ಬ್ರಿಗೇಡ್ ರೋಡ್‌ನಲ್ಲಿ ನ್ಯೂ ಇಯರ್‌ಗೆ ಬ್ರೇಕ್ !
ಬೆಂಗಳೂರು: ಸಾಮಾನ್ಯವಾಗಿ ನ್ಯೂ ಇಯರ್ ಬಂತು ಅಂದರೆ ಸಾಕು ವಾರಗಟ್ಟಲೇ ಹಬ್ಬದ ವಾತವರಣ ಸೃಷ್ಠಿಯಾಗುತ್ತದೆ. ಎಲ್ಲಿ ನೋಡಿದ್ರೂ ಲೈಟಿಂಗ್ಸ್ ಝಗಮಗಗೊಳಿಸುತ್ತಿತ್ತು. ಹೀಗಾಗಿ ನ್ಯೂ ಇಯರ್ ಗೆ ಒಂದು ಕಳೆಬರುತ್ತಿತ್ತು. ಆ ದಿನ ಮಾತ್ರ ಸಿಲಿಕಾನ್ ಸಿಟಿ ಮಂದಿ ಸಖತ್ ಎಂಜಾಯ್ ಮಾಡುತ್ತಿದ್ದರು. ಆದರೆ ಈಗ ಕೊರೋನಾದಿಂದ ಬೆಂಗಳೂರು ಮಂದಿಗೆ ಸೆಲಬ್ರೇಷನ್ ಗೆ ಬ್ರೇಕ್ ಹಾಕಿದೆ. ಕಳೆದ ಮೂರು ವರ್ಷಗಳಿಂದ ಜನರೆಲ್ಲ ನ್ಯೂ ಇಯರ್ ಗೆ ಫ್ಯಾಮಿಲಿ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಕೊರೋನಾ ಸೋಂಕಿನ ಪ್ರಕರಣ ಕಡಿಮೆಯಾಗಿದ್ದು, ರೂಪಾಂತರಿ ಒಮಿಕ್ರಾನ್ ಹೆಚ್ಚಳವಾಗುತ್ತಿದೆ. ಹೀಗಾಗಿ ಈ ಸಲ ಸೆಲಬ್ರೇಷನ್ ಗೆ ತಡೆ ಹಿಡಿಯಲಾಗಿದೆ. ಈ ಬಾರಿ ಸರ್ಕಾರ ಪರ್ಮಿಷನ್ ಕೊಟ್ರೂ ಸೆಲಬ್ರೇಷನ್ ಮಾಡೋಲ್ಲವೆಂದು ಬ್ರಿಗೇಡ್ ರೋಡ್ ಅಸೋಸಿಯೇಷನ್ ನಿರ್ಧಾರಿಸಿದ್ದಾರೆ. ಬ್ರಿಗೇಡ್ ರೋಡ್‌ನಲ್ಲಿ ಲೈಟಿಂಗ್ , ಡೆಕೊರೇಷನ್ ಗೂ ತಡೆಹಾಕಿದ್ದಾರೆ. ಕೊರೋನಾ ಕಡಿವಾಣ ಹಾಕುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.