Sports

ಬೆಂಗಳೂರಿನಲ್ಲಿ ನಡೆಯಲಿದೆಯಾ ಐಪಿಎಲ್‌ ಹರಾಜು..?

ನವದೆಹಲಿ: ಐಪಿಎಲ್‌ ಟೂರ್ನಿ ೨೦೨೨ರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಫೆಬ್ರವರಿ 7 ಮತ್ತು 8ರಂದು ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವರ್ಷ ಐಪಿಎಲ್‌ನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಸಂಜೀವ್ ಗೋಯೆಂಕಾ ಒಡೆತನದ ಲಖನೌ ಮತ್ತು ವೆಂಚರ್ ಕ್ಯಾಪಿಟಲ್ಸ್‌ ಫರ್ಮ್ ಸಿವಿಸಿ ಮಾಲೀಕತ್ವದ ಅಹಮದಾಬಾದ್ ತಂಡಗಳು ಪದಾರ್ಪಣೆ ಮಾಡಲಿವೆ. ಈ ತಂಡಗಳಿಗೂ ಆಟಗಾರರ ಆಯ್ಕೆ ನಡೆಯಲಿದೆ. ಈಗಾಗಲೇ ಟೂರ್ನಿಯಲ್ಲಿರುವ ಉಳಿದ ಎಂಟು ತಂಡಗಳು ಬಿಡುಗಡೆಗೊಳಿಸಲಾದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಈಗಾಗಲೇ ತಮ್ಮ ತಂಡಗಳಲ್ಲಿರುವ ಆಟಗಾರರನ್ನು ಬಿಡುಗಡೆ ಮಾಡುವ ನಿಯಮದ ಕುರಿತು ಕೆಲವು ಫ್ರ್ಯಾಂಚೈಸಿ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

Share Post