Sports

IPL : ಬಿಸಿಸಿಐ ಮತ್ತು ಫ್ರಾಂಚೈಸಿಗಳ ಸಭೆ ಇಂದು

ಮುಂಬೈ : ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮತ್ತು ಫ್ರಾಂಚೈಸಿಗಳ ಸಭೆ ಇಂದು ನಡೆಯಲಿದೆ. ಇದರಲ್ಲಿ ಫ್ರಾಂಚೈಸಿಯ ಮುಖ್ಯಸ್ಥರು ಮತ್ತು ಬಿಸಿಸಿಐ ಆಡಳಿತ ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ.

ಫೆ ೧೨ ಮತ್ತು ೧೩ರಂದು ಆಟಗಾರರ ಹರಾಜಿನ ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಈಗ ಕೋವಿಡ್‌ ಕೇಸಸ್ ಹೆಚ್ಚುತ್ತಿರುವ ಕಾರಣ ಇದನ್ನು ಹೇಗೆ ಮಾಢಬೇಕು ಎಂಬುದನ್ನು ಇಂದು ಸಭೆಯಲ್ಲಿ ತೀರ್ಮಾನಿಸಲಾಗುವುದು.

ಭಾರತದಲ್ಲೇ ಟೂರ್ನಿ ಆಯೋಜಿಸುವುದು ಪ್ರಮುಖವಾದ ಗುರಿ ಹೊಂದಿರುವ ಬಿಸಿಸಿಐ ಕೋವಿಡ್‌ ಕೇಸ್‌ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಭಾರತದಲ್ಲಿ ಕೋವಿಡ್‌ ಮತ್ತಷ್ಟು ಉಲ್ಬಣಗೊಂಡಲ್ಲಿ ಕಳೆದ ವರ್ಷದಂತೆಯೇ ಪರ್ಯಾಯ ವ್ಯವಸ್ಥೆಯ ಮಾರ್ಗ ಹಿಡಿಯಬೇಕಾಗುತ್ತದೆ.

ಸಭೆಯ ಬಳಿಕ ಮೆಗಾ ಆಕ್ಷನ್‌ ಪ್ರಕ್ರಿಯೆ ಮತ್ತು ಟೂರ್ನಿ ಆಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ದೊರಕುವ ಸಾಧ್ಯತೆ ಇದೆ.

Share Post