SportsUncategorized

Ind Vs Sa Test : ತಂಡದ ಆಯ್ಕೆಯ ಗೊಂದಲದಲ್ಲಿ ವಿರಾಟ್‌ ಕೊಹ್ಲಿ

ಸೆಂಚೂರಿಯನ್‌ : Ind Vs Sa Test ಬಾಕ್ಸಿಂಗ್‌ ದಿನದಂದು ಶುರುವಾಗಲಿದೆ. ದ.ಆಫ್ರಿಕಾ ಪಿಚ್‌ಗಳು ವೇಗದಿಂದ ಕೂಡಿದೆ. ಇದರಿಂದ ತಂಡದ ಆಯ್ಕೆ ಸ್ವಲ್ಪ ಕಠಿಣವಾಗಿದೆ. ಶುಭ್ಮನ್‌ ಗಿಲ್‌, ರೋಹಿತ್‌ ಶರ್ಮಾ, ರವಿಂದ್ರ ಜಡೇಜಾ ಅವರ ಅನುಪಸ್ಥಿತಿಯಲ್ಲಿ ಅವಕಾಶ ಪಡೆದಿರುವ ಯುವ ಆಟಗಾರರು ಪಂದ್ಯದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.

ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌, ಶಾರ್ದುಲ್‌ ಠಾಕುರ್‌, ಹನುಮಾ ವಿಹಾರಿ, ಈ ನಾಲ್ಕರಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬುದೇ ಭಾರಿ ಗೊಂದಲವಾಗಿದೆ. ಒಬ್ಬ ಬ್ಯಾಟ್ಸ್‌ಮೆನ್‌ ಅಥವಾ ಆಲ್ರೌಂಡರ್ ಅನ್ನು ಆಯ್ಕೆ ಮಾಡಬೇಕಾದ ಗೊಂದಲದಲ್ಲಿದ್ದಾರೆ ಕೊಹ್ಲಿ. ಆಫ್ರಿಕಾ ವಾತಾವರಣಕ್ಕೆ ಐವರು ವೇಗಿಗಳನ್ನು ಇಳಿಸುವುದು ಕೊಹ್ಲಿಗೆ ಅನಿವಾರ್ಯ. ಆದರೆ, ಹೀಗಾದಲ್ಲಿ ರಹಾನೆ ಅಥವಾ ವಿಹಾರಿ ಅವರನ್ನು ಕೈಬಿಡಬೇಕಾಗುತ್ತದೆ.

ರಹಾನೆ ಇತ್ತೀಚಿನ ದಿನಗಳಲಿ ಉತ್ತಮ ಪ್ರದರ್ಶನ ನೀಡದಿರುವುದು ಅವರಿಗೆ ಮುಳುವಾಗಿದೆ. ಕೆ.ಎಲ್‌ ರಾಹುಲ್‌ ಮತ್ತು ಮಯಾಂಕ್‌ ಅಗರ್ವಾಲ್‌ ಓಪನ್‌ ಮಾಡಲಿದ್ದಾರೆ. ಚೇತೇಶ್ವರ ಪೂಜಾರಾ ೩ನೇ ಕ್ರಮಾಂಕದಲ್ಲಿ ಆಡಿದರೆ ವಿರಾಟ್‌ ಕೊಹ್ಲಿ ೪ನೇ ಕ್ರಮಾಂಕದಲ್ಲಿ ಬರ್ತಾರೆ. ಪುಜಾರಾ ಅವರಿಗೂ ಇದು ಅಂತಿಮ ಅವಕಾಶದಂತೆ ಕಾಣ್ತಿದೆ. ೫ನೇ ಸ್ಥಾನಕ್ಕೆ ಈಗ ಪೈಪೋಟಿ ನಡೆದಿದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಂತಿದೆ: ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್/ಅಜಿಂಕ್ಯಾ ರಹಾನೆ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್/ಹನುಮಾ ವಿಹಾರಿ, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

Ind vs Sa Test

ವಿರಾಟ್‌ ಕೊಹ್ಲಿ ಗೆ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನ 

Share Post