Bengaluru

ತೃತೀಯ ಲಿಂಗಿಗಳಿಗೂ ಪೊಲೀಸ್‌ ನೇಮಕಾತಿಗೆ ಅರ್ಜಿ: ಕರ್ನಾಟಕ ದಿಟ್ಟ ಹೆಜ್ಜೆ

 

 

 

 

 

 

 

ಬೆಂಗಳೂರು: ಮಹಿಳಾ, ಪರುಷರು ಮಾತ್ರವಲ್ಲದೆ ತೃತೀಯ ಲಿಂಗಿಗಳು ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಹಕ್ಕಿದೆ ಎಂಬುದನ್ನು ಕರ್ನಾಟಕ ರಾಜ್ಯ ಸರ್ಕಾರ ಮತ್ತೊಮ್ಮೆ ಸಾಬೀತು ಮಾಡಿದೆ. ಕರ್ನಾಟಕ ರಾಜ್ಯ ಪೊಲೀಸ್‌ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು ಅದರಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಕೆಎಸ್‌ಆರ್‌ಪಿ ಮತ್ತು ಭಾರತೀಯ ರಿಸರ್ವ್‌ ಬೆಟಾಲಿಯನ್‌, ವಿಶೇಷ ಮೀಸಲು ಸಬ್‌ಇನಸ್ಸ್‌ಪೆಕ್ಟರ್‌ ಹುದ್ದೆಗೆ ಮಹಿಳೆಯರು, ಪುರುಷರು ಸೇರಿದಂತೆ ತೃತೀಯ ಲಿಂಗಿಗಳಿಗೂ ಅರ್ಜಿ ಅಹ್ವಾನ ಮಾಡಲಾಗಿದೆ. ಸರ್ಕಾರದ ಈ ದಿಟ್ಟ ಹೆಜ್ಜೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿವೆ.

ಸಾಮಾಜಿಕ ಕಾರ್ಯಕರ್ತೆ ನಿಶಾ, ವಕೀಲರಾದ ವೆಂಕಟೇಶ್‌ ಮತ್ತು ಎನ್‌ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸ್ಪಂದಿಸಿದ ಹೈಕೋರ್ಟ್‌ ಎಲ್ಲಾ ವರ್ಗಗಳ ನೇಮಕಾತಿಯಲ್ಲಿ ತೃತಿಯ ಲಿಂಗಿಗಳಿಗೆ ಶೇಕಡಾ.೧ರಷ್ಟು ಸಮಾನ ಮೀಸಲಾತಿ ನೀಡುವಂತೆ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶಕ್ಕೆ ತಲೆಬಾಗಿದ ಪೊಲೀಸ್‌ ಇಲಾಖೆ, ನೇಮಕಾತಿಯಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೂ ಅರ್ಜಿ ಆಹ್ವಾನ ನೀಡಿರುವುದು ಕರ್ನಾಟಕ ಮೊದಲ ರಾಜ್ಯವಾಗಿರುವುದರ ಜೊತೆಗೆ ಪ್ರಗತಿಪರ ಹೆಜ್ಜೆ ಇಟ್ಟಿದೆ.

Share Post