತಿ..!

ತುಮಕೂರು: ಇಲ್ಲಿನ ಕುಣಿಗಲ್‌ ಬಳಿಯ ಮಾರ್ಕೋನಹಳ್ಳಿ ಡ್ಯಾಂನಲ್ಲಿ ನೀರಿನಲ್ಲಿ ಮೋಜು ಮಾಡು ಹೋಗಿದ್ದ ಯುವಕ ಹಾಗೂ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಭಾನುವಾರದ್ದರಿಂದ ಪಿಕ್‌ನಿಕ್‌ಗೆಂದು ಬಂದಿದ್ದವರು ನೀರಿನಲ್ಲಿ ಆಟವಾಡಲು ಹೋಗಿದ್ದಾರೆ. ಈ ವೇಳೆ ಯುವಕ, ಯುವತಿ ಇಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆಂದು ಹೇಳಲಾಗುತ್ತಿದೆ.

ಮಾರ್ಕೋನಹಳ್ಳಿ ಡ್ಯಾಂ ಬೆಂಗಳೂರಿಗೆ ಹತ್ತರವಿದೆ. ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದರಿಂದ ಡ್ಯಾಂ ತುಂಬಿ ತುಳುಕುತ್ತಿದೆ. ಒಳ ಹರಿವು ಕೂಡಾ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ನೀರು ವೀಕ್ಷಿಸಲು ವೀಕೆಂಡ್‌ನಲ್ಲಿ ನೂರಾರು ಜನ ಬರುತ್ತಿದ್ದಾರೆ. ಕೆಲವರು ಎಚ್ಚರಿಕೆ ನೀಡಿದರೂ ನೀರಿನಲ್ಲಿ ಆಟ ಆಡಲು ಹೋಗುತ್ತಿದ್ದಾರೆ. ಹೀಗೆ, ಅಪಾಯ ಲೆಕ್ಕಸದೇ ನೀರಿಗಿಳಿಯಲು ಹೋದ ನಾಲ್ವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ಸ್ಥಳಕ್ಕೆ ಮುಳುಗು ತಜ್ಞರು, ಪೊಲೀಸರು ಆಗಮಿಸಿದ್ದು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ರಾತ್ರಿಯಾಗಿದ್ದರಿಂದಾಗಿ ಕಾರ್ಯಾಚರಣೆಗೆ ತೊಂದರೆಯಾಗಿದೆ ಎನ್ನಲಾಗುತ್ತಿದೆ. ನಾಪತ್ತೆಯಾದವರನ್ನು ಪರ್ವೇಜಾ (೨೦), ಸಾಧಿಕ್‌ (೨೧) ಎಂದು ತಿಳಿದುಬಂದಿದೆ.

Share Post