ನಾಯಕ ಸ್ಥಾನದಿಂದ ಇಳಿಯಲು ಕೊಹ್ಲಿಗೆ ೪೮ ಗಂಟೆಗಳ ಅವಕಾಶ ನೀಡಿತ್ತು ಬಿಸಿಸಿಐ
ಬೆಂಗಳೂರು : ಭಾರತ ಕ್ರಿಕೆಟ್ ತಂಡದ ನಾಯಕನಾಗಿ ರೋಹಿತ್ ಶರ್ಮ ಅವರನ್ನು ಬಿಸಿಸಿಐ ನೇಮಿಸಿದೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ಮುಂದುವರೆಯಲಿದ್ದಾರೆ. ಮುಂದಿನ ದಕ್ಷಿಣ ಆಫ್ರಿಕಾ ಪ್ರವಾಸದಿಂದ ರೋಹಿತ್ ಶರ್ಮ ಅವರು ಅಧಿಕೃತವಾಗಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಬಿಸಿಸಿಐ ನೀಡಿತ್ತು 48ಗಂಟೆಗಳ ಗಡುವು
ಏಕದಿನ ಕ್ರಿಕೆಟ್ ನಾಯಕ ಸ್ಥಾನದಿಂದ ಕೆಳಗಿಳಿಯುವಂತೆ ಬಿಸಿಸಿಐ ವಿರಾಟ್ ಕೊಹ್ಲಿಗೆ ಆದೇಶ ನೀಡಿತ್ತು. ಜೊತೆಗೆ ೪೮ ಗಂಟೆಗಳ ಒಳಗೆ ನೀವೇ ಘೋಷಿಸಿ ಎಂದು ತಿಳಿಸಿತ್ತು. ೪೮ ಗಂಟೆಯಾದರೂ ವಿರಾಟ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಗಡುವು ಮುಗಿದ ತಕ್ಷಣ ಬಿಸಿಸಿಐ ಸ್ವಯಂ ಘೋಷಣೆ ಮಾಡಿದೆ.
ಅಗ್ರೆಸೀವ್ ಕ್ಯಾಪ್ಟನ್ ಅನಿಸಿಕೊಂಡರೂ ಯಾವುದೇ ಐಸಿಸಿ ಟ್ರೋಫಿ ತರಲಿಲ್ಲ ವಿರಾಟ್
ವಿರಾಟ್ ಕೊಹ್ಲಿಯವರು ಅಗ್ರೆಸೀವ್ ಕ್ಯಾಪ್ಟನ್ ಎನಿಸಿಕೊಂಡರೂ ಭಾರತಕ್ಕೆ ಯಾವುದೇ ಐಸಿಸಿ ಟ್ರೋಫಿ ತರಲಿಲ್ಲ. ವಿರಾಟ್ ಅವರ ನಾಯಕ ಸ್ಥಾನಕ್ಕೆ ಕುತ್ತು ಬರಲು ಇದೂ ಒಂದು ಕಾರಣವಾಯಿತು.