BengaluruCrime

ತಡ ರಾತ್ರಿ ಐಟಿ ಭರ್ಜರಿ ಕಾರ್ಯಾಚರಣೆ; ಬೆಡ್‌ರೂಂನಲ್ಲಿತ್ತು 42 ಕೋಟಿ ಕ್ಯಾಶ್‌!

ಬೆಂಗಳೂರು; ಕೆಲ ದಿನಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಆದ್ರೆ ಕಳೆದ ತಡರಾತ್ರಿ ನಡೆದ ದಾಳಿಯಲ್ಲಿ ಭಾರಿ ಕುಳ ಬಲೆಗೆ ಬಿದ್ದಿದೆ. ಮನೆಯೊಂದರ ಬೆಡ್‌ ರೂಮ್‌ನಲ್ಲಿ ಬರೋಬ್ಬರಿ 42 ಕೋಟಿ ರೂಪಾಯಿ ಕ್ಯಾಶ್‌ ಸಿಕ್ಕಿದೆ. ರಟ್ಟಿನ ಬಾಕ್ಸ್‌ನಲ್ಲಿ ಗರಿಗರಿ 5೦೦ ರೂಪಾಯಿ ನೋಟುಗಳ ಕಂತೆಗಳನ್ನು ಜೋಡಿಸಿಡಲಾಗಿತ್ತು. ಭಾರಿ ಮೊತ್ತದ ಆ ಹಣ ನೋಡಿ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. 

ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್.ಅಂಬಿಕಾಪತಿ ಹಾಗೂ ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ದಂಪತಿ ಮನೆಯಲ್ಲಿ ಈ ಕ್ಯಾಶ್‌ ಪತ್ತೆಯಾಗಿದೆ.  23 ರಟ್ಟಿನ ಬಾಕ್ಸ್‌ಗಳಲ್ಲಿ 500 ರೂಪಾಯಿ ನೋಟುಗಳನ್ನು ತುಂಬಿಸಿಡಲಾಗಿತ್ತು. ಭಾರಿ ಮೊತ್ತದ ಹಣವನ್ನು ನೋಡಿ ಅಧಿಕಾರಿಗಳು ಸುಸ್ತಾಗಿದ್ದಾರೆ. ಆ ಹಣವನ್ನು ಸೀಜ್‌ ಮಾಡಿದ್ದಾರೆ.

ಅಶ್ವಥಮ್ಮ ಅವರು ವಾರ್ಡ್ ನಂಬರ್ 95ರಲ್ಲಿ ಕಾರ್ಪೋರೇಟರ್ ಆಗಿದ್ದರು. ಅವರು ಸುಲ್ತಾನ್ ಪಾಳ್ಯದಲ್ಲಿ ಮನೆಯಲ್ಲಿ ವಾಸವಿದ್ದು, ಅದೇ ಮನೆಯಲ್ಲಿ ಇಷ್ಟೊಂದು ಹಣ ಸಿಕ್ಕಿದೆ.  23 ರಟ್ಟಿನ ಬಾಕ್ಸ್‌ಗಳಲ್ಲಿ ಒಂದೊಂದು ರಟ್ಟಿನ ಬಾಕ್ಸ್‌ನಲ್ಲಿ 1ಕೋಟಿ 65 ಲಕ್ಷ ಹಣ ಕೂಡಿಡಲಾಗಿತ್ತು. ಅಷ್ಟೂ ಹಣವನ್ನ ತಮಿಳುನಾಡಿಗೆ ಸಾಗಾಟ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೆಲ ಗಂಟೆಗಳು ಲೇಟ್‌ ಮಾಡಿದ್ದಿದ್ದರೆ ಆ ಹಣ ಬೇರೆಡೆಗೆ ಸಾಗಾಟವಾಗಿಬಿಡುತ್ತಿತ್ತು.

ಐಟಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಅಡಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

 

Share Post